Showing posts with label PETER SEMOLIČ - HOMELESS POET WRITING TO HIS LOVE ದಿಕ್ಕಿಲ್ಲದ ಕವಿ ತನ್ನ ಪ್ರೇಯಸಿಗೆ ಬರೆಯುತ್ತಾನೆ. Show all posts
Showing posts with label PETER SEMOLIČ - HOMELESS POET WRITING TO HIS LOVE ದಿಕ್ಕಿಲ್ಲದ ಕವಿ ತನ್ನ ಪ್ರೇಯಸಿಗೆ ಬರೆಯುತ್ತಾನೆ. Show all posts

Sunday, December 5, 2021

ದಿಕ್ಕಿಲ್ಲದ ಕವಿ ತನ್ನ ಪ್ರೇಯಸಿಗೆ ಬರೆಯುತ್ತಾನೆ PETER SEMOLIČ'S 'HOMELESS POET WRITING TO HIS LOVE'

ಮೂಲHOMELESS POET WRITING TO HIS LOVE

ಕವಿ: ಪೀಟರ್ ಸೆಮೊಲಿಕ್ಸ್ಲೊವೀನಿಯಾ PETER SEMOLIC, SLOVENIA

Translated from the Slovene by Ana Jelnikar

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ದಿಕ್ಕಿಲ್ಲದ ಕವಿ ತನ್ನ ಪ್ರೇಯಸಿಗೆ ಬರೆಯುತ್ತಾನೆ

 

ಪದಗಳ ಮನೆಯೊಂದ ಕಟ್ಟುವೆ ನಮಗಾಗಿ ನಾನು.
ನಾಮಪದಗಳೇ ಇಟ್ಟಿಗೆಗಳು
ಕ್ರಿಯಾಪದಗಳೇ ಬಾಗಿಲುಗಳು
ವಿಶೇಷಣಗಳಿಂದ ಅಲಂಕರಿಸುವೆವು ನಾವು ಜನ್ನಲ ಕಟ್ಟೆಗಳನ್ನ ಹೂಕುಂಡಗಳಿಟ್ಟಂತೆ.
ನಿರ್ಮಲ ನಿಶ್ಶಬ್ಧತೆಯಲ್ಲಿ ಮಲಗುವೆವು ನಾವು  ನಮ್ಮ ಪ್ರೇಮದ ಚಪ್ಪರದಡಿಯಲ್ಲಿ. ನಿರ್ಮಲ ನಿಶ್ಶಬ್ಧತೆಯಲ್ಲಿ. ನಮ್ಮ ಮನೆ ಬಹಳ ಸುಂದರವಾಗಿರುತ್ತೆ ಬಹು ನಾಜೂಕಾಗಿರುತ್ತೆ, ಅದಕ್ಕೆ ಅಪಾಯನ್ನುಂಟು ಮಾಡೆವು ನಾವು ಪದದುಬ್ಬರದಿಂದ.
ನಾವು ಮಾತಾಡುವುದಾದರೆ, ಹೆಸರಿಡುವೆವು ನಮ್ಮ ಕಣ್ಣಿಗಷ್ಟೇ ಕಾಣುವ ವಸ್ತುಗಳಿಗೆ.
ಯಾಕೆಂದರೆ ಒಂದೊಂದು ಕ್ರಿಯಾಪದವೂ ಅಡಿಪಾಯವನ್ನ ಅಲ್ಲಾಡಿಸಿ ನೆಲಸಮ ಮಾಡಬಹುದು.
ಎಂದೇ, ಸದ್ದುಬೇಡ, ನನ್ನ ಒಲವೇ, ಸದ್ದು ಬೇಡ, ನಮ್ಮ ಮನೆಯ
ಸುಂದರ ನಾಳೆಗಾಗಿ.

***** 


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...