Thursday, October 15, 2020

BELAGAAGUTTAA MALE ಬೆಳಗಾಗುತ್ತಾ ಮಳೆ -- ELIZABETH BISHOP'S "RAIN TOWARDS MORNING"

 ಇಂಗ್ಲಿಷ್ ಮೂಲ: Four Poems -- II / Rain Towards Morning

ಕವಿ: ಎಲಿಜ಼ಬೆತ್ ಬಿಷಪ್ Elizabeth Bishop, USA

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ನಾಕು ಕವನಗಳು -- ೨/ಬೆಳಗಾಗುತ್ತಾ ಮಳೆ


ಬೆಳಕಿನ ಮಹಾ ಪಂಜರ ಆಕಾಶದಲ್ಲಿ ಒಡೆದು ಚೂರಗಿದೆ,

ಲಕ್ಷಾನುಗಟ್ಟಲೆ ಹಕ್ಕಿಗಳನ್ನು ಬಿಡುಗಡೆಗೊಳಿಸಿ, 

ಸ್ವಛ್ಚಂದ ಏರುತ್ತಿರುವ ಅವುಗಳ ನೆರಳುಗಳು ಮರಳುವುದಿಲ್ಲ. 

ನಂತರ ಎಲ್ಲ ತಂತಿಗಳೂ ಕಳಚಿ ಬೀಳುತ್ತವೆ.

ಪಂಜರವಿಲ್ಲ, ಹೆದರಿಕೆ ಹುಟ್ಟಿಸುವ ಹಕ್ಕಿಗಳಿಲ್ಲ; 

ಮಳೆ ಈಗ ಪ್ರಕಾಶಮಾನವಾಗುತ್ತಿದೆ.  ಅವುಗಳ 

ತುರಂಗದ ಒಗಟಿನೊಂದಿಗೆ ಒದ್ದಾಡಿದ, 

ಒಂದು ಅನಿರೀಕ್ಷಿತ ಮುತ್ತಿನಿಂದ ಅದನ್ನು 

ಬಿಡಿಸಿದ ಮುಖ ಮಂದವಾಗಿದೆ,

ಮಚ್ಚೆ ಹರಡಿದ ಅಶಂಕಿತ ಕೈಗಳು ಬೆಳಗಿವೆ.

*****


Monday, October 12, 2020

SAMBHASHANE ಸಂಭಾಷಣೆ -- ELIZABETH BISHOP'S "CONVERSATION"

ಇಂಗ್ಲಿಷ್ ಮೂಲ: Four Poems -- I/Conversation 

ಕವಿ: ಎಲಿಜ಼ಬೆತ್ ಬಿಷಪ್ Elizabeth Bishop, USA

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ನಾಕು ಕವನಗಳು -- ೧/ಸಂಭಾಷಣೆ

ಹೃದಯದಲ್ಲಿನ ತಳಮಳ

ಪ್ರಶ್ಣೆಗಳನ್ನು ಕೇಳುತ್ತಲೇ ಇರುತ್ತೆ.

ನಂತರ ನಿಲ್ಲಿಸುತ್ತೆ, ಮತ್ತೆ ಅದೇ ಸ್ವರದ ಧ್ವನಿಯಲ್ಲಿ

ಉತ್ತರಗಳನ್ನು ಕೊಡಲು ತೊಡಗುತ್ತದೆ.

ಯಾರಿಂದಲೂ ವ್ಯತ್ಯಾಸ ಹೇಳಲಾಗದು.


ಅನಮಾಯಕವಾಗಿ, ಈ ಸಂಭಾಷಣೆಗಳು ಪ್ರಾರಂಭವಾಗುತ್ತವೆ,

ಮೆಲ್ಲನೆ, ಎಲ್ಲ ಇಂದ್ರಿಯಗಳನ್ನು ಸೇರಿಸಿಕೊಳ್ಳುತ್ತವೆ,

ಅರೆ ಮನಸ್ಸಿನಿಂದ ಮಾತ್ರ.

ಆಮೇಲೆ, ಯಾವ ಆಯ್ಕೆಯೂ ಇರುವುದಿಲ್ಲ,

ಆಮೇಲೆ, ಯಾವ ಅರ್ಥವೂ ಇರುವುದಿಲ್ಲ;

-- ಎಲ್ಲಿಯವರೆಗೆಂದರೆ, ಒಂದು ಹೆಸರು ಹಾಗೂ

ಅದರ ಎಲ್ಲ ಲಕ್ಷಣಗಳೂ ಒಂದೇ ಆಗುತ್ತವೆ.

*****


SULABHADA KASUBALLA KAVITE ಸುಲಭದ ಕಸುಬಲ್ಲ ಕವಿತೆ -- B. N. HARISH BOLOORU'S TULU POEM "SULABADA KASUBATTH KABITE"

ತುಳು ಮೂಲ: "ಸುಲಬದ ಕಸುಬತ್ತ್ ಕಬಿತೆ"

ಕವಿ: ಬಿ. ಎನ್. ಹರೀಶ್ ಬೋಳೂರು

ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್

                        ಸುಲಭದ ಕಸುಬಲ್ಲ ಕವಿತೆ

ನಾನೊಂದು ನೋಡಿದೆ ತುಳುನಾಡ ಕವಿತೆ

ನನಗಿರಲಿಲ್ಲ ಕಸುಬು ಅವತ್ತು ಬೇರೆ

ಕವಿತೆ ಬರೆಯುವುದು ಸುಲಭವಲ್ವಾ...

ಯಾವಾಗಲೂ ಅನ್ಕೊತಾನೇ ಇದ್ದೆ


                     ಒಮ್ಮೊಮ್ಮೆ ಕಣ್ಣು ಹಾಯಿಸಿ ನೋಡಿದೆ

                     ಯಾಕೆ ಬರೆಯುತ್ತಾರಪ್ಪಾ ಅನ್ಕೋಂಡೆ

                     ನಾನು ಸಹ ಬರೆಯಬೇಕೊಂದು ಕವಿತೆ

                     ಪೆನ್ನು ಕಾಗದ ತೆಗೆದುಕೊಂಡು ಬಂದೆ


"ಎನಿಸಿದ್ದು ಗಂಡು ಹುಟ್ಟಿದ್ದು ಹೆಣ್ಣಾಯ್ತು"

ನನ್ನ ಅವಸ್ಥೆ ನೋಡಿ ಹಾಗಾಯ್ತು

ತಿರುಳಲ್ಲಿ ಮೊಳಕೆ ಒಡಿಯಲಿಲ್ಲ

ಪೆನ್ನಲ್ಲಿ ಕವಿತೆ ಹುಟ್ಟಲಿಲ್ಲ


                       ಮತ್ತೊಮ್ಮೆ ನೋಡಿದೆ ತುಳುನಾಡ ಕವಿತೆ

                       ಮನಸಿಟ್ಟು ಇನ್ನೊಂದ್ಸಲ ಓದಿದೆ

                       ತಿಳಿದುಕೊಂಡೆ ನನ್ನಲ್ಲಿರುವ ಕೊರತೆ

                       ಛೆ! ಕವಿತೆ ಬರೆಯುವುದು ಸುಲಭವಲ್ಲ ರೀ


ಕತ್ತಲು ಹಗಲು ಕನಸುಕಟ್ಟುತ್ತಾನೇ ಇದ್ದೆ

ಬರೆಯಬೇಕೊಂದು ತುಳುನಾಡ ಕವಿತೆ

ಹುಟ್ಟಲಿಲ್ಲ ಕವಿತೆ ನನಗಾಯ್ತು ವ್ಯಥೆ

ಅಬ್ಬ! ಸುಲಭದ ಕಸುಬಲ್ಲರೀ ಕವಿತೆ


                      ಚಿದಂಬರ ರಹಸ್ಯ ನನಗಾಯ್ತುರೀ

                      ತುಳುನಾಡ ಕವಿತೆ ಓದುತ್ತಾ ಹೋದೆ

                      ಪೆನ್ನು ಬರೆಯಿತು ಕಾಗದ ಕಪ್ಪಯಿತು

                      ಕಡೆಗೂ ಕವಿತೆ ಮೂಡಿ ಬಂತು

*****


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...