Saturday, August 27, 2022

ರಾಂಡೋ* - HANS MAGNUS ENZENSBERGER's 'RONDEAU'

ಮೂಲRONDEAU 

ಕವಿಹನ್ಸ ಮಾಗ್ನುಸ್ ಎನ್ಸೆನ್ಸಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by 

MICHAEL HAMBURGER 

ಕನ್ನಡ ಅನುವಾದಎಸ್. ಜಯಶ್ರೀನಿವಾಸ ರಾವ್

 


ರಾಂಡೋ*

 

ಮಾತನಾಡುವುದು ಸುಲಭ.

 

ಆದರೆ ಪದಗಳನ್ನು ತಿನ್ನಲಿಕ್ಕಾಗದು.  

ಆದ್ದರಿಂದ ಬ್ರೆಡ್‌ನ್ನು ಮಾಡು.

ಬ್ರೆಡ್ ಮಾಡುವುದು ಕಷ್ಟ. 

ಆದ್ದರಿಂದ ಬೇಕರಿಯವನಾಗು.

 

ದರೆ ಬ್ರೆಡ್ಡಿನೊಳಗೆ ಬದುಕಲಾಗದು.

ದ್ದರಿಂದ ಮನೆಗಳ ಕಟ್ಟು.

ಮನೆಗಳ ಕಟ್ಟುವುದು ಕಷ್ಟ. 

ಅದ್ದರಿಂದ ಟ್ಟಿಗೆಯವನಾಗು.

 

ದರೆ ಬೆಟ್ಟದ ಮೇಲೆ ಮನೆಯ ಕಟ್ಟಲಾಗದು.

ದ್ದರಿಂದ ಬೆಟ್ಟವ ಸರಿಸು.

ಬೆಟ್ಟಗಳ ಸರಿಸುವುದು ಕಷ್ಟ.

ಆದ್ದರಿಂದ ಪ್ರವಾದಿಯಾಗು.

 

ಆದರೆ ವಿಚಾರಗಳು ಕೇಳಲಿಕ್ಕಾಗದು.

ದ್ದರಿಂದ ಮಾತನಾಡು.

ಮಾತನಾಡುವುದು ಕಷ್ಟ.

ದ್ದರಿಂದ ನೀನಾರೋ ಅದೇ ನೀನಾಗು

 

ಮತ್ತೆ ನಿನಗೆ ನೀನೇ ಗೊಣಗುಟ್ಟುತ್ತಿರು,

ಕೆಲಸಕ್ಕೆಬಾರದ ಜಂತುವೆ.  

 

* ರಾಂಡೋ (ಗೀತೆ); ಪಲ್ಲವಿಮೊದಲಿನಿಂದ ಕೊನೆಯವರೆಗೆ ಎರಡೇ ಪ್ರಾಸ ಮೇಲಿಂದ ಮೇಲೆ ಬರುವಮೊದಲ ಸಾಲಿನ ಮೊದಲ ಮಾತುಗಳುನಡುವೆಯೊಮ್ಮೆ ಕಡೆಗೊಮ್ಮೆ ಪಲ್ಲವಿಯಾಗಿ ಬರುವಸಾಮಾನ್ಯವಾಗಿ ಹತ್ತು ಯಾ ಹದಿಮೂರು ಸಾಲಿನಭಾವಗೀತೆ. (ಮೈಸೂರು ವಿ.ವಿ. ಪ್ರಕಟಿಸಿದ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿರುವ ವಿವರಣೆ) 

*****


ಮಹಾ ದೇವಿ - HANS MAGNUS ENZENSBERGER's 'THE GREAT GODDESS'

ಮೂಲTHE GREAT GODDESS 

ಕವಿಹನ್ಸ ಮಾಗ್ನುಸ್ ಎನ್ಸೆನ್ಸಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by 

HANS MAGNUS ENZENSBERGER

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 


ಮಹಾ ದೇವಿ

 

ಹಗಲು ರಾತ್ರಿ ಕೆಲಸಮಾಡುತ್ತಾಳವಳು

ತನ್ನ ನೂಲಿನುಂಡೆಯ ಮೇಲೆ ಬಾಗಿ,

ತುಟಿಗಳ ಮಧ್ಯೆ ನೂಲಿನ ತುದಿ,

ತರಹಾವರಿ ವಸ್ತುಗಳ ತೇಪೆಹಾಕುತ್ತಾ.

ಹೊಸ ಹೊಸ ತೂತುಗಳು, ಹೊಸ ಉದ್ದಹರಿವುಗಳು.

 

ಕೆಲವೊಮ್ಮೆ ಅವಳು ತೂಕಡಿಸುತ್ತಾಳೆ

ಮಾತ್ರ ಒಂದು ಕ್ಷಣಕ್ಕೆ 

ಅಥವಾ ಒಂದು ಶತಮಾನದ ಕಾಲ.  ಆಮೇಲೆ,

ಸುಧಾರಿಸಿಕೊಂಡು,

ಮತ್ತೆ ಕಸೂತಿಕೆಲಸ ಮುಂದುವರೆಸುವಳು.

 

ಎಷ್ಟು ಸಣ್ಣಗಾಗಿದ್ದಾಳೆ ಅವಳು, ಸಣ್ಣಗೆ, 

ಸುಕ್ಕುಸುಕ್ಕಗೆ, ಕಣ್ಣೂ ಕಾಣಿಸದು!

ಅವಳ ಬೆರಳ್ಕಾಪಿನಿಂದ ಅವಳು ಜಗತ್ತಿನ

ತೂತುಗಳ ಹುಡುಕುತ್ತಾಳೆ ಮುಟ್ಟಿ ಮುಟ್ಟಿ,

ರಫುಹಾಕುತ್ತಾಳೆ ರಫುಹಾಕುತ್ತಳಿರುತ್ತಾಳೆ.

 

*****


ಒಂದು ವೇಳೆ ಅವಕಾಶ ದೊರೆತರೆ - HANS MAGNUS ENZENSBERGER's 'SHOULD THE OCCASION ARISE'

ಮೂಲSHOULD THE OCCASION ARISE 

ಕವಿಹನ್ಸ್ ಮಾಗ್ನುಸ್ ಎನ್ಸೆನ್ಸ್‌ಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by DAVID CONSTANTINE 

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್


 

ಒಂದು ವೇಳೆ ಅವಕಾಶ ದೊರೆತರೆ

 

ನಿಮಗೆ ಕೊಟ್ಟಿರುವ ತಪ್ಪುಗಳಲ್ಲಿ ಆಯ್ದುಕೊಳ್ಳಿ,

ದರೆ ಸರಿಯಾಗಿ ಆಯ್ದುಕೊಳ್ಳಿ.

ತಪ್ಪು ಸಮಯಕ್ಕೆ ಸರಿಯಾದ ಕೆಲಸ 

ಮಾಡುವುದು ತಪ್ಪಾಗಿರಬಹುದೋ 

ಅಥವಾ

ಸರಿ ಸಮಯಕ್ಕೆ ತಪ್ಪಾದ ಕೆಲಸ

ಮಾಡುವುದು ಸರಿಯಾಗಿರಬಹುದೋ?

ಒಂದು ತಪ್ಪು ಹೆಜ್ಜೆ 

ಮತ್ತೆ ಎಂದೂ ಸರಿಪಡಿಸಲಾಗದು.

ಸರಿಯಾದ ತಪ್ಪನ್ನು

ನೀವು ತಪ್ಪಿದರೆ

ಮತ್ತೆಂದೂ ಮರಳಿ ಬರಲಾರದು.

***** 


ಹಳ್ಳಿಗಳಲ್ಲಿ ದೇವರು ಗರ್ಭಗ್ರಹಗಳಲ್ಲಿ ಮಾತ್ರ ಇರುವುದಿಲ್ಲ JOSEPH BRODSKY's 'IN VILLAGES GOD DOES NOT LIVE IN ICON CORNERS'

ಮೂಲ: IN VILLAGE GOD DOES NOT LIVE 

ONLY IN ICON CORNERS

ಕವಿಜೊಸೆಫ಼್ ಬ್ರಾಡ್ಸ್ಕಿರಶಿಯ-ಅಮೇರಿಕ

JOSEPH BRODSKY, Russia-America

Translated from the Russian by George L. Kline

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 


ಹಳ್ಳಿಗಳಲ್ಲಿ ದೇವರು ಗರ್ಭಗ್ರಹಗಳಲ್ಲಿ 

ಮಾತ್ರ ಇರುವುದಿಲ್ಲ

 

ಹಳ್ಳಿಗಳಲ್ಲಿ ದೇವರು ಗರ್ಭಗ್ರಹಗಳಲ್ಲಿ ಮಾತ್ರ

ಇರುವುದಿಲ್ಲಜರೆಯುವವರು ವಾದಿಸುವಂತೆ,

ಇರುತ್ತಾನೆ ಎಲ್ಲ ಕಡೆಮರೆಯಿಲ್ಲದೆ.  

ಒಂದೊಂದು ಸೂರನ್ನುಬಾಣಲೆಯನ್ನು

ಪಾವನಗೊಳಿಸುತ್ತಾನೆ,

ಪ್ರತಿಯೊಂದು ದ್ವಿದ್ವಾರವನ್ನು ತೆರೆಯುತ್ತಾನೆ.

 

ಹಳ್ಳಿಗಳಲ್ಲಿ ದೇವರು ಧಾರಾಳವಾಗಿ ಕೊಡುತ್ತಾನೆ – 

ಶನಿವಾರಗಳಂದು ಕಬ್ಬಿಣದ ಪಾತ್ರೆಗಳಲ್ಲಿ

ಬೇಳೆಸಾರು ಮಾಡುತ್ತಾನೆ,

ಮಿಣಿಮಿಣಿಸುವ ಬೆಂಕಿಬೆಳಕಿನಲ್ಲಿ

ಹಾಯಾಗಿ ಕುಣಿಯುತ್ತಾನೆ,

ಇವೆಲ್ಲಕ್ಕೂ ಸಾಕ್ಷಿಯಾಗಿರುವ

ನನ್ನ ನೋಡಿ ಕಣ್ಣುಮಿಟುಕಿಸುತ್ತಾನೆ.

 

ಬೇಲಿಯೊಂದ ಕಟ್ಟುತ್ತಾನೆಕನ್ಯಾದಾನ ಮಾಡುತ್ತಾನೆ

(ಮದುಮಗನೊಬ್ಬ ವನಪಾಲಕ), ಮತ್ತೆ

ತಮಾಷೆಗೆಂದುಬೇಟೆಗಾರನ ಗುಂಡು

ಎಂದೂ ಬಾತುಕೋಳಿಗೆ ತಗಲದಂತೆ ನೊಡಿಕೊಳ್ಳುತ್ತಾನೆ.

 

ಶರತ್ಕಾಲ ಹಿಮಸುರಿತದ ಸಿಳ್ಳೆಶಬ್ಧಗಳ ಮಧ್ಯೆ,

ಇವೆಲ್ಲವನ್ನು ಅರಿಯುವನೊಡುವ ಅವಕಾಶ,

ನನ್ನ ಮಟ್ಟಿಗೆದೊಂದೇ ಹಳ್ಳಿಯ ನಾಸ್ತಿಕನಿಗೆ

ತೆರೆದಿರುವ ಪರಮಾನಂದದ ದ್ವಾರ.

 

*****


Wednesday, August 24, 2022

ಟ್ರ್ಯಾಕ್ಟರ್ ಗೀತೆ - HEI NER MUL LER's 'TRACTO R SONG'

ಮೂಲ: Trac tor Song
ಕವಿ: ಹಾಯ್ನ ಮುಲಾ, ಜರ್ಮನಿ Hei ner Mü ller, Germany
(East Germany before reunification)
Translated by Jam es Rei del
ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್

ಟ್ರ್ಯಾಕ್ಟರ್ ಗೀತೆ

ನನ್ನ ತಮ್ಮ ಕುಳಿತ ಒಂದು ಟ್ಯಾಂಕಿನೊಳಗೆ
ಹೋಯಿತು ಆ ಟ್ಯಾಂಕು ಸ್ಟ್ಯಾಲಿನ್‌ಗ್ರಾಡಿಗೆ.
ಸುಟ್ಟುಹೋದ ಅವನು ಟ್ಯಾಂಕಿನೊಳಗೆ
ಅವನು ನಡೆಸುತ್ತಿದ್ದ ಆ ಟ್ಯಾಂಕಿನೊಳಗೆ.
ಕುಳಿತಿರುವೆ ನಾನು ಒಂದು ಟ್ರ್ಯಾಕ್ಟರಿನ ಮೇಲೆ
ಬಂದಿದೆ ಈ ಟ್ರ್ಯಾಕ್ಟರು ಸ್ಟ್ಯಾಲಿನ್‌ಗ್ರಾಡಿನಿಂದ.
ನಾನು ಉಳುವೆ ಹೊಲವನ್ನು ಈ ಟ್ರ್ಯಾಕ್ಟರಿನಿಂದ
ಬೆಳೆ ಬಿತ್ತಲೆಂದು ವಸಂತ ಕಾಲದಲ್ಲಿ.

*****


ಯುದ್ಧಕಾಲದ ಒಂದು ರಾತ್ರಿ ನಡೆದು ಹೋಗಿಬಿಟ್ಟನೊಬ್ಬ - HEINER MULLER's 'One night during the war a man walked off'

ಮೂಲ: One night during the war a man walked off
ಕವಿ: ಹಾಯ್ನ ಮುಲಾ, ಜರ್ಮನಿ Hei ner Mü ller, Germany
(lived in East Germany before reunification)
Translated by Jam es Rei del
ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್

ಯುದ್ಧಕಾಲದ ಒಂದು ರಾತ್ರಿ ನಡೆದು ಹೋಗಿಬಿಟ್ಟನೊಬ್ಬ

ಯುದ್ಧಕಾಲದ ಒಂದು ರಾತ್ರಿ ನಡೆದು ಹೋಗಿಬಿಟ್ಟನೊಬ್ಬ
ಊರಿನ ಕೆರೆಯತ್ತ ಸಾಯಲೆಂದು ಕೊನೆಗೂ,
ಶಾಂತಿಯ ಭಯದಿಂದ. ಹಾಸಿಗೆಯಲ್ಲಿ ಮಲಗಿದ್ದ
ಅವನ ಹೆಂಡತಿ ಎಚ್ಚೆತ್ತು, ಏನೋ ಇಲ್ಲವೆಂಬಂತೆ
ಅನಿಸಿತವಳಿಗೆ: ಅವನಿರಲಿಲ್ಲ.
ಓದಿದಳವಳು: ಅಂತಿಮ ವಿದಾಯ. ಕಾಗದ ಕಂಪಿಸುತಿತ್ತು.
ಓಡಿದಳವಳು, ಅವನು ತನ್ನ ಸಾವನ್ನು ಸೇರುವ ಮುನ್ನ ಅಲ್ಲಿ
ಆ ನೀರಿನಲ್ಲಿ – ನಕ್ಷತ್ರಗಳೇ ಇಲ್ಲದಂತಿತ್ತು ಈ ರಾತ್ರಿ.
ಅವನು ಕಾಣಿಸುತ್ತಿದ್ದ. ನೀರು ಇನ್ನೂ ಸೆಳೆದುಕೊಂಡಿರಲಿಲ್ಲ
ಅವನನ್ನು. ಇಳಿದಳವಳು ನೀರಿನೊಳಗೆ.
ಈಜುತ್ತೀಜುತ್ತಾ, ಹೆಣಗಿದಳವಳು ಹಿಡಿದುಕೊಳ್ಳಲು ಅವನನ್ನು
ಯಾರ ಜತೆ ಎಷ್ಟೊಂದು ರಾತ್ರಿಗಳು ಕೂಡಿದ್ದಳೋ ಅವನನ್ನು
ಅವನು ಮತ್ತೆ ಕೆಳಗೆಳೆದ ಅವಳನ್ನು,
ಅವನ ಸಮಾಧಿಯನ್ನೂ ಹಂಚಿಕೊಳ್ಳಲು.
ಮತ್ತೆ ಅವಳು ನೂಕಿದಳು ಅವನನ್ನು,
ಕ್ಷೀಣಿಸುತ್ತದ್ದ ಅವನು: ಸೇರಿದ ಆಳಕ್ಕೆ ಅವನು.
ಅವಳು ದಡಕ್ಕೆ ಏರಿದಳು: ಅದು ಹಳೆಯ ದಡವಾಗಿರಲಿಲ್ಲ.

*****


SILENCE AND CONCILIATION - SUBRAYA CHOKKADY's 'MOUNA SANDHAANA' ಮೌನ-ಸಂಧಾನ

ಇಂದು ನಮ್ಮೆಲ್ಲರ ಪ್ರೀತಿಯ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರ ಜನ್ಮದಿನ. ನನ್ನ ಕಡೆಯಿಂದ ಸುಬ್ರಾಯ ಮಾಷ್ಟ್ರಿಗೆ ಒಂದು ಪುಟ್ಟ ‘ಬರ್ತ್‌ಡೇ ಗಿಫ಼್ಟ್’ ... ಅವರು ಬರೆದ ಕವನ ‘ಮೌನ-ಸಂಧಾನ’ವನ್ನು ಇಂಗ್ಲಿಷ್-ಗೆ ಅನುವಾದ ಮಾಡಿರುವೆ ... ಇಲ್ಲಿರುವ ನನ್ನ ಕನ್ನಡೇತರ ‘ಫ‌್ರೆಂಡ್ಸ್’ ಗೆ ಸುಬ್ರಾಯ ಮಾಷ್ಟ್ರ-ರ ಕವಿತ್ವದ ಬಗ್ಗೆ ಪರಿಚಯವಾಗಲಿಯಂತ ... ಹುಟ್ಟುಹಬ್ಬದ ಶುಭಾಶಯಗಳು ಸರ್ ...
Today is the birthday of our beloved Kannada poet Sri Subraya Chokkady ... I have a small ‘birthday gift’ for him ... I have translated his Kannada poem ‘MOUNA-SANDHAANA’ into English for this occasion ... my non-Kannada speaking friends here can get acquainted with Sri Subraya Chokkady’s poetry ... Happy Birthday, Sir 29 June 2022
 


SILENCE AND CONCILIATION

Facing the poet
who sat down to write,
is a book,
pages still lying open
eager to be filled.

Only, letters do not flash
and become words,
images do not apparate and
metaphors are elusive.

But these are dancing around
him playing hide-and-seek
in a happy world of their own.

The book with
immeasurably hungry eyes
looks at the poet facing it
like it wanted to swallow him
in a bid to sate itself.

But, the poet, sitting,
looks at the unwritten lines
spread all over the book,
reflects in nothingness
on the silence in them.


*****


Tuesday, August 23, 2022

ಹೇಗೆ ಕಳೆಯುತ್ತಾಳೆ ನನ್ನವ್ವ ಅವಳ ರಾತ್ರಿಗಳ - RASAQ MALIK GBOLAHAN's 'HOW MY MOTHER SPENDS HER NIGHTS'

My friend and fellow translator, Kamalakar Bhat, posted his wonderful Kannada translation of a poem by this remarkable young Nigerian poet RASAQ MALIK GBOLAHAN yesterday. I was immediately captivated by the powerful poetic voice of Gbolahan and wanted to read more ... and found more poems ... equally powerful poems and I couldn’t help trying my Kannada translation skills on this poem HOW MY MOTHER SPENDS HER NIGHTS ... a brutally honest poem that opens a window to the dark world of a mother, a woman, and many more like her ...  
19 July 2022


ಮೂಲ: HOW MY MOTHER SPENDS HER NIGHTS
ಕವಿ: ರಸಾಕ್ ಮಲಿಕ್ ಗ್ಬೊಲಹನ್, ನೈಜೀರಿಯಾ
RASAQ MALIK GBOLAHAN, NIGERIA
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್


ಹೇಗೆ ಕಳೆಯುತ್ತಾಳೆ ನನ್ನವ್ವ ಅವಳ ರಾತ್ರಿಗಳ

ಆಕಾಶದಲ್ಲಿ ಉಳಿದಿರುವ ಬೆಳಕನ್ನು
ಕತ್ತಲು ನುಂಗುವುದ ನೋಡುತ್ತಾ
ನನ್ನವ್ವ ಅವಳ ರಾತ್ರಿಗಳ ಕಳೆಯುತ್ತಾಳೆ.
ತನ್ನ ಚರ್ಮದ ಮೇಲೆ
ಗಾಳಿಯ ಹಾಗೆ ಹರಡಿದ ಗಾಯಕಲೆಗಳ ಮೇಲಿನ,
ತನ್ನ ಹೃದಯದಲ್ಲಿ ಉಬ್ಬಿಬರುತ್ತಿರುವ ಕೋಪದ ಮೇಲಿನ,
ತನ್ನ ಕಿವಿಗಳನ್ನು ನೋಯಿಸುವ ನನ್ನಪ್ಪನ ಧ್ವನಿಯ ಮೇಲಿನ
ಪರದೆಗಳ ಅನಾವರಿಸುತ್ತಾ
ನನ್ನವ್ವ ಅವಳ ರಾತ್ರಿಗಳ ಕಳೆಯುತ್ತಾಳೆ.
ತನ್ನ ಜೀವನವನ್ನು ಪಂಜರವಾಗಿಸಿದ
ನನ್ನಪ್ಪನ ಬದುಕಿನ ಬಗ್ಗೆ,
ಎಲ್ಲಾ ಹೆಂಗಸರ ಬಾಯಲ್ಲಿ ನನ್ನಪ್ಪನ ಹೆಸರು
ಹೇಗೆ ಒಂದು ಜಪವಾಗಿರುವ ಬಗ್ಗೆ,
ಜೇಬುಗಳಲ್ಲಿ ಬಳಸಿದ ಕಾಂಡಮ್‌ಗಳನ್ನು
ತುಂಬಿಸಿಕೊಂಡು ನನ್ನಪ್ಪ ಮನೆಗೆ ಮರಳಿದಾಗೆಲ್ಲಾ
ಅವನ ಮುಖ ಹೇಗೆ ಕೆಟ್ಟಸ್ವಪ್ನವೊಂದನ್ನು
ಕಂಡಂತ್ತಿರುತ್ತದೆ ಎಂಬುದರ ಬಗ್ಗೆ,
ಶರಾಬು ಹಾಗೂ ಸಿಗರೇಟು ಹೊಗೆಯ ವಾಸನೆಗಳಿಂದ
ಅವನ ಕೋಟು ಹೇಗೆ ನಾರುತ್ತಿರುತ್ತೆ ಎಂಬುದರ ಬಗ್ಗೆ
ಮಾತಾಡುತ್ತಾ ಖಾಲಿ ಕೋಣೆಯೊಂದರಲ್ಲಿ
ನನ್ನವ್ವ ಅವಳ ರಾತ್ರಿಗಳ ಕಳೆಯುತ್ತಾಳೆ.
ಮತ್ತೊಬ್ಬ ಗಂಡಿನ ಬೆರಳುಗಳಿಂದ
ತನ್ನ ಹೃದಯವನ್ನು ತೆರೆಯಲು ಪ್ರಯತ್ನಿಸುತ್ತಾ,
ಇನ್ನೊಬ್ಬನ ಹಣೆಯ ಮೇಲೆ ತನ್ನ ಹೆಸರು
ಕೆತ್ತಿಸಲು ಪ್ರಯತ್ನಿಸುತ್ತಾ,
ನನ್ನವ್ವ ಅವಳ ರಾತ್ರಿಗಳ ಕಳೆಯುತ್ತಾಳೆ.
ತನ್ನ ಮುದಿ ದೇಹಕ್ಕೆ ಅತ್ತರು ಹಚ್ಚಿಕೊಳ್ಳುತ್ತಾ,
ಮತ್ತೆ ಮತ್ತೆ ಪ್ರೀತಿಸಲು ಮತ್ತೊಮ್ಮೆ
ಕಾಲ ಬರುತ್ತೆ ಎನ್ನುವ ಗಂಡಿಗಾಗಿ ಕಾಯುತ್ತಾ
ನನ್ನವ್ವ ಅವಳ ರಾತ್ರಿಗಳನ್ನು ಕಳೆಯುತ್ತಾಳೆ.

*****


ಯಾಕಿಷ್ಟು ಕತ್ತಲು ನಿನ್ನ ಕವನಗಳಲ್ಲಿ? - LINDA PASTAN's 'WHY ARE YOUR POEMS SO DARK?'

ಕೆಲ ದಿನಗಳ ಹಿಂದೆ ಮಿತ್ರರಾದ ಕಮಲಾಕಾರ ಕಡವೆಯವರು Kamalakar Bhat ಅಮೇರಿಕದ ಕವಿ ಲಿಂಡಾ ಪ್ಯಾಸ್ಟನ್-ರ (Linda Pastan) ಕವನ "Why Are Your Poems so Dark?"-ನ್ನು ಇಲ್ಲಿ ಪೋಸ್ಟ್ ಮಾಡಿದ್ದರು. ಸುಮಾರು ಜನ ಕಾವ್ಯಾಸಕ್ತರು ಈ ಕವನವನ್ನು ಇಷ್ಟಪಟ್ಟರು. ಈ ಕವನದ ಕನ್ನಡ ಅನುವಾದವೂ ಆಗಿದೆ ಎಂದು ತಿಳಿಯಿತು. ಕಮಲಾಕಾರ-ರವರು ಈ ಕವನದ ಅನುವಾದ ಮಾಡಿಲ್ಲ; ಆದರೆ ಪ್ರಯತ್ನ ಜಾರಿಯಲ್ಲಿದೆ ಎಂದರು. ನನ್ನ ಮೆಚ್ಚಿನ ‘ಮೆಟಾ-ಕವನ’ ಶೈಲಿಯಲ್ಲಿರುವ ಈ ಕವನ ನನಗೆ ಬಹಳ ಇಷ್ಟವಾಯಿತು. ಕನ್ನಡಕ್ಕೆ ಅನುವಾದ ಮಾಡಿದೆ; ಕಮಲಾಕರ-ರ ಪೋಸ್ಟ್-ನ ಎಳೆಯಲ್ಲೇ ನನ್ನ ಅನುವಾದವನ್ನೂ ಪೊಸ್ಟ್ ಮಾಡಿದೆ. ಕಮಲಾಕರ-ರಿಗೆ ಇಷ್ಟವಾಯಿತು. ಶಿವರಾಜ್ ಬೆಟ್ಟದೂರ-ರು Shivaraj Bettadur ನನ್ನ ಅನುವಾದದ ಶೀರ್ಷಿಕೆಯ ಪದಬದಲಿ ಮಾಡಿ ಅದರ ಅಂದ ಹೆಚ್ಚಿಸಿದ್ದಾರೆ. ಮೊದಲ ಎರಡು ಸಾಲುಗಳು ಅಷ್ಟಾಗಿ ಹಿಡಿಸಲಿಲ್ಲ, ಉಳಿದದ್ದು ಓಕೆ ಎಂದರು. ಅದೂ ಒಳ್ಳೆಯದೇ. ಈ ಅನುವಾದವನ್ನು ಸೆಪರೇಟಾಗಿ ಪೋಸ್ಟ್ ಮಾಡುವಾಂತ ... ಎಲ್ಲಾ ತರಹದ ಸಲಹೆಗಳು ಸ್ವಾಗತ ... ಒಳಗೂಡಿಸಲು ಆದಷ್ಟು ಪ್ರಯತ್ನ ಮಾಡುವೆ ... ಈ ಕವನವನ್ನು ಹುಡುಕಿ ನಮ್ಮೆಲ್ಲರಿಗೆ ತೋರಿಸಿ, ಓದಿಸಿದ್ದಕ್ಕೆ ಕಮಲಾಕರ ಕಡವೆಯವರಿಗೆ ಧನ್ಯವಾದಗಳು ... 22 July 2022


ಮೂಲ: WHY ARE YOUR POEMS SO DARK?
ಕವಿ: ಲಿಂಡಾ ಪ್ಯಾಸ್ಟನ್, ಅಮೇರಿಕ LINDA PASTAN, USA
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

ಯಾಕಿಷ್ಟು ಕತ್ತಲು ನಿನ್ನ ಕವನಗಳಲ್ಲಿ?

ಚಂದಿರನಲ್ಲಿ ಕೂಡ ಹೆಚ್ಚಾಗಿ
ಕತ್ತಲ ದಿನಗಳೇ ಅಲ್ಲವಾ?
ಮತ್ತೆ ಆ ಬಿಳಿ ಹಾಳೆ
ಖಾಲಿ ಖಾಲಿ ಎನಿಸುವುದಿಲ್ಲವೆ
ಅಕ್ಷರಗಳ ಕಪ್ಪು
ಕಲೆಗಳ ವಿನಾ?
ದೇವ ಬೆಳಕು ಬೇಕೆಂದಾಗ,
ಅಂವ ಕತ್ತಲೆಯನ್ನು ಹೊರಗಟ್ಟಲಿಲ್ಲ.
ಬದಲಾಗಿ ಅಂವ ಕಾಗೆಗಳನ್ನು
ಕರಿಮರಗಳನ್ನು ಸೃಷ್ಟಿಸಿದ
ನಿನ್ನ ಎಡ ಕಪೋಲದಲ್ಲಿರುವ ಆ
ಸಣ್ಣ ಮಚ್ಛೆಯನ್ನು ಕೂಡ.
ಇಲ್ಲಾ, “ನೀನ್ಯಾಕೆ ಯಾವತ್ತೂ ಇಷ್ಟು ಬೇಸರದಿಂದಿರುತ್ತಿ?”
ಎಂದು ಕೇಳುವ ಉದ್ದೇಶವಿತ್ತೊ ನಿನಗೆ?
ಚಂದಿರನನ್ನು ಕೇಳು.
ಅಂವ ಏನು ನೋಡಿದ್ದನೆಂದು ಕೇಳು.

*****



WHY ARE YOUR POEMS SO DARK?

Isn't the moon dark too,
most of the time?
And doesn't the white page
seem unfinished
without the dark stain
of alphabets?
When God demanded light,
he didn't banish darkness.
Instead he invented
ebony and crows
and that small mole
on your left cheekbone.
Or did you mean to ask
"Why are you sad so often?"
Ask the moon.
Ask what it has witnessed.

--- Linda Pastan 

Friday, August 19, 2022

ಮಾಂತ್ರಿಕ ದುಡಿ - GABRIEL OKARA'S 'THE MYSTIC DRUM'

ಮೂಲTHE MYSTIC DRUM

ಕವಿಗೇಬ್ರಿಯಲ್ ಒಕಾರ, ನೈಜೀರಿಯಾ

GABRIEL OKARA, Nigeria

ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್

 


ಮಾಂತ್ರಿಕ ದುಡಿ

 

ಬಡಿಯುತ್ತಿತ್ತು ನನ್ನೊಳಗೆ ಮಾಂತ್ರಿಕ ದುಡಿಯೊಂದು 

ಕುಣಿಯುತ್ತಿದ್ದವು ಮೀನುಗಳು ನದಿಗಳಲ್ಲಿ 

ನಲಿಯುತ್ತಿದ್ದರು ಗಂಡಸರು ಹೆಂಗಸರು ದಡದಲ್ಲಿ

ನನ್ನ ದುಡಿಯ ಲಯಕ್ಕೆ 

 

ಆದರೆ ಮರದ ಹಿಂದೆ ನಿಂತಿದ್ದ ಅವಳು

ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು

ತಲೆಯಾಡಿಸಿ ನಕ್ಕಳಷ್ಡೇ ಅವಳು 

 

ನನ್ನ ದುಡಿ ಬಡಿಯುತ್ತಲೇ ಇತ್ತು

ತಾಳದ ಗತಿ ಹೆಚ್ಚಿಸುತ್ತಾ 

ಗಾಳಿಯಲ್ಲಿ ಅಲೆಗಳನ್ನೆಬ್ಬಿಸುತ್ತಾ

ಬದುಕಿರುವವರನ್ನು ಸತ್ತವರನ್ನು

ಅವರವರ ನೆರಳುಗಳ ಜತೆ 

ಹಾಡಲು ಕುಣಿಯಲು ಒತ್ತಾಯಿಸುತ್ತಾ –

 

ಆದರೆ ಮರದ ಹಿಂದೆ ನಿಂತಿದ್ದ ಅವಳು

ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು

ತಲೆಯಾಡಿಸಿ ನಕ್ಕಳಷ್ಡೇ ಅವಳು 

 

ನೆಲದ ವಸ್ತುಗಳ ಲಯಕ್ಕೆ

ದುಡಿಯು ಬಡಿಯ ತೊಡಗಿತು

ಕಾಶದ ಅಕ್ಷವನ್ನು, ಸೂರ್ಯ,

ಚಂದ್ರ, ನದಿ ದೇವತೆಗಳನ್ನು ಆವಾಹಿಸಿತು -

ಮರಗಳು ಕುಣಿಯ ತೊಡಗಿದವು

 

ಮೀನುಗಳು ಮನುಜರಾದರು

ಮನುಜರು ಮೀನುಗಳಾದರು

ಎಲ್ಲವೂ ಬೆಳೆಯುವುದ ನಿಂತಿತು –

 

ಆದರೆ ಮರದ ಹಿಂದೆ ನಿಂತಿದ್ದ ಅವಳು

ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು

ತಲೆಯಾಡಿಸಿ ನಕ್ಕಳಷ್ಡೇ ಅವಳು

 

ಗ ನನ್ನೊಳಗಿನ ಮಾಂತ್ರಿಕ ದುಡಿ

ಬಡಿಯುವುದ ನಿಲ್ಲಿಸಿತು –

ಮನುಜರು ಮನುಜರಾದರು

ಮೀನುಗಳು ಮೀನುಗಳಾದವು

ಮರಗಳು, ಸೂರ್ಯ, ಚಂದ್ರ

ಅವರವರ ಜಾಗ ಸೇರಿದವು, 

ಸತ್ತವರು ನೆಲ ಸೇರಿದರು

ಎಲ್ಲವೂ ಮತ್ತೆ ಬೆಳೆಯತೊಡಗಿದವು

 

ಮತ್ತೆ ಮರದ ಹಿಂದೆ ನಿಂತಿದ್ದ ಅವಳು

ಬೇರುಗಳು ಮೊಳೆತವು ಅವಳ ಪಾದಗಳಿಂದ

ಎಲೆಗಳು ಚಿಗುರಿದವು ಅವಳ ತಲೆಯಿಂದ

ಹೊಗೆ ಹೊಮ್ಮಿತು ಅವಳ ಮೂಗಿನಿಂದ 

ಅವಳ ತುಟಿಗಳು ಬಿರಿದವು

ಅವಳ ನಗೆ ಮಾರಿತು 

ಕತ್ತಲೆ ಕಾರುವ ಕುಳಿಯಾಗಿ.

 

ಆಗ, ಆಗ ನಾನು ನನ್ನ ಮಾಂತ್ರಿಕ ದುಡಿಯನ್ನ

ಚಿಲದಲ್ಲಿಟ್ಟು ತಿರುಗಿ ನಡೆದೆ;

ಮತ್ತೆಂದೂ ಬಾರಿಸಲಿಲ್ಲ ಇಷ್ಟೊಂದು ಜೋರಾಗಿ ದುಡಿಯನ್ನು.


*****


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...