Tuesday, October 26, 2021

ಆತ್ಮಕತೆಗಾರ AATMAKATHEGAARA - HANS MAGNUS ENZENSBERGER's "THE AUTOBIOGRAPHER"

ಮೂಲTHE AUTOBIOGRAPHER

ಕವಿಹನ್ಸ ಮಾಗ್ನುಸ್ ಎನ್ಸೆನ್ಸಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by MARTIN CHALMERS

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಆತ್ಮಕತೆಗಾರ

 

ಅವನು ಬೇರೆಯವರ ಬಗ್ಗೆ ಬರೆಯುತ್ತಾನೆ,

ಅವನು ತನ್ನ ಬಗ್ಗೆನೇ ಬರೆಯುತ್ತಿರುವಾಗ.

ಅವನು ತನ್ನ ಬಗ್ಗೆ ಬರೆಯುತ್ತಿರುತ್ತಾನೆ,

ಅವನು ತನ್ನ ಬಗ್ಗೆ ಬರೆಯದಿರುವಾಗ.

ಅವನು ಬರೆಯುವಾಗ, ಅವನಿಲ್ಲ ಅಲ್ಲಿ.

ಅವನು ಅಲ್ಲಿರುವಾಗ, ಅವನು ಬರೆಯುತ್ತಿಲ್ಲ.

ಅವನು ಮಾಯವಾಗುತ್ತಾನೆ, ಬರೆಯಲಿಕ್ಕಾಗಿ.

ಅವನು ಬರೆಯುತ್ತಾನೆ, ಮಾಯವಾಗಲಿಕ್ಕೆ.

ಅವನು ಮಾಯವಾಗಿದ್ದಾನೆ

ಅವನು ಬರೆದದ್ದರಲ್ಲಿ.

*****


ನಯಾಗರ ಜಲಪಾತ NIAGARA JALAPATA - GOPAL HONNALGERE'S 'NIAGARA FALLS'

ಮೂಲ: NIAGARA FALLS

ಕವಿ: ಗೋಪಾಲ ಹೊನ್ನಲಗೆರೆ, ಕನ್ನಡ ಮೂಲದ ಇಂಗ್ಲಿಷ್ ಭಾಷಾ ಕವಿ

GOPAL HONNALGERE, Indian-English poet of Kannada origin

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ನಯಾಗರ ಜಲಪಾತ

 

ನಯಾಗರ ಜಲಪಾತ ನಯಾಗರ ಜಲಪಾತ

ಗರ್ಜಿಸುತ್ತ ಗುಡುಗುತ್ತ ನುಗ್ಗುತ್ತ

ನೀರು ಬೀಳುತ್ತೆ ನೀರು ಬೀಳುತ್ತೆ

ನಯಾಗರ ಸುರಿಯುತ್ತೆ ನೀರು ಸುರಿಯುತ್ತೆ

ನಯಾಗರ ಜಲಪಾತದ ನುಗ್ಗುವ 

ನೀರಿನಲಿ ಪದಗಳೆಲ್ಲವೂ

ನೀರ್‌ಗುಳ್ಳೆಗಳ ಹಾಗೆ

ಅಂದ್ರೆ, ಇಲ್ಲಿಯ ನೀರಿನ ಅಬ್ಬರದಲಿ

ಬುದ್ಧ ಏನಾದರೂ ಎಲ್ಲ ತೊರೆದು 

ಬತ್ತಲೆಯಾಗಿ ಕಿವಿಗೆ ಹತ್ತಿ ತುರಿಕಿಕೊಳ್ಳದೇ

ಒಂದೇ ಕ್ಷಣ ನಿಂತನೆಂದಾದರೂ

ಈ ನಯಾಗರ ಜಲಪಾತದ ನೀರಿನ 

ಅಬ್ಬರಕ್ಕೆ ಅಂವ ಕಿವುಡಾಗುವ

 

ನಯಾಗರ ಜಲಪಾತ ನಯಾಗರ ಜಲಪಾತ

ನೀರು ಬೀಳುತ್ತೆ ನೀರು ಬೀಳುತ್ತೆ

ನಯಾಗರ ಜಲಪಾತದ ಹತ್ತಿರ ವಾಸಿಸುವ

ಇಂಜಿನಿಯರಗಳು ಕೆಲಸಗಾರರು

ಅವರ ಹೆಂಡರು ಅವರ ಮಕ್ಕಳು

ಈ ಜಲಪಾತದ ಅಬ್ಬರವ 

ಪೂರಾ ಕುಡಿದಿದ್ದಾರೆ

ಅವರಿಗೇನೂ ಆಗಲ್ಲ

ನಯಾಗರ ಸುರಿಯುತ್ತೆ ನೀರು ಸುರಿಯುತ್ತೆ

ಅವರ ನಿತ್ಯದ ದಿನಚರಿಯಂತೆ

 

 

ನಯಾಗರ ಬೀಳುತ್ತೆ ನಯಾಗರ ಬೀಳುತ್ತೆ

ನೀರು ಬೀಳುತ್ತೆ ನೀರು ಬೀಳುತ್ತೆ

ಆದರೆ ಒಂದು ಸಲ ಮಾತ್ರ

ಕೆಲವು ಕ್ಷಣಗಳ ಮಟ್ಟಿಗೆ 

ನಯಾಗರ ಜಲಪಾತ

ನಿಜಕ್ಕೂ ಬಿದ್ದೇ ಬಿಟ್ಟಿತ್ತು

ನೀರು ಬೀಳುವುದು ನಿಂತಿತು

ಬುದ್ಧನ ಮಹಾ ಮೌನದ ಸನ್ನಿಧಿಯಲ್ಲಿ

ಸೃಷ್ಟಿಯು ಉಗ್ರವಾದ ಎಡತಿರುವು 

ತೆಗೆದುಕೊಂಡಿರುವಂತೆ 

ಇಂಜಿನಿಯರಗಳು ಕೆಲಸಗಾರರು

ಅವರ ಹೆಂಡರು ಅವರ ಮಕ್ಕಳು

ಕಿರುಚಿದರು ಮೂರ್ಛೆಹೋದರು

ಈ ನಿಶ್ಶಬ್ಧವು ಅವರ ತಲೆಗೆ 

ಅಪ್ಪಳಿಸಿದ ಒಂದು 

ಮಹಾ ಸಿಡಿಲೇನೋ ಎಂಬಂತೆ.

 

*****


Sunday, October 24, 2021

ಪದಗಳು, ಆ ಪದಗಳು PADAGALU, AA PADAGALU - HANS MAGNUS ENZENSBERGER's "THE WORDS, THE WORDS"

ಮೂಲTHE WORDS, THE WORDS

ಕವಿಹನ್ಸ ಮಾಗ್ನುಸ್ ಎನ್ಸೆನ್ಸಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by ESTHER KINSKY

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಪದಗಳು, ಆ ಪದಗಳು

 

ನಿನ್ನನ್ನು ಹುಡುಕಿಕೊಂಡು ಬರುತ್ತಾವೆ

ನಿನಗೆ ನಿದ್ದೆ ಹತ್ತುವ ಮುಂಚೆ,

ನಿನ್ನ ಮಂಚದ ಬಳಿ ಬಂದು ಕೂರುತ್ತಾವೆ

ನೀನು ಕರೆಯದೇನೇ.

ಎಲ್ಲಿಂದ ಬರುತ್ತಾವೆ ಇವು?

ಬಂದಿರಬಹುದೋ ಇವು 

ಭೂಗತ ರೈಲುಗಳಿಂದ 

ಆಕಾಶದಿಂದ 

ಕಳೆದ ಶತಮಾನದಿಂದ?

 

ಮರ್ಮರಿಸುವ, ಗುಂಯ್‌ಗುಡುವ ಕೂಟವಿದು:

ನಿನಗೆ ಢಿಕ್ಕಿಹೊಡೆಯುತ್ತಾವೆ ತೋರ ಪದಗಳು,

ತಮ್ಮದೇ ರೂಪದ ನೆರಳುಗಳಾಗಿರುವ ಗಂಭೀರ ಪದಗಳು,

ಕಣ್‌ಸೆಳೆಯದ ಪದಗಳು

(ಓ ಸರಿ ಸರಿ, ಹೌದಾ, ಎಷ್ಟದರೂ ಅಷ್ಟೇ, ಹಾಗಾದರೆ),

ಹಲುಬುವ ಪ್ರೇತಪದಗಳು,

ಚಿಂದಿಯುಟ್ಟ ಪದಗಳು,

ಭಕ್ತಿನಿಷ್ಠ, ಅಶ್ಲೀಲ, ಕರ್ಣಕೊರೆಯುವ ಪದಗಳು – 

ಹೇಗವು ಬಯ್ಯುತ್ತಾವೆ, ಚೆಲ್ಲಾಟವಾಡುತ್ತಾವೆ, ಪಿಸುಗುಟ್ಟುತ್ತಾವೆ ನೋಡು!

 

ನಿನಗೆ ಹುಚ್ಚು ಹಿಡಿಸಲಿಕ್ಕೂ ಸಾಕು

ನಿನ್ನ ಒಳಕಿವಿಯಲ್ಲಿ ಕಿಕ್ಕಿರಿಯುತ್ತಿರುವ

 ಸೊಳ್ಳೆಗಳ ಧೂಮ.

ನೀನು ಬರಿದೇ ರೊಚ್ಚಿಗೆದ್ದು ದಿಕ್ಕೆಲ್ಲ ಅರಚುವೆ,

ನಿದ್ದೆಯ ಪ್ರಶ್ನೆಯೇ ಇಲ್ಲ,

ಲೈಟಿನ ಸ್ವಿಚ್ ಆನ್ ಮಾಡು, ಎದ್ದು ನಿಲ್ಲು 

ನಿಶ್ಶಬ್ಧವ ಕಂಡು ದಿಗಿಲಾಗು!

 

*****


ಭೂಮಿ-ಬಣ್ಣದ ಗೀತ BHUMI-BANNADA GEETA - HANS MAGNUS ENZENSBERGER's "AN EARTH-COLOURED DITTY"

ಮೂಲAN EARTH-COLOURED DITTY

ಕವಿಹನ್ಸ ಮಾಗ್ನುಸ್ ಎನ್ಸೆನ್ಸಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by ESTHER KINSKY

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಭೂಮಿ-ಬಣ್ಣದ ಗೀತ

 

ಮೃತ್ಯು ಬಗ್ಗೆ ಇನ್ನೊಂದು ಕವನ, ಇತ್ಯಾದಿ ಇತ್ಯಾದಿ – 

ಅಗತ್ಯವಾಗಿ, ಆದರೆ ಆ ಆಲೂಗಡ್ಡೆಯ ಬಗ್ಗೆ ಏನನ್ನುತ್ತೀರಿ?

ತಿಳಿದಿರುವ ಕಾರಣಗಳಿಗಾಗಿ ಹೊರೆಸ್ ಆಗಲಿ 

ಹೋಮರ್ ಆಗಲಿ ಅದನ್ನು ಉಲ್ಲೇಖಿಸಲಿಲ್ಲ, ಆ ಆಲೂಗಡ್ಡೆಯನ್ನು. 

ಆದರೆ ರಿಲ್ಕ ಅಥವಾ ಮಲಾರ್ಮೆ ಗೆ ಏನಾಯಿತು?

ಅದು ಅವರನ್ನು ತಟ್ಟಲಿಲ್ಲವೇ, ಆ ಆಲೂಗಡ್ಡೆ?

ಅದು ಕೆಲವೇ ಪದಗಳ ಜತೆ ಪ್ರಾಸವಾಡಬಲ್ಲುದೆಂಬ 

ಕಾರಣವೇ, ಆ ಭೂಮಿ-ಬಣ್ಣದ ಆಲೂಗಡ್ಡೆ?

ಅದು ಸ್ವರ್ಗದ ಬಗ್ಗೆ ಹೆಚ್ಚೇನೂ ಮಂಡೆಬಿಸಿ ಮಾಡಿಕೊಳಲ್ಲ.

ಅದು ತಾಳ್ಮೆಯಿಂದ ಕಾದಿರುತ್ತೆ, ಆ ಆಲೂಗಡ್ಡೆ,

ನಾವದನ್ನು ಬೆಳಕಿನೆಡೆಗೆ ಎಳೆದು ತಂದು

ಬೆಂಕಿಯಲ್ಲಿ ಎಸೆಯುವವರೆಗೂ.  ಆ ಆಲೂಗಡ್ಡೆ

ತಲೆಕೆಡಿಸಿಕೊಳ್ಳಲ್ಲ, ಆದರೆ ಅದರ ತಾಪ

ಹೆಚ್ಚಾಯಿತೇನೋ ಕವಿಗಳಿಗೆ, ಆ ಆಲೂಗಡ್ಡೆಯ ತಾಪ?

ಇರಲಿ, ಸ್ವಲ್ಪ ಹೊತ್ತು ಕಾಯುವ ನಾವು

ಅದನ್ನು ತಿನ್ನುವವರೆಗೂ, ಆ ಆಲೂಗಡ್ಡೆಯನ್ನು,

ಹಾಡೋಣ ಅದರ ಬಗ್ಗೆ, ಆಮೇಲೆ ಮರೆತು ಬಿಡೋಣ.

 

*****


ತಕ್ಕಡಿ TAKKADI - GOPAL HONNALGERE's "BALANCE"

ಮೂಲ: BALANCE 

ಕವಿ: ಗೋಪಾಲ ಹೊನ್ನಲಗೆರೆ, ಕನ್ನಡ ಮೂಲದ ಇಂಗ್ಲಿಷ್ ಭಾಷಾ ಕವಿ

GOPAL HONNALGERE, Indian-English poet of Kannada origin

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ತಕ್ಕಡಿ

 

ಇದು ಒಂದು ತಕ್ಕಡಿ

 

ಅಲ್ಲಿ

ತಕ್ಕಡಿಯ ಎಡಭಾಗದ ತಟ್ಟೆಯಲ್ಲಿ,

ಕೆಲವರು ದಿಜನರು

ಅವರೊಂದು ಹಂದಿಯನ್ನು ತೂಕಮಾಡಬೇಕಂತೆ.

ಅವರ ಹತ್ತಿರ ಒಂದು ದೊಡ್ಡ ಆದಿಕಾಲದ ತಕ್ಕಡಿಯಿದೆ

ಆದರೆ ತೂಗಲು ತೂಕಗಳಿಲ್ಲ.  ಅವರು

ಹಂದಿಯನ್ನು ತಕ್ಕಡಿಯ ಎಡ ತಟ್ಟೆಯಲ್ಲಿಡುತ್ತಾರೆ.

ಮತ್ತೊಂದು ತಟ್ಟೆಯಲ್ಲಿ

ಕೆಲ ಕಲ್ಲುಗಳು.  ತೂಕ ಸರಿಸುಮಾರು

ಸಮನಾದಾಗ, ಅವರು ಕಲ್ಲುಗಳನ್ನು

ಚೀಲದಲ್ಲಿ ತುಂಬುತ್ತಾರೆ, ಅವರು ಕೈಗಳಿಂದ

ಚೀಲವನ್ನು ಎತ್ತುತ್ತಾರೆ, ಅದರ ತೂಕದ 

ಅಂದಾಜು ಮಾಡುತ್ತಾರೆ.

 

ಇಲ್ಲಿ

ತಕ್ಕಡಿಯ ಬಲಭಾಗದ ತಟ್ಟೆಯಲ್ಲಿ 

ಕೆಲವರು ಸಾಹಿತ್ಯ ವಿಮರ್ಶಕರು

ಅವರ ಹತ್ತಿರ ಒಂದು ಸಣ್ಣ ಪರಿಷ್ಕೃತ ತಕ್ಕಡಿಯಿದೆ.

ಆದರೆ, ಅವರಲ್ಲಿಯೂ ತೂಗಲು ತೂಕಗಳಿಲ್ಲ.

ಕವಿಯೊಬ್ಬ ತನ್ನ ಇಪ್ಪತ್ತು ಕವನ ಸಂಕಲನಗಳನ್ನು ತರ್ತಾನೆ

ಅವು ಅವನ ಜೀವಮಾನದ ಸಾಹಿತ್ಯ ಕೃಷಿ.  

ಅವನ ಪುಸ್ತಕಗಳನೆಲ್ಲವನ್ನೂ

ಅವರು ಎಡ ತಟ್ಟೆಯಲ್ಲಿ ಇಡುತ್ತಾರೆ.

ಮತ್ತೊಂದು ತಟ್ಟೆಯಲ್ಲಿ ಅವರು 

ಮೆಲ್ಲಮೆಲ್ಲನೆ ಸಾಹಿತ್ಯ ವಿಮರ್ಶೆಯ ಪುಸ್ತಕಗಳನ್ನು

ಒಂದೊಂದೇ ಸೇರಿಸುತ್ತಾ ಹೋಗುತ್ತಾರೆ

ತೂಕ ಸಮನಾಗುವವರೆಗೂ.

ಆಮೇಲೆ ಅವರು ವಿಮರ್ಶೆಯ ಪುಸ್ತಕಗಳನ್ನು

ಒಂದು ಬ್ರೀಫ಼್‌ಕೇಸ್‌ನಲ್ಲಿ ಹಾಕಿ

ಬ್ರೀಫ಼್‌ಕೇಸ್‌‌ನ್ನು ಗಾಳಿಯಲ್ಲಿ ಎತ್ತಿಹಿಡಿದು 

ಅದರ ತೂಕದ ಅಂದಾಜು ಮಾಡುತ್ತಾರೆ.

 

*****


Tuesday, October 19, 2021

ಬಾಳ್ಮೆ BAALME - RAINER BRAMBACH'S "LIFE"

ಮೂಲ: LIFE 

ಕವಿ: ರಾಯ್ನರ್ ಬ್ರಾಮ್‌ಬಾಖ್ (1917-1983)

ಸ್ವಿಟ್ಜರ್‌ಲೆಂಡ್‌ನ ಜರ್ಮನ್ ಭಾಷಾ ಕವಿ

RAINER BRAMBACH (1917-1983), 

German language poet from SWITZERLAND

Translated into English by ESTHER KINSKY

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


ಬಾಳ್ಮೆ

 

ನಾನು ವ್ಯವಹಾರ ಪತ್ರಗಳನ್ನು ಬರೆಯೊಲ್ಲ,

ತಲುಪುವ ತೇದಿ ಒತ್ತಾಯಪಡಿಸೊಲ್ಲ

ಕಾಲ ವಿಸ್ತರಣೆಗಾಗೂ ಕೇಳೊಲ್ಲ.

ನಾನು ಕವನಗಳ ಬರೆಯುವೆ.

 

ನಾನು ಕವನಗಳ ಬರೆಯುವೆ ಜಾತ್ರೆಗಳಲ್ಲಿ, 

ಮ್ಯೂಸಿಯಮ್‌ಗಳಲ್ಲಿ, ಸಿಪಾಯಿಖಾನೆಗಳಲ್ಲಿ, ಮೃಗಾಲಯಗಳಲ್ಲಿ.

ಮನುಜರು ಮೃಗಗಳು ಸಮನಾಗಿ ಎಲ್ಲೆಲ್ಲಿ ಬೆಳೆಯುವರೋ

ನಾನು ಬರೆಯುವೆ ಅಲ್ಲಲ್ಲಿ.

 

ನಾನು ಹಲವು ಕವನಗಳನ್ನು ಮರಗಳಿಗೆ ಅರ್ಪಿಸಿರುವೆ.

ಅಲ್ಲಿಂದ ಅವು ಆಕಾಶಕ್ಕೆ ಏರಿದವು.

ಯಾರಿಗೆ ಧೈರ್ಯವಿದೆ ಈ ಮರಗಳು 

ಆಕಾಶಕ್ಕೆ ಏರಿಲ್ಲವೆಂಬ ಮಾತನ್ನು ನಿರಾಕರಿಸಲು?

 

ಮೃತ್ಯುವಿಗೆ ಒಂದು ಸಾಲು ಕೂಡ ಇಲ್ಲ, ಇಲ್ಲಿಯವರೆಗೂ.

ಎಂಬತ್ತು ಕಿಲೋ ನನ್ನ ತೂಕ, ಉನ್ನತ ನನ್ನ ಬಾಳ್ಮೆ.

ಎಂದೋ ಒಂದು ದಿನ ಅಂವ ಬಂದು ಕೇಳುವ,

ನಮ್ಮಿಬ್ಬರ ಬಗ್ಗೆ ನನ್ನುತ್ತಿ?

 

*****

ಗಾಳಿಗೀತ GALIGEETA - INGEBORG BACHMANN'S "ARIA I"

ಮೂಲARIA I

ಕವಿಇಂಗೆಬೋಗ್ ಬಾಖ್ಮಾನ್ಆಸ್ಟ್ರಿಯಾ 

INGEBORG BACHMANN, AUSTRIA

Translated from the German into English by MARK ANDERSON

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಗಾಳಿಗೀತ

 

ಈ ಗುಲಾಬಿಗಳ ಬಿರುಗಾಳಿಯಲ್ಲಿ ನಾವೆತ್ತ ತಿರುಗಿದರೂ,

ಮುಳ್ಳುಗಳು ರಾತ್ರಿಯ ಬೆಳಗಿಸಿವೆ.  

ಹಿಂದೊಮ್ಮೆ ಪೊದೆಗಳ ಮೇಲೆ ಅತಿ ಶಾಂತವಾಗಿದ್ದ

ಆ ಸಾವಿರ ಎಲೆಗಳ ಗುಡುಗು

ನಮ್ಮನ್ನು ಅಟ್ಟಿಸಿಕೊಂಡು ಬರುತ್ತಿದೆ.

 

ಎಲ್ಲೆಲ್ಲಿ ಗುಲಾಬಿಗಳ ಅಗ್ನಿ ಆರಿಸಲ್ಪಟ್ಟಿದೆಯೋ

ಅಲ್ಲಲ್ಲಿ ಮಳೆ ನಮ್ಮನ್ನು ನದಿಗೆ ಕೊಚ್ಚಿಬಿಡುತ್ತದೆ.  ಓ ದೂರದ ರಾತ್ರಿಯೇ!

ಆದರೂ, ನಮ್ಮನ್ನು ಮುಟ್ಟಿದ ಎಲೆಯೊಂದು ಈಗ ಅಲೆಗಳ ಮೇಲೆ ತೇಲುತ್ತಿದೆ,

ನಮ್ಮನ್ನು ಹಿಂಬಾಲಿಸುತ್ತಿದೆ ಕಡಲಿನತ್ತ.

 

*****

Monday, October 18, 2021

ಆ ಶಕ್ತಿ AA SHAKTI - ADAM ZAGAJEWSKI'S "THAT FORCE"

Dear friends ... back in Poland ... and back to my favourite poet ADAM ZAGAJEWSKI ... this poem, THAT FORCE, is from one of his early collections, TREMOR (1985) ... I was so gung ho about this ... I did the first stanza, that seemed to pose no major problems ... and the second stanza proved to be tricky, and I got my knickers into a twist with the word 'lie' ... I tried around 7 words, but was not happy with any of them ... just 'ಇದೆ' would have done the trick, but I saved that for the last stanza ... then the third stanza, another small word 'very' ... again I tried 3-4 words ... these small words are sometimes exasperating ... "the smallest words are those that cause the greatest grief" (my own 😀) ... then the title word 'force' ... so, here it is ...


ಮೂಲ: THAT FORCE
ಕವಿ: ಆಡಮ್ ಜ಼ಾಗಯೆವ್‌ಸ್ಕಿ, ಪೋಲೆಂಡ್ ADAM ZAGAJEWSKI, POLAND
Translated from the Polish to English by RENATA GORCZYNSKI
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

ಆ ಶಕ್ತಿ
ಮರಗಳ ಶಾಖೆಗಳಲ್ಲಿ
ಗಿಡಗಳ ಜೀವರಸದಲ್ಲಿ
ಮಿಡಿಯುವ ಶಕ್ತಿ
ಕವನಗಳಲ್ಲೂ ನೆಲೆಸಿದೆ
ಆದರೆ ಅದಲ್ಲಿ ಶಾಂತವಾಗಿದೆ
ಚುಂಬನದಲ್ಲಿ
ಬಯಕೆಯಲ್ಲಿ
ಓಲಾಡುವ ಶಕ್ತಿ
ಕವನಗಳಲ್ಲೂ ಚಾಚಿದೆ
ಆದರೆ ಮೌನವಾಗಿದೆ
ನೆಪೋಲಿಯನ್‌ನ ಕನಸುಗಳಲ್ಲಿ ಬೆಳೆದು
ಅವನಿಗೆ ರಷ್ಯಾ ಮತ್ತದರ ಹಿಮಗಳನ್ನು
ವಶಪಡಿಸಿಕೊಳ್ಳೆಂದು ಹೇಳುವ ಶಕ್ತಿ
ಕವನಗಳಲ್ಲೂ ಇದೆ
ಆದರೆ ನಿಶ್ಚಲವಾಗಿದೆ

*****


ಉಪ್ಪು UPPU - RAINER BRAMBACH'S "SALT"

ಮೂಲ: SALT 

ಕವಿ: ರಾಯ್ನರ್ ಬ್ರಾಮ್‌ಬಾಖ್ (1917-1983), ಸ್ವಿಟ್ಜರ್‌ಲೆಂಡ್‌ನ ಜರ್ಮನ ಭಾಷಾ ಕವಿ

RAINER BRAMBACH (1917-1983), German language poet from SWITZERLAND

Translated into English by ESTHER KINSKY

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್ 

 

ಪ್ಪು

 

ನಮಗೆ ಒಬ್ಬರಿಗೊಬ್ಬರ ಅಗತ್ಯವಿದೆ, ಈ ನೆಲದ 

ಉಪ್ಪು ನಾವು,

ಉಪ್ಪು, ಬಂಗಾರಕ್ಕಿಂತಲೂ ಅಮೂಲ್ಯವಾದುದು, 

ಹೆಚ್ಚು ಅಗತ್ಯವುಳ್ಳದ್ದು,

ಏಕಾಕ್ಷರಿ, ಬಿಳಿ, ಪ್ಪಿನ ಸೀಸೆಯಲ್ಲಿ ಅಡಗಿರುವ,

ಅಟ್ಲಾಂಟಿಕ್ ಮಹಾಸಾಗರದಲಿ 

ಬ್ರೆಡ್ಡಿನಲಿ, ಕಣ್ಣೀರ ಹನಿಯಲಿ, ಬೆವರಿನಲಿ 

ಮರೆಯಾಗಿರುವ

ನಮ್ಮ ಹುಟ್ಟಿನ ಮುಂಚೆನೇ

ಅಥವಾ ಹೇಗೋ, ಬೇರೆಲ್ಲೋ

ನಮಗೆ ಒಬ್ಬರಿಗೊಬ್ಬರ ಅಗತ್ಯವಿದೆ, ನೆಲದ ಉಪ್ಪು ನಾವು.

*****


Sunday, October 17, 2021

ನೀನು ಇಚ್ಛಿಸುವಂತಿಲ್ಲ - NEENU ICHCHISUVANTILLA - GOPAL HONNALGERE'S "YOU CAN'T WILL"

ಮೂಲ: You Can’t Will

ಕವಿ: ಗೋಪಾಲ ಹೊನ್ನಲಗೆರೆ, ಕನ್ನಡ ಮೂಲದ ಇಂಗ್ಲಿಷ್ ಭಾಷಾ ಕವಿ

GOPAL HONNALGERE, Indian-English poet of Kannada origin

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ನೀನು ಇಚ್ಛಿಸುವಂತಿಲ್ಲ

I

ನೀನು ನಿದ್ರೆಯ ಇಚ್ಛಿಸುವಂತಿಲ್ಲ 
ನೀನು ನಿದ್ರೆಯ ಕನಸಷ್ಟೇ ಕಾಣಬಹುದು.

ಮತ್ತೆ ಏ. ಸೀ. ರೂಮೊಂದರಲ್ಲಿ ಮೆತ್ತನೆಯ

ತಿಗಣೆ-ಮುಕ್ತ ಮೆತ್ತೆಯೊಂದನ್ನು ಸಜ್ಜುಗೊಳಿಸಬಹುದು. 

ನಿನ್ನ ನಿದ್ರಾಭಾವಕ್ಕೆ ಹೇಗೆ
ಗುಡ್ ನೈಟ್’ ಹೇಳಬೇಕೆಂದು
ಏಸುವಿನಿಂದ ಕಲಿಸಲಾಗದು.


ನಿನ್ನ ಇನ್ಸೋಮ್ನಿಯಾಗೆ ಹೇಗೆ
ಜೋಗುಳ ಹಾಡಬೇಕೆಂದು 
ಸಂತರಿಂದ ಕಲಿಸಲಾಗದು.


ಬಿನ್ನಪಗಳು ತಪ್ಪೊಪಿಗೆಗಳು ಕೂಡ
ಮಾದಕಮದ್ದಾಗಿ ನಿಷ್ಪ್ರಯೋಜಕ,
"
ಚೆನ್ನಾಗಿ ನಿದ್ರಿಸುವುದು ಹೇಗೆಎಂಬ 
ಅಮೇರಿಕನ್ ‘ಬೆಸ್ಟ್ ಸೆಲರ್’ ಪುಸ್ತಕ ಕೂಡ.

II

ನೀನು ಕಷ್ಟಪಟ್ಟು 
ದುಡಿಯಬೇಕು,
ನಿದ್ರೆಯಂತ ಸಾಮಾನ್ಯ ಸಂಗತಿಗಾಗಿ
ದೇವರಿಗಾಗಿಪ್ರಾಯಶ್ಚಿತಕ್ಕಾಗಿ

ನೀನು ನಿನ್ನನ್ನೇ
ನಿನ್ನ ತೋಳುಗಳ ಮೇಲೆ
ಹೊಬೇಕು ... 
 
ಹಟಹಿಡಿದು
ಅಳುವುದು ಮಗುವೊಂದು
ನಿನ್ನ ಆತಂಕಗಳನ್ನೆಲ್ಲಾ
ಸೊತ್ತಾಗಿ ಪಡೆದ ಮಗುವೊಂದು

ಪ್ರೀತಿಯಿಂದ ಅವನ ಬೆನ್ನು ಚಪ್ಪರಿಸು 
ಹೇಳವನಿಗೆ ಕಿನ್ನರಿ ಕತೆಗಳನು
ಹಾಡು ಶಿಶು ಗೀತೆಗಳನು
ತೋರಿಸವನಿಗೆ ಚಂದಿರನ ಜೊತೆ
ಟಾಡುವ ಕರಿ ಮೋಡಗಳನು  

ತೋರಿಸವನಿಗೆ ಬೇಸಿಗೆಯ ಬರಿಮರಗಳ 
ಮಧ್ಯೆ ಕಾಣುವ ನಕ್ಷತ್ರಗಳನು 
ಮರಗಳಲ್ಲಿ ಮಿಣುಕುಹುಳಗಳಂತೆ 
ಬೆಳಗುವ ನಕ್ಷತ್ರಗಳನು,
ನಂತರಇದೂ ಹೇಳು,
ಹೇಗೆ ದೊಡ್ಡವನಾಗಬೇಕೆಂದು
ಒಳ್ಳೆ ಹುಡುಗನಾಗಬೇಕೆಂದು
ರಾಮಬುದ್ಧಏಸು - ಇವರ ಬಗ್ಗೆ ಎಲ್ಲಾ ತಿಳಿಸು
ಅವನಿಗೆ ಅರ್ಥವಾಗುತ್ತದೋ ಇಲ್ಲವೋ
ಹೇಳವನಿಗೆ
ನಿದ್ದೆ ಬರುವವರೆಗೂ ನಿನಗೆ.


*****

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...