Friday, November 26, 2021

ನೇರನುಡಿಯ ಕವನಗಳು–11 - MYKOLA RYABCHUK'S 'THE STRAIGHTFORWARD POEMS-11'

ಮೂಲ: THE STRAIGHTFORWARD POEMS –11

ಕವಿಮಿಕೋಲಾ ರಯಾಬ್ಚಕ್ಕ್ರೇಯ್ನ್ MYKOLA RYABCHUK, UKRAINE

Translated from the Ukrainian into English by Mykola Ryabchuk and R.A. Jamieson

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ನೇರನುಡಿಯ ಕವನಗಳು – 11 

ಜೀವನ ಸಾಗಿದೆ
ತೆವಳುತ್ತಾ
ಸರಿಯುತ್ತಾ

ಒಂದು ಕಡೆಯಿಂದ ಇನ್ನೊಂದು ಕಡೆಗೆ
ಮೆಯ ಹಾಗೆ
ಯಾ ಮುಳ್ಳುಹಂದಿಯ ಹಾಗೆ

ಳಗೆಳಕೊಳ್ಳುತ್ತೆ ತನ್ನ ತಲೆಯನ್ನ
ಬಾಲವನ್ನ
ಪಂಜಗಳನ್ನ

ಯಾಕೆಂದರೆ, ನಾವು
ಮುಳ್ಳುಗಳೊಂದಿಗೆ ಡಿಕ್ಕಿಹೊಡೆದಾಗ
ಚಿಪ್ಪಿಗೆ ಹಣೆಗಳ ಬಡಕೊಂಡಾಗ 
ಯೋಚಿಸಬೇಕೆಂದು:

ಜೀವನ ಸಾಗಿದೆ
ನಮ್ಮ ಬೆರಳುಗಳನ್ನ
ಹಣೆಗಳನ್ನ
ತ್ಮಗಳನ್ನ ಸುಡುತ್ತಾ

ಈ ಮಧ್ಯೆ, ಬಿದ್ದಿದೆ ಅದು
ನಮ್ಮ ಕಾಲಬುಡದಲ್ಲಿ

ಸುರುಟಿಕೊಂಡು ಚೆಂಡಿನಾಕಾರದಿ

***** 


ನೇರನುಡಿಯ ಕವನಗಳು–9 - MYKOLA RYABCHUK'S 'THE STRAIGHTFORWARD POEMS–9'

ಮೂಲ: THE STRAIGHTFORWARD POEMS – 9

ಕವಿಮಿಕೋಲಾ ರಯಾಬ್ಚಕ್ಕ್ರೇಯ್ನ್ MYKOLA RYABCHUK, UKRAINE

Translated from the Ukrainian into English by Mykola Ryabchuk and R.A. Jamieson

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ನೇರನುಡಿಯ ಕವನಗಳು – 9

 

ಪದ್ಯಗಳು ಯಾವಾಗಲೂ

‘ಸ್ವಚ್ಛಂದ’

 

ಅವುಗಳಿಗೆ 

ಪ್ರಾಸ ಕಟ್ಟಿ

ಸಂಕೋಲೆ ಸುತ್ತಿ

ಬಂಧಿಸಿದರೂ

ಹಾಳೆಗಳಲ್ಲಿ 

 

ಅವು

ತಾಜಾ ಹಿಮದ ಮೇಲೆ

ಸತ್ತಂತೆ ನಟಿಸುವ

ನರಿಯ ಹಾಗೇ ವರ್ತಿಸುತ್ತವೆ

 

ನಾವೇ ನಮ್ಮನ್ನು ಮೋಸ ಮಾಡುವುದು ಬೇಡ

ನರಿ ಮತ್ತೆ ಜಿಗಿಯುತ್ತೆ ಜೀವಹತ್ತಿ

ಹಿಮ ಉಳಿಯುತ್ತೆ ಬಿಳಿಯಾಗಿ

ಕಾಗದ ಖಾಲಿಯಾಗಿ

 

***** 


ಒಡಲರಿಮೆಯ ಕ್ಷಣ ODALARIMEYA KSHANA - MARIJA KNEŽEVIĆ'S 'ANATOMY MOMENT'

ಮೂಲ: ANATOMY MOMENT

ಕವಿ: ಮರಿಯಾ ಖ್ನೆಜ಼್ಎವಿಚ್, ಸರ್ಬಿಯಾ MARIJA KNEŽEVIĆ, SERBIA  

Translated from the Siberian into English by SIBELIAN FORRESTER

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಒಡಲರಿಮೆಯ ಕ್ಷಣ

 

ನಾನು ಸುಮ್ಮನಿರುತ್ತೇನೆ.

ಶೂನ್ಯಕ್ಕೆ ಬಾಯಿಲ್ಲ.  ಅದಕ್ಕೆಂದೂ ಸಾಂತ್ವನವಿಲ್ಲ. 

ಗರ್ಭದ ಗುಣವದು.  

ಅವಳ ಕರುಳಿನಿಂದ ಹೊರಟ ಸದ್ದು ಕಾಲಗಳನ್ನು ಕಿವುಡಾಗಿಸಿತು.

 

ನಾನು ಸುಮ್ಮನಿರುತ್ತೇನೆ ಮತ್ತೆ ಆ ಪದಗಳ ಬಳಸಿ ಪ್ರೇಮದ 

ಇಲ್ಲಮೆಯನ್ನು ಕೊಂಡಾಡುವೆ.

ಯಾಕೆಂದರೆ ಪ್ರತಿ ಕ್ಷಣವೂ ಒಂದು ಸಮಾರಂಭ,

ಸಮಯವೆಂಬುದು ಕ್ಷಣಿಕತೆಯ ಒಂದು ಸ್ಮಾರಕ ಮಾತ್ರ.”

 

ನಾವು ಸುಮ್ಮನಿರುತ್ತೇವೆ

ಅವರು ಸದ್ದು ಮಾಡುತ್ತಾರೆ ಪಿತೂರಿಗಳ ಬಗ್ಗೆ, 

ಹೊಸ ಪೀಠೋಪಕರಣಗಳ ಬಗ್ಗೆ.

ಅವರು ಕೊಠಡಿಗಳನು, ಧ್ವನಿವರ್ಧಕಗಳನು ಕೊಳ್ಳುತ್ತಾರೆ.  

ಅವರು ಶಸ್ತ್ರವೆತ್ತಿಕೊಳ್ಳುತ್ತಾರೆ.

ಅವರು ನಮ್ಮ ಕಡೆ ಗುರಿಯಿಡುತ್ತಾರೆ, ಉಸಿರೊಂದು ಕಟ್ಟುತ್ತೆ 

ಯಾವತ್ತೂ ವ್ಯಾಮೋಹವಿಲ್ಲದ್ದು,  

 

ಅವರು ಕೊಳ್ಳುತ್ತಾರೆ ಅವರು ಕೊಳ್ಳುತ್ತಾರೆ ಅವರು ಕೊಳ್ಳುತ್ತಾರೆ

ಅತಿವೇಗ ಹಾರುವ ಸಾಧನಗಳನ್ನು  

ಅತಿ ಕಡಿಮೆ ಸಮಯದಲ್ಲಿ ಅವರು

ಈ ಗ್ರಹವನ್ನು ಒಂದು ವದಂತಿಯ ಮಟ್ಟಕ್ಕೆ ಇಳಿಸುವರು

ನಾವು ಸೋಲುಂಡವರು ಎಂಬುದರ ಬಗ್ಗೆ, ಲೋಕದ ಅಂತ್ಯದ ಬಗ್ಗೆ,

 

ನಾವು ಸುಮ್ಮನಿರುತ್ತೇವೆಮತ್ತೆ ಆ ಪದಗಳ ಬಳಸಿ 

ಈ ಅಧ್ಯಾಯವನ್ನು ಬರೆದು ಮುಗಿಸುತ್ತೇವೆ.

“ಯಾಕೆಂದರೆ ಕೊನೆಯಿಲ್ಲದ ಕಥೆ ಮಾತ್ರವೇ ಕಥೆ,

ತನ್ನ ಅಂತ್ಯವನ್ನು ಒಪ್ಪಿಕೊಳ್ಳುವ ಕಥೆ ಕಥೆಯಲ್ಲ.”

 

ನೀನು ಸುಮ್ಮನಿರುತ್ತಿ.

ನಿನ್ನ ಕೂದಲು ಬೆಳೆಯುತ್ತಿರುವುದ ನಾನು ಗಮನಿಸುವೆ

ಸೂರ್ಯನಿಂದ ರಂಗಾದ ಬಿರುಗೂದಲಿನ ಕ್ರಾಂತಿಯಲ್ಲಿ

ಮಾರ್ಪಿನ ಕ್ರಿಯೆ ನೋಡುವೆ.

ಇಲ್ಲ, ನೀನು ಮಡಿಯಲಿಲ್ಲ, ಪ್ರಿಯೇ.

ಅವರು ಆ ಒಂದು ಎಲೆಗಾಗಿ ಒಂದು ಮರವ ಕೊಂಡರು

ಅದನ್ನು ನಾವು ಸುಡಬೇಕೆಂದು ನಿನ್ನ ಪತ್ರವಿತ್ತು ಅದರಲ್ಲಿ.

“ಯಾಕೆಂದರೆ ಯಾವುದು ಪುರಾವೆ ಅರಸುವುದಿಲ್ಲವೋ, ಅದೇ ಇರುತ್ತೆ,

ನಮ್ಮ ಅವಧಿಗಳ ಬಯಕೆಗಳಿಂದ ಬಚಾಯಿಸಲ್ಪಟ್ಟಿರುತ್ತೆ.”

 

***** 


ನನ್ನ ಕಣ್ಣುಗಳ ಹಿಂದೆ NANNA KANNUGALA HIMDE - ULRIKE ALMUT SANDIG'S 'BEHIND MY EYES'

ಮೂಲBEHIND MY EYES 

ಕವಿಉಲ್ರೀಕ ಆಲ್ಮತ ಜ಼ಂಡಿಷ್ಜರ್ಮನಿ ULRIKE ALMUT SANDIG, GERMANY

Translated from the German into English by Karen Leeder

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ನನ್ನ ಕಣ್ಣುಗಳ ಹಿಂದೆ

 

ನನ್ನ ಕಣ್ಣುಗಳ ಹಿಂದೆ ಅನ್ಯರು ಕೂತು ನೋಡುತ್ತಾರೆ 

ನಾನು ನೋಡಿದ್ದನ್ನೆಲ್ಲವನ್ನೂ.  

ನಾನು ಕಾಣ ಬಲ್ಲದ್ದನ್ನು ಮಾತ್ರ ನಾನು ನೋಡುವೆ.

 

ರಾತ್ರಿಯಲ್ಲಿ ವರಾಂಡಾದ ಬೆಳಕಿನಲ್ಲಿ ಮುಂಗುಸಿಯ ನೋಡುವೆ 

ಫಾಕ್ಸ್‌ಗ್ಲವ್ ಪೊದೆಯ ಬುಡದಲ್ಲಿ, ಮಿಸುಕಾಡದೇ ಕೂತಿದೆ,

ಕಂದುವ ಬೆಳಕಿನಲ್ಲಿ ಅದೃಶ್ಯವಾಗುತ್ತಾ. 

 

ನನಗೆ ಧೂಮಕೇತುಗಳು ಕಾಣಿಸಲ್ಲ, ಉಪಗ್ರಹಗಳು ಕಾಣಿಸಲ್ಲ.  

ನನಗೆ ಏನೂ ಕಾಣಿಸಲ್ಲ ಚಂದ್ರನ ಚೂರೊಂದನ್ನು ಬಿಟ್ಟು 

ಮತ್ತು ಗಾಜಿನಲ್ಲಿ ನನ್ನದೇ ಪ್ರತಿಬಿಂಬ,

 

ಹಗಲಲ್ಲಿ ನನಗೆ ಕಾಣುತ್ತೆ ಅಂಗಳದ ಹಿಂದಿರುವ ತೋಟದ ಮಸಕು ಹಸಿರಿನ ಮಿಂಚು,

ಯಾಂತ್ರಿಕವಾಗಿ ಗೋಣು ಹಾಕುತ್ತಿರುವ ಪಾರಿವಾಳ; 

ಯಾವಾಗಲೂ ಅದೇ ಪೊದೆಯ ಮೇಲೆ.

 

ಮತ್ತೆ ಮೇಲೆ ಎತ್ತರದಲ್ಲಿ ಸುತ್ತಿ ಸುತ್ತಿ ದಾಳಿ ಮಾಡುವ ಜೆಟ್ ಪ್ಲೇನುಗಳು.  

ಅವನ್ನೂ ನಾನು ನೋಡುವೆ.

 

ಮತ್ತೆ ಅನ್ಯರ ಬಗ್ಗೆ ಹೇಳಬೇಕಾದರೆ, ನಾನವರನ್ನು ಆದಷ್ಟು ಕಡಿಮೆ ಕಾಣುತ್ತೇನೆ,

ಅವರು ನನ್ನನ್ನು ಕಾಣುವಂತೆ,

 

ಅವರು ನನ್ನೊಳು ಕೂತಿದ್ದಾರೆ ಆಳದಲ್ಲಿ.

 

*****


ಬೆಳಗ್ಗೆ ಕವನವ ಓದುವವ BELAGGE KAVANAVA O:DUVAVA - EKATERINA YOSIFOVA'S "THE ONE READING A POEM"

ಮೂಲ: THE ONE READING A POEM

ಕವಿ: ಕವಿ: ಕ್ಯಾಟರೀನ ಯೋಸಿಫ಼್ಓವಾ, ಬಲ್ಗೇರಿಯಾ EKATERINA YOSIFOVA, BULGARIA

Translated from the Bulgarian into English 

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್ 

 

 

ಬೆಳಗ್ಗೆ ಕವನವ ಓದುವವ

 

ಬೆಳಗ್ಗೆ ಕವನವ ಓದುವವ,

ಹಾಸಿಗೆಯಲ್ಲೇ ಸುಮಾರು ಎಂಟು ನಿಮಿಷಗಳ ಕಾಲ,

ಳುತ್ತಾನೆ, ಮಾಡಬೇಕಾದ್ದನ್ನ ಮಾಡುತ್ತಾನೆ,

ಹೊರಗೆ ಹೋಗುತ್ತಾನೆ,

ಳಿದ ತಾಸುಗಳನ್ನು ಚೆನ್ನಾಗಿ ತಾಳಿಕೊಳ್ಳುತ್ತಾನೆ.


*****

ನಿಶ್ಚಿತಗಳು NISHCHITAGALU - EKATERINA YOSIFOVA'S 'GIVENS'

ಮೂಲGIVENS

ಕವಿ: ಕ್ಯಾಟರೀನ ಯೋಸಿಫ಼್ಓವಾ, ಬಲ್ಗೇರಿಯಾ EKATERINA YOSIFOVA, BULGARIA

Translated from the Bulgarian into English by Katerina Syokova-Klemer

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್ 

 

ನಿಶ್ಚಿತಗಳು

 

ನಿನ್ನಲ್ಲಿ ಒಂದು ಕೋಡಲಿ ದೆ ಮತ್ತೊಂದು ದ್ವೀಪವಿದೆ.

ದ್ವೀಪದಲ್ಲೊಂದು ಮರವಿದೆ.

ಸಾಕು ಒಂದು ದೋಣಿ ಕಟ್ಟಲಿಕ್ಕೆ.

ನೀನು ದೋಣಿಯನ್ನೇರುವೆ.

ನೀನು ದಡವ ದೂಡಿ ಹೋಗುವೆ ಮುಂದೆ

 ಮಾಜಿ ಮರದ ಅತಿ ಗಟ್ಟಿಯಾದ 

ಟೊಂಗೆಯ ಹಿಡಿದು.

ಅನುಕೂಲ ಪ್ರವಾಹವೊಂದು ದೋಣಿಯ ಹಿಡಿದೆತ್ತಿ ಭೂಖಂಡದ ದಡವ ಸೇರಿಸುತ್ತೆ.  ನೀನಲ್ಲಿ ಮನೆ ಮಾಡುವೆ, ಅಲ್ಲ, ದಡದಲ್ಲಲ್ಲ – ಶಹರಿನಲ್ಲಿ.

ದೋಣಿ ಎಂದೋ ಲೊಡ್ಡಾಗಿ ಹೋಗಿದೆ.

ನಿನಗೆ ಗೊತ್ತಿಲ್ಲ – ನೀನು ಕೇಳಲ್ಲ – 

ಆ ದ್ವೀಪದ ಹೆಸರು.

ಆ ಮರದದ್ದೂ ಕೂಡ. 

 

***** 



ಕಿವಿ KIVI - ULRIKE ALMUT SANDIG'S "EAR"

ಮೂಲEAR 

ಕವಿಉಲ್ರೀಕ ಆಲ್ಮತ ಜ಼ಂಡಿಷ್ಜರ್ಮನಿ ULRIKE ALMUT SANDIG, GERMANY

Translated from the German into English by Karen Leeder

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಕಿವಿ

 

ದೆವ್ವಗಳು ನೆನಪಿಸಿಕೊಳ್ಳುತ್ತಾವೆಯೇ?  ಯಾವುವು ನೆನಪಿಸಿಕೊಳ್ಳುತ್ತಾವೆ?

ಯಾವುವು ನೆನಪಿಸಿಕೊಳ್ಳಲ್ಲ?  ಹಾಗೆ, ನೆನಪಿಸಿಕೊಳ್ಳುವುದಾದರೆ, ಯಾವ ಅಂಗ

 

ಬಳಸಬಹುದು? ಮೆದುಳೋ, ಮೂಳೆಗಳೋ, ಕಣ್ಣುಗಳು ಇರಬಹುದೇ, 

ಅಥವಾ, ಎಲ್ಲಾ ಅಂದ ಮೇಲೆ, ಬಹುಶಃ ಕಿವಿಯೆನೋ? 

 

ಹಿತ್ತಲಿನ ಹಿಂದೆ ಎತ್ತರದ ಹುಲ್ಲಿನ ಕಾಡನ್ನು ಅವು ನೆನೆದುಕೊಳ್ಳುತ್ತಾವೆಯೇ?  

ಹೇಗೆ ಮುಳ್ಳುಗಳು ತುರಿದವು ಗುಲಾಬಿಗಳು ಬೆಳೆದಂತೆ,

 

ಹೇಗೆ ಪೇರಳೆ ಮರ ಕೀರಿತು, ಹೇಗೆ ಮೆಗ್ನೋಲಿಯಾ ಗಿಡ ಹಾಡಿತು, 

ಅದರ ಪ್ರತಿ ಗೆಲ್ಲಿನಲಿ ನೀರ್‌ಗಾಲಿಯಂತಿರುವ ಕುಸುಮಗಲೋಳಗೆ 

 

ಬ್ಲೂಬಾಟಲ್‌ ನೊಣಗಳು ಸಾಲುಗಳು, ಹೇಗೆ  ಏರೋಪ್ಲೇನುಗಳು

ಗುರುಗುಟ್ಟುತ್ತಿದ್ದವು ಹುಚ್ಚುಹಿಡಿಸುವ ನೀಲಿ ಬೋಗುಣಿಯಂತಿರುವ ಆಕಾಶದಲ್ಲಿ

 

ಮತ್ತೆ, ಮರಗಳ ಶಿಖರಗಳಲ್ಲಿ, ಗಾಳಿಯ ಹೊದರಿನಲಿ 

ದೆವ್ವಗಳ ಗುಂಯಗುಡುವಿಕೆಯನ್ನು ಯಾರಾದರೂ ನೆನಪಿಸಿಕೊಳ್ಳುತ್ತಾರೆಯೇ?

 

***** 


ನೀನೆ ಬರೆದಿದ್ದೆ ಕವನ ಅದರ ಬಗ್ಗೆ ULRIKE ALMUT SANDIG'S "YOU WROTE YOURSELF THE POEM OF IT"

ಮೂಲYOU WROTE YOURSELF THE POEM OF IT 

ಕವಿಉಲ್ರೀಕ ಆಲ್ಮತ ಜ಼ಂಡಿಷ್ಜರ್ಮನಿ ULRIKE ALMUT SANDIG, GERMANY

Translated from the German into English by Karen Leeder

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ನೀನೆ ಬರೆದಿದ್ದೆ ಕವನ ಅದರ ಬಗ್ಗೆ

 

ನಿನ್ನ ಕೆಳಗೆ ಭೂಮಿ, ಯಾವಾಗಲೂ ತಿರುಗುತ್ತಿರುತ್ತೆ.  

ನಿನ್ನ ಮೇಲೆ ಮರಗಳ ನೆರಳ್‌ಚಿತ್ರ, ಸೂರ್ಯನ ಕಡಿದಾದ 

ಕಮಾನಿನ ಹಿನ್ನೆಲೆಯಲ್ಲಿ.  ಆಗಸ ಅಗಲವಾಗಿ ತೆರೆದು ಬಿದ್ದಿದೆ

ಕಾಲದಲ್ಲಿ ತಿರುಗುತ್ತಿರುವ ಚಂದ್ರ.  

ನಿನ್ನ ಹಿಂದೆ ಸದ್ದಿಲ್ಲದ ಹಿಮ ಕವಿದ ಕಲ್ಲಿನ ಮಲೆಗಳು.  

ನಿನ್ನ ಮುಂದೆ ಮೋಡಗಳ ಚೆಕ್ಕೆಗಳು.  

ಆಳ ಇಳಿವಿನಲ್ಲಿ ನಿನ್ನ ಮನೆಯಿದೆ, 

ನೀನೆ ಬರೆದಿದ್ದೆ ಕವನ ಅದರ ಬಗ್ಗೆ.  

ನಿನ್ನೊಳಗೆ ಸದಾ ಉತ್ತರದೆಡೆ ತೋರಿಸುವ ಕಂಪಿಸುವ ಸೂಜಿ, 

ಇದ್ದರೂ ಅದರಾಚೆ ಏನಿದೆಯೆಂಬ ಕಲ್ಪನೆ ನಿನಗಿಲ್ಲ.  

 

*****


AVALOKITESHWARAA/TRAILOKYESHWARAA-1 - H. S. SHIVA PRAKASH'S 'AVALOKITESHWARAA/TRAILOKYESHWARAA-1' "ಅವಲೋಕಿತೇಶ್ವರಾ/ತ್ರೈಲೋಕ್ಯೇಶ್ವರಾ-1"

Dear friends ... I received my copy of eminent Kannada poet, playwright, and translator Prof. HS Shiva Prakash's collected poems HOGI BANNI RTUGALE ಹೋಗಿ ಬನ್ನಿ ಋತುಗಳೇ on Friday, 12th November 2021, sent with great affection and care and alacrity by Rajendra Prasad ... and a little bit of drama enacted by two post offices that sent me into a state of anxiety and frantic phone-calling ... this was two days before the formal launch of the book ... though I very much wanted to, I was not in a position to go to Bangalore to attend the launch-function ... in my own way I decided to celebrate the launch of this much awaited 'samagra samputa' by translating a poem from this collection ... I completed my draft to my satisfaction and sent it to Sir on the 13th late evening for his approval and permission, knowing fully well that he would be busy the next day ... he promised to read and respond ... and I am pleased to say he has cleared the translation with slight changes and has graciously permitted me to share it with all of you ... 

So, my English translation of Part 1 of the poem 

 

 

Kannada original: AVALOKITESHWARAA/TRAILOKYESHWARAA ಅವಲೋಕಿತೇಶ್ವರಾ/ತ್ರೈಲೋಕ್ಯೇಶ್ವರಾ

Poet: H S Shiva Prakash

English translation: S Jayasrinivasa Rao

 

 

AVALOKITESHWARAA/TRAILOKYESHWARAA

 

 

Avalokiteshwara is the Most Compassionate form of Buddha; A well-known representation of Avalokiteshwara can be seen on the murals of Ajanta.  Trailokyeshwara is the three-headed statue of Shiva in the Gajapuri (Elephanta) cave-temple near Mumbai.  I wanted to write this poem on 6th December 1992; but was able to write it on 13th December 1992.

  

To

The dog that came to bite me on the night of the 13th, and went away quietly unable to bite

 

– ONE –

 

Avalokiteshwaraa,

The cool sun in your left eye

The warm moon in the right

 

Dipping my finger in 

the pleasing vermillion of 

dawns and dusks,

I mark a tilak on your

stone-forehead

 

That serene face of yours,

let it stand guard

till this world is destroyed,

as it already has now!

But now is the festival of tridents!

Trident, spear, lance, axe

flashing in hands

in the heartbeats of the land

to beat out of rhythm 

to heavy-striding feet

lit by the volcano’s

heat, the burning heat, the heat 

 

as the sun catches fire and blazes

nigi nigi nigi nigi

on the sky’s crown like

a blood-red tilak,

the procession sets off

towards the netherworld

of serpents

 

Coiled black cobras

came alive

rushed forward in

human-sized hordes 

on the holy streets of

the cultured city

 

In my heart resides

mocking images of 

that heady

show of piety.

 

*****

Posted on 15th November 2021 



Wednesday, November 17, 2021

ಗೋರಿಗಳ ಮೇಲಿನ ಹಳದಿ ಹೂವುಗಳು HUMBERTO AK'ABAL'S "THE YELLOW FLOWERS OF THE GRAVES"

ಮೂಲ: THE YELLOW FLOWERS OF THE GRAVES

ಕವಿ: HUMBERTO AK’ABAL, GUATEMALA ಉಂಬೆರ್ತೋ ಅಖ್ಅಬಾಲ್ಗ್ವಾಟೆಮಾಲಾ

Translated from original K’iche into the Spanish by Humberto Ak’Abal and from the the Spanish into English by Miguel Rivera (with Fran Quinn) 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

 

ಗೋರಿಗಳ ಮೇಲಿನ ಹಳದಿ ಹೂವುಗಳು

 

ತೋಳಗಳು ಊಳಿಡುತ್ತವೆ, ರಾತ್ರಿಯ ನುಚ್ಚುನೂರಾಗಿಸುತ್ತವೆ:

ಗಾಳಿಯೊಂದಿಗೆ ಜಗಳವಾಡುತ್ತವೆ.

“ಇದು ಅಪಶಕುನ ... ”

 

ಆ ಹಿಂದಿನ ದಿನಗಳಲ್ಲಿ

ಗೂಬೆಗಳು ಯಾವಾಗಲೋ ಒಮ್ಮೆ ಕೂಗುತ್ತಿದ್ದವು,

ಈಗ ಅವು ಹೆಚ್ಚು-ಕಮ್ಮಿ ಯಾವಾಗಲೂ ಕೂಗುತ್ತವೆ.

“ಇದು ದುರದೃಷ್ಟ ... ”

 

ಮರಣಗಾಳಿಯೊಂದು ಪರ್ವತಶಿಖರದಿಂದ ಕೆಳಗಿಳಿಯುತ್ತೆ,

ಥಂಡಿ ಗಾಳಿಯದು, ಕಡಿಯುತ್ತೆ

ರೇಬೀಸ್-ಪೀಡಿತ ನಾಯಿಯ ಹಾಗೆ ...

ಹೂವುಗಳು ಹೆದರಿ ಬಾಗುತ್ತವೆ,

ಮಧ್ಯಾಹ್ನದ ಮುಂಚೆಯೇ ಬಾಡುತ್ತವೆ.

 

ಆ ದಿನಗಳಿಗೆ ನಾವು ಹೋಗಬಲ್ಲೆವಾದರೆ

ಭೂಮಿ ಮನುಜನ ಸಂಗ

ಹಾಡುತ್ತಿದ್ದ ಆ ದಿನಗಳಿಗೆ.

 

ಈಗ ಸಸಿಗಳನ್ನು ಸಿಗಿದುಹಾಕುತ್ತಾರೆ

ಶಿಶುಗಳ ಚೀತ್ಕಾರ ಪೀಡಿಸುವುದಿಲ್ಲ 

ಯಾರನ್ನೂ, ಕರುಣವಿಲ್ಲ ಯಾರಿಗೂ:

ಆಕಾಶವು ತನ್ನ ಬಾಯಿ ತೆರೆದು, ಸಾವು

ಅಡಗಿಸಿದ ಚೀತ್ಕಾರವನ್ನು ನುಂಗುತ್ತದೆ.

 

‘ಇಂಡಿಯನ್’ರಾದ ನಮ್ಮನ್ನು ಯಾಕೆ ಪೀಡಿಸುತ್ತಾರೆ?

ನಾವು ನಿನಗೇನ ಮಾಡಿದೆವು ಗ್ವಾಟೆಮಾಲಾ?

ಯಾಕೀ ದ್ವೇಶ? ಯಾಕೀ ರಕ್ತದ ದಾಹ?

 

ಮೃತ್ಯುವಿಗೆ ನಾವು ಯಾವ ಋಣವೂ 

ಸಂದಾಯ ಮಾಡಬೇಕಾಗಿಲ್ಲ.

 

*****


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...