Showing posts with label KRYSTYNA MILOBEDZKA - I lose verbs quickest - ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ. Show all posts
Showing posts with label KRYSTYNA MILOBEDZKA - I lose verbs quickest - ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ. Show all posts

Sunday, February 13, 2022

ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ - KRYSTYNA MILOBEDZKA's 'I lose verbs quickest'

ಮೂಲ: I lose verbs quickest

ಕವಿ: ಕ್ರಿಸ್ಟೀನಾ ಮಿಲೊಬೆಡ್ಜ಼್ಕ, ಪೋಲಂಡ್ 

KRYSTYNA MILOBEDZKA, POLAND

Translated from the Polish by ELŽBIETA WÓJCIK-LEESE 

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


 

ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ

 

ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ, ನಾಮಪದಗಳು, ವಸ್ತುಗಳು 

ಉಳಿಯುವುದು

ಈಗ ವೈಯಕ್ತಿಕ ಸರ್ವನಾಮಗಳು ಮಾತ್ರ (ಬಹಳಷ್ಟು ನಾನು, ಮತ್ತೂ ಮತ್ತೂ ನಾನು)

ಮತ್ತೆ ಹೆಸರುಗಳು? ಮಾಯ, ಸಂಯೋಗಪದಗಳು ಮಾಯ

ಮೂರು ಪದಗಳು, ಎರಡು ಪದಗಳು

ಕೊನೆಗೆ ನನ್ನ – ನನ್ನದು ನನ್ನೊಳಗೆ 

ನನ್ನದರ ಜತೆ ನಾನು – 

ಜಗತ್ತು

 

ನಾನು ಉತ್ತಮ ಮತ್ತು ಕೊನೆಯ ಪುರುಷದಲ್ಲಿ

*****



ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...