Tuesday, September 20, 2022

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ: TO DEATH: REQUIEM Poem 8

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಮೃತ್ಯುವಿಗೆ


ರೆಕ್ವಿಯೆಮ್ 

 

ಹೇಗೂ ನೀನು ಬಂದೇ ಬರುತ್ತಿ, ಈಗಲೇ ಯಾಕೆ ಬರಬಾರದು?

ನಿನಗಾಗಿ ಕಾಯುತ್ತಿದ್ದೇನೆ ನಾನು – ಕಷ್ಟದ ಬದುಕು ನನ್ನದು.

ನಾನು ದೀಪ ಆರಿಸಿ ನಿನಗಾಗಿ ಬಾಗಿಲು ತೆರೆದಿಡುವೆ.

ಎಷ್ಟು ಸರಳವಾಗಿರುವೆ ನೀನು, ಎಂತ ಪವಾಡವಿದು!

ನಿನಗಿಷ್ಟವಾದ ಮುಖವಾಡ ಹಾಕಿಕೊ,

ಛೇದಿಸಿ ನುಗ್ಗು ವಿಷಮಯ ಸಿಡಿಗುಂಡಿನಂತೆ,

ಇಲ್ಲಾ ಎಚ್ಚರಿಕೆಯಿಂದ ಬಾನುರಿತ ಕಳ್ಳನಂತೆ,

ಲ್ಲಾ ಟೊಯ್‌ಫಸ್ ಜ್ವರದಿಂದ ಸನ್ನಿಹಿಡಿದವನಂತೆ ಬಾ,

ಇಲ್ಲಾ ಯಾವುದರ ಬಗ್ಗೆ ಕೇಳಿ ಕೇಳಿ ಸಾಕಾಗಿದ್ದೇವೋ,

ನೀನೇ ಸೃಷ್ಟಿಸಿಕೊಂಡ ಆ ನಿನ್ನ ಬೃಹತ್-ರೂಪದಂತೆ ಬಾ,

ಎಲ್ಲಿ ನಿನ್ನ ನೀಲಿ ಟೋಪಿಯ ಅಂಚು ನೋಡೋಣ,

ನೋಡು, ಆ ಚೌಕಿದಾರ ಹೆದರಿ ಬಿಳಿಚಿಹೋಗಿದ್ದಾನೆ.

ಈಗ ನನಗೆ ಎಲ್ಲಾ ಒಂದೇ.

ನಿಸೇಯಿ ನದಿ ತಿರುವುತಿದೆ, ಧ್ರುವತಾರೆ ಹೊಳೆಯುತಿದೆ,

ಅವನ ಕಂಗಳ ಕಡುನೀಲಿ ಕಾಂತಿಗೆ

ಅಂತಿಮ ಭೀತಿಯ ಚಾದರ ಹೊದ್ದಿದೆ.

 

ಗಸ್ಟ್ 19, 1939 ಫೌಂಟನ್ ಹೌಸ್

 

*****


Sunday, September 18, 2022

ತೀರ್ಪುವಾಕ್ಯ: ರೆಕ್ವಿಯೆಮ್ ೭ - ANNA AKHMATOVA's 'THE SENTENCE: REQUIEM 7'

ಮೂಲ: REQUIEM – Poem 7

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 



ತೀರ್ಪುವಾಕ್ಯ


ರೆಕ್ವಿಯೆಮ್ 

 

ನನ್ನ ಬಡಿಯುತ್ತಿರುವ ಎದೆಯ ಮೇಲೆ

ಕಲ್ಲುಬಂಡೆಯ ಹಾಗೆ ಬಂದು ಬಿದ್ದಿತು ಆ ವಾಕ್ಯ.

ಅಡ್ಡಿಯಿಲ್ಲ, ನಾನು ತಯಾರಾಗಿದ್ದೇನೆ, ಅಲ್ಲವಾ?

ಹೇಗಾದರೂ ಇರಲಿ, ನಾನು ಸಂಬಾಳಿಸುವೆ.

 

ಮಾಡುವುದು ಬಹಳವಿದೆ:

ನನ್ನ ನೆನಪುಗಳನ್ನು ಅಳಿಸಬೇಕು

ಕಡೆಯ ನೆನಪಿನವರೆಗೂ,

ನನ್ನ ಆತ್ಮವನ್ನು ಕಲ್ಲಾಗಿ ಮಾರಿಸಕೊಳ್ಳಬೇಕು,

ಮತ್ತೊಮ್ಮೆ ಬದುಕಲು ಕಲಿಯಬೇಕು.

 

ಲ್ಲವಾದರೆ

ಬೇಸಿಗೆಯ ಬಿಸಿ ಮುರಮುರವಿದೆ

ಯಾವುದೊ ಹಬ್ಬವಿದ್ದಂತೆ, ನನ್ನ ಜನ್ನಲಿನ ಹೊರಗೆ.

ಈ ಅರೆಬೆಳಕಿನ ದಿನದ ಬಗ್ಗೆ, 

ಈ ಖಾಲಿಯಾಗಿರುವ ಮನೆಯ ಬಗ್ಗೆ 

ಬಹಳ ಕಾಲದ ಹಿಂದೆಯೇ ನನಗೆ ಗೊತ್ತಿತ್ತು.

 

ಬೇಸಗೆ 1939

 

*****


ಈ ಹಗುರ ವಾರಗಳು ಹಾರಿಹೋಗುತ್ತಿವೆ: ರೆಕ್ವಿಯೆಮ್ ೬ - ANNA AKHMATOVA's 'THE LIGHT WEEKS FLY: REQUIEM 6'

ಮೂಲ: REQUIEM – Poem 6

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ಈ ಹಗುರ ವಾರಗಳು ಹಾರಿಹೋಗುತ್ತಿವೆ


ರೆಕ್ವಿಯೆಮ್ 

 

ಈ ಹಗುರ ವಾರಗಳು ಹಾರಿಹೋಗುತ್ತಿವೆ,

ನಾಗಿದೆಯೆಂದು ನನಗೆ ಗೊತ್ತಾಗುತ್ತಿಲ್ಲ.

 

ನನ್ನ ಮುದ್ದಿನ ಮಗನೆ, 

ಹೇಗೆ ಆ ಬಿಳಿಯ ರಾತ್ರಿ

ಜೈಲಿನೊಳಗೆ ಬಂದು ನಿನಗಾಗಿ ನೋಡಿತು,

ಅದು ಮತ್ತೆ ನೋಡುತ್ತೆ

ಕೆಂಗಣ್ಣುಗಳ ಗಿಡುಗನಂತೆ, 

ನಿನಗೆ ಹೇಳುತ್ತೆ

ನಿನ್ನ ಎತ್ತರವಾದ ಕಲ್ಲು ಶಿಲುಬೆಯ ಬಗ್ಗೆ, 

ಸಾವಿನ ಬಗ್ಗೆ.

 

1939

 

*****


ಅತ್ತೆ ನಾನು ಹದಿನೇಳು ತಿಂಗಳು: ರೆಕ್ವಿಯೆಮ್ ೫ - ANNA AKHMATOVA's 'FOR SEVENTEEN MONTHS I CRIED: REQUIEM 5'

ಮೂಲ: REQUIEM – Poem 5

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

 

ಅತ್ತೆ ನಾನು ಹದಿನೇಳು ತಿಂಗಳು


ರೆಕ್ವಿಯೆಮ್ ೫ 


ಅತ್ತೆ ನಾನು ಹದಿನೇಳು ತಿಂಗಳು,

ಕರೆದೆ ನಿನ್ನನ್ನು ಮನೆಗೆ ಬಾ ಎಂದು.

ಗಲ್ಲಿಗೇರಿಸುವವರ ಕಾಲಿಗೆ ಬಿದ್ದೆ,  

ನಿನಗಾಗಿ, ನನ್ನ ತುಂಟನೇ,

ನನ್ನ ಮಗನೇ.

ಲ್ಲವೂ ಸಿಕ್ಕುಸಿಕ್ಕಾಗಿಬಿಟ್ಟಿದೆ ಎಂದೆಂದಿಗೂ,

ಯಾವುದು ಮೃಗ

ಯಾವುದು ಮನುಷ್ಯ

ಎಂದು ನನ್ನಿಂದ ಹೇಳಲಿಕ್ಕಾಗಲ್ಲ ಇನ್ನೆಂದೂ. 

ಎಷ್ಟು ಕಾಲ ಕಾಯಬೇಕು ನಾವು ಕೊನೆಯ ತೀರ್ಪಿಗಾಗಿ?

ಇರುವುದೆಲ್ಲ ಬರೀ

ಧೂಳು ಕವಿದ ಹೂವುಗಳು

ಧೂಪದಾನಿಗಳ ಖಣಖಣಿಕೆ

ಮತ್ತೆ ಅಲ್ಲಿ ಇಲ್ಲಿ,

ಲ್ಲದ ಪ್ರದೇಶಕ್ಕೆ ಹೋಗಲು ಸುಳಿವುಗಳು,

ಇದರ ಮಧ್ಯೆ, 

ನನ್ನ ಕಣ್ಣಲ್ಲಿ ನೇರವಾಗಿ ಕಣ್ಣಿಟ್ಟು ನೋಡುತ್ತ,

ಗಲೇ ನಿನ್ನ ಸಾವೆಂದು ನನ್ನನ್ನು ಹೆದರಿಸುತ್ತಿತ್ತು

ಒಂದು ಮಹಾ ನಕ್ಷತ್ರ.


*****


ನೀನೇದಾರೂ ನೋಡಿದ್ದರೆ, ಓ ತಮಾಶೆಗಾರ್ತಿಯೇ: ರೆಕ್ವಿಯಮ್ ೪ - ANNA AKHMATOVA's 'IF YOU COULD HAVE SEEN, MOCKER: REQUIEM 4'

ಮೂಲ: REQUIEM – Poem 4

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

 

ನೀನೇದಾರೂ ನೋಡಿದ್ದರೆ, ಓ ತಮಾಶೆಗಾರ್ತಿಯೇ

 

ರೆಕ್ವಿಯಮ್ ೪


ನೀನೇದಾರೂ ನೋಡಿದ್ದರೆ, ಓ ತಮಾಶೆಗಾರ್ತಿಯೇ,

ನಿನ್ನೆಲ್ಲ ಮಿತ್ರ-ಮೈತ್ರಿಣಿಯರ ಪ್ರೀತಿಪಾತ್ರಳೇ,

ಅವರ ಅತಿಪ್ರೀತಿಯಿಂದ ಕೆಟ್ಟುಹೋದವಳೇ, 

ತ್ಸಾರಸ್ಕೊಯೆ ಸೆಲೊ*-ದ ಸಂತುಷ್ಟ ಪಾಪಿಯೇ,

ಏನಾಯಿತು ನಿನ್ನ ಬದುಕು:

ಕೈಯಲ್ಲಿ ಗಂಟು-ಪೊಟ್ಟಣ ಹಿಡಕೊಂಡು, 

ಸಾಲಿನಲ್ಲಿ ಮುನ್ನೂರನೆಯವಳಾಗಿ

ನೀನು ಶಿಲುಬೆಗಳಡಿಯಲ್ಲಿ ನಿಂತಿರುವೆ,

ನಿನ್ನ ಕಣ್ಣೀರು ಕೊರೆಯುವುದು ಕುಳಿಯನ್ನು

ಹೊಸ ವರ್ಷದ ಹಿಮದಲ್ಲಿ – 

ಅಲ್ಲಿ ಜೈಲಿನ ಪಾಪ್ಲರ್ ಮರ 

ಬಾಗುವುದು ತೂಗುವುದು,

ಯಾವ ಸದ್ದೂ ಇಲ್ಲ ಅಲ್ಲಿ – 

ಲ್ಲಿ ಎಷ್ಟೊಂದು ಅಮಾಯಕ ಜೀವಗಳ

ಕೊನೆಯಾಗುತ್ತೋ ಅಲ್ಲಿ ... 

 

*”ತ್ಸಾರ್-ನ ಊರು.”  ಅನಾ ಅಖ್ಮತೊವಾ-ರು ‘ತ್ಸಾರಸ್ಕೊಯೆ ಸೆಲೊ’ ಎಂಬ ಹೆಸರಿನ ಊರಿನಲ್ಲಿ ತಮ್ಮ ಬಾಲ್ಯ-ಯೌವನವನ್ನು ಕಳೆದರು.  ಸೇಂಟ್ ಪೀಟರ್ಸ್‌ಬರ್ಗ್-ನ ಚಿತ್ತಾಕರ್ಷಕ ಉಪನಗರವಾದ ‘ತ್ಸಾರಸ್ಕೊಯೆ ಸೆಲೊ’ ಶ್ರೀಮಂತ ರಾಜಮನೆತನದ ಬೇಸಿಗೆ ನಿವಾಸ ಮತ್ತು ರಷ್ಯಾದ ಶ್ರೀಮಂತರ ಭವ್ಯ ಮಹಲುಗಳ ಊರಾಗಿದೆ.

*****

Thursday, September 8, 2022

ಇಲ್ಲ, ಇದು ನಾನಲ್ಲ: ರೆಕ್ವಿಯಮ್ ೩ - ANNA AKHMATOVA's 'NO THIS IS NOT I: REQUIEM 3'

ಅನಾ ಅಖ್ಮತೋವಾ-ರ ‘ರೆಕ್ವಿಯಮ್’ (REQUIEM) ಕವನ ಸರಣಿಯ ಮೂರನೆಯ ಕವನವಿದು.  ಈ ನನ್ನ ಕನ್ನಡ ಅನುವಾದಕ್ಕೆ ನಾನು ಲೆನೊರ್ ಮೆಯ್‌ಹ್ಯೂ ಹಾಗೂ ವಿಲ್ಯಮ್ ಮೆಕ್‌ನಾಟನ್-ರ (Lenore Mayhew and William McNaughton) ಇಂಗ್ಲಿಷ್ ಅನುವಾದವನ್ನು ಮೂಲವಾಗಿಟ್ಟುಕೊಂಡಿರುವೆ; ಜತೆಗೆ ಡಿ. ಎಮ್. ಟಾಮಸ್-ರ (D. M. Thomas) ಇಂಗ್ಲಿಷ್ ಅನುವಾದವನ್ನೂ ಪರಿಶೀಲಿಸಿರುವೆ.  


 

ಮೂಲ: NO, THIS IS NOT 1: REQUIEM 3 

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


 

ಲ್ಲ, ಇದು ನಾನಲ್ಲ

ರೆಕ್ವಿಯಮ್ ೩


ಲ್ಲ, ಇದು ನಾನಲ್ಲ,

ಬೇರೆ ಯಾರೋ ನರಳುತ್ತಿದ್ದಾರೆ,

ಇಷ್ಟು ದುಃಖ 

ನಾನು ಸಹಿಸಿರಲಾರೆ,

ಇಲ್ಲೇನು ನಡೆದಿದೆಯೋ

ಅದರ ಮೇಲೆ ಕಪ್ಪು ಚಾದರ

ಹೊದೆಯಲಿ ಅವರು,

ತೆಗೆದುಕೊಂಡು ಹೋಗಲಿ ಅವರು

ಲಾಂದ್ರಗಳನ್ನು ... 

ರಾತ್ರಿ.

 

*****


ಶಾಂತ ಡಾನ್ ನದಿ ಶಾಂತವಾಗಿ ಹರಿಯುತ್ತಿದೆ: ರೆಕ್ವಿಯಮ್ ೨ - ANNA AKHMATOVA's 'THE SILENT DON FLOWS SILENTLY: REQUIEM 2'

ಮೂಲ: THE SILENT DON FLOWS SILENTLY: REQUIEM 2

ಕವಿ: ಅನ್ನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 



ಶಾಂತ ಡಾನ್ ನದಿ ಶಾಂತವಾಗಿ ಹರಿಯುತ್ತಿದೆ

ರೆಕ್ವಿಯಮ್ ೨

 

ಶಾಂತ ಡಾನ್ ನದಿ ಶಾಂತವಾಗಿ ಹರಿಯುತ್ತಿದೆ,

ಹಳದಿ ಚಂದ್ರ ಮನೆಯೊಳಗೆ ಬರುತ್ತದೆ,

 

ಟೊಪ್ಪಿ ಓರೆಯಾಗಿ ಹಾಕಿಕೊಂಡು ಬರುತ್ತದೆ,

ಆ ಹಳದಿ ಚಂದ್ರ ಒಂದು ಪ್ರೇತವನ್ನು ನೊಡುತ್ತದೆ

 

ಕಾಯಿಲೆಬಿದ್ದ ಹೆಂಗಸೊಬ್ಬಳು

ಒಬ್ಬಂಟಿ ಹೆಂಗಸೊಬ್ಬಳು

 

ಗಂಡ ಗೋರಿಯೊಳಗೆ, ಮಗ ಜೈಲಿನೊಳಗೆ . . .

ನನಗಾಗಿ ಒಂದು ಪ್ರಾರ್ಥನೆ ಸಲ್ಲಿಸಿ.

 

*****


ನಿನ್ನನ್ನು ನಸುಕಿನಲ್ಲಿ ಕೊಂಡೊಯ್ದರು: ರೆಕ್ವಿಯೆಮ್ ೧ - ANNA AKHMATOVA's 'THEY TOOK YOU AWAY AT DAYBREAK: REQUIEM 1'

ಮೂಲ: THEY TOOK YOU AWAY AT DAYBREAK: REQUIEM 1

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ನಿನ್ನನ್ನು ನಸುಕಿನಲ್ಲಿ ಕೊಂಡೊಯ್ದರು

ರೆಕ್ವಿಯೆಮ್ ೧ 

 

ನಿನ್ನನ್ನು ನಸುಕಿನಲ್ಲಿ ಕೊಂಡೊಯ್ದರು,

ಮತ್ತೆ ನಾನು, ಒಂದು ಶವವನ್ನು ಹಿಂಬಾಲಿಸುವವಳಂತೆ, ಹೊರ ಬಂದೆ.

ಆ ಕತ್ತಲ ಕೋಣೆಯಲ್ಲಿ ಮಕ್ಕಳು ಅಳುತ್ತಿದ್ದರು ,

ದೇವರ ಕೋಣೆಯಲ್ಲಿ, ಮೇಣದಬತ್ತಿ ಬಡವಾಗಿ ಉರಿಯುತ್ತಿತ್ತು.

ನಿನ್ನ ತುಟಿಗಳು ಪವಿತ್ರಬಿಂಬದ ಥಂಡಿಯನ್ನು ಹಿಡಿದಿತ್ತು,

ನಿನ್ನ ಹಣೆಯ ಮರಣ ಬೆವರನ್ನು ಮರೆಯಲಾರೆ,

ಹೋಗುವೆ ನಾನು ಹತರಾದ ಸ್ಟ್ರೆಲ್ಟ್‌ಸಿ* ಸೈನಿಕರ ಹೆಂಡಿರಂತೆ

ಹೋಗಿ ಕ್ರೆಮ್ಲಿನ್-ನ ಗೋಪುರಗಳ ಕೆಳಗೆ ನಿಂತು ಊಳಿಡುವೆ.

 

1935

*****

*‘ಸ್ಟ್ರೆಲ್ಟ್‌ಸಿ’ ಹೆಸರಿನ ವಿಶೇಷ ಕಾವಲುಪಡೆಯು ಒಂದು ಕಾಲದಲ್ಲಿ ರಷ್ಯಾದ ತ್ಸಾರ್‌-ಳನ್ನು ರಕ್ಷಿಸುತ್ತಿತ್ತು.  ಮುಂದೊಂದು ಸಲ ಸ್ಟ್ರೆಲ್ಟ್‌ಸಿ-ಯ ಕಾವಲುಪಡೆಯ ಸೈನಿಕರು ರಾಜನ ವಿರುದ್ಧ ದಂಗೆಯೆದ್ದರು.  ದಂಗೆಯು ವಿಫಲವಾಯಿತು; ಸ್ಟ್ರೆಲ್ಟ್‌ಸಿ ಸೈನಿಕರನ್ನು ಸೆರೆಹಿಡಿದು ಮರಣದಂಡನೆ ವಿಧಿಸಿದರು.  ಸ್ಟ್ರೆಲ್ಟ್‌ಸಿ ಸೈನಿಕರ ಹೆಂಡತಿಯರ ದುಃಖ ನೋವುಗಳ ಉಲ್ಲೇಖವಿದು.     


ನಿವೇದನೆ - ANNA AKHMATOVA's 'DEDICATION to REQUIEM'

1935 ಮತ್ತು 1961 ರ ಅವಧಿಯಲ್ಲಿ ಅನಾ ಅಖ್ಮತೋವಾ-ರು REQUIEM ‘ರೆಕ್ವಿಯೆಮ್’ (ಚರಮಗೀತೆ) ಎಂಬ ಹೆಸರಿನಡಿಯಲ್ಲಿ ಹತ್ತು ಸಣ್ಣ ಕವನಗಳನ್ನು ಬರೆದರು.  ಸೋವಿಯತ್ ಯೂನಿಯನ್-ನಲ್ಲಿ ಸ್ಟಾಲಿನ್-ನ ಮಹಾ ಶುದ್ಧೀಕರಣ’ದ (GREAT PURGE) ಅಭಿಯಾನದಲ್ಲಿ ಸಾಮಾನ್ಯ ಜನರು ಅನುಭವಿಸಿದ ದುಃಖ, ನೋವು, ಕೋಪ, ಹತಾಶೆಗಳನ್ನು ಈ ಕವನಗಳು ಬಿಂಬಿಸುತ್ತವೆ.  ಇದೇ ಅಭಿಯಾನದಲ್ಲಿ ತನ್ನ ಗಂಡನ ಮತ್ತು ಅವರ ಸಹಚರರ ಕೈದು ಹಾಗೂ ಸೋವಿಯತ್ ಗುಪ್ತ ಪೊಲಿಸರಿಂದ ತನ್ನ ಮಗನ ಬಂಧನದಿಂದಾಗಿ ಅನುಭವಿಸಿದ ದುಃಖ, ಸಂಕಟಗಳನ್ನು ಅವರು ಈ ಕವನಗಳಲ್ಲಿ ಬಿಡಿಸಿದ್ದಾರೆ.  ಮುಂದೆ ಹೋಗುತ್ತಾ, “ರೆಕ್ವಿಯೆಮ್” ಎಂಬ ಈ ಹತ್ತು ಸಣ್ಣ ಕವನಗಳ ಸರಣಿ ಸ್ಟಾಲಿನ ನಡೆಸಿದ ‘ಮಹಾ ಭೀತಿ’ಯ (GREAT TERROR) ಬಗ್ಗೆ ಬರೆದ ಅತಿ ಮುಖ್ಯ ಕವನಕೃತಿಯೆಂದು ಹೆಸರು ಪಡೆಯುತ್ತದೆ.  ಈ ಕವನಕೃತಿಗೆ ಅಖ್ಮತೋವಾ-ರು ಒಂದು ಸಣ್ಣ ಗದ್ಯ ಪ್ರಸ್ತಾವನೆ ಬರೆದಿದ್ದಾರೆ ಹಾಗೂ ಪದ್ಯ ರೂಪದಲ್ಲಿ ಒಂದು ‘ನಿವೇದನೆ’ (DEDICATION) ಬರೆದಿದ್ದಾರೆ.  ಈ DEDICATION-ನ್ನು ಕನ್ನಡಕ್ಕೆ ಅನುವಾದಿಸುವ ನನ್ನದೇ ಒಂದು ಪ್ರಯತ್ನ ಮಾಡಿರುವೆ...     


ಮೂಲ: DEDICATION to REQUIEM 

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ನಿವೇದನೆ

 

ಈ ದುಃಖದ ಮುಂದೆ ಪರ್ವತಗಳು ಬಾಗಬೇಕು

ನದಿಗಳು ನಿಲ್ಲಬೇಕು,

ದರೆ ಜೈಲಿನ ಬೀಗಗಳು ಗಟ್ಟಿ,

ಅವುಗಳ ಹಿಂದೆ ಇವೆ ಕೈದಿಗಳ 

ಲೇಬರ್-ಕ್ಯಾಂಪಿನ ಅಟ್ಟ-ಮಂಚಗಳು,

ಆ ಮಾರಕ ನೀರಸತೆ.

ಮಿಕ್ಕವರಿಗೆ ತಾಜಾ ಗಾಳಿ ಬೀಸುತಿದೆ,

ಮಿಕ್ಕವರಿಗೆ ಅತಿರಂಜಿತ ಸೂರ್ಯಾಸ್ತಗಳಿವೆ – 

ನಮಗೊ ಎಲ್ಲಾ ಅದೇ, ನಮಗೇನೂ ಗೊತ್ತಿಲ್ಲ,

ನಮಗೆ ಕೇಳುತ್ತೆ ಬೀಗದಕೈಗಳು ಹಾಗೂ

ಅವುಗಳ ದ್ವೇಷ ಕೆರಳಿಸುವ ಅರೆತ ಮಾತ್ರ. 

ಸೈನಿಕರ ಬಿಗಿ ಹೆಜ್ಜೆಗಳು ಮಾತ್ರ.

ನಾವು ಏಳುವೆವು ಬೆಳಗ್ಗಿನ ಆರಾಧನೆಗೆಂದು 

ಹೋಗುವೆವು ನಗರದೆಡೆಗೆ, 

ಛಿದ್ರವಿಚ್ಫಿದ್ರವಾದ ನಗರದೆಡೆಗೆ, 

ತಿರುಗಿ ಬರುವಾಗ

ನಮ್ಮನೇ ನಾವು ಭೇಟಿಯಾಗುವೆವು, 

ಸತ್ತವರನ್ನು, ಉಸಿರಿಲ್ಲದವರನ್ನು.

ಸೂರ್ಯ ಕೆಳಗಿಳಿದಿದ್ದಾನೆ, 

ನೆವಾ ನದಿಯ ಮೇಲೆ ಮಂಜು ಕವಿದಿದೆ,

ದೂರದಲ್ಲೆಲ್ಲೋ ಆಶೆ ಹಾಡುತಿದೆ.

ಆ ತೀರ್ಪು-ವಾಕ್ಯ ... ತತ್‌ಕ್ಷಣ ಕಣ್ಣೀರು,

ಎಲ್ಲವನ್ನೂ ಕಿತ್ತುಕೊಂಡರು,

ಅವಳ ಉಳಿದ ಬದುಕು, ಅವಳ ಹೃದಯದಿಂದ ಹರಿದರು,

ನೆಲಕ್ಕುರುಳಿಸಿದ ಅವಳನ್ನು ಒಬ್ಬ ಪುಂಡ

ದರೂ ಅವಳು ನಡೆಯುತ್ತಿದ್ದಾಳೆ ... ಎಡವುತ್ತಿದ್ದಾಳೆ ... ಒಬ್ಬಳೇ ... 

ಲ್ಲಿದ್ದಾರೆ ಅವರೆಲ್ಲರೂ, ನರಕದಲ್ಲಿ ಜತೆಗೆ ವರುಷಗಳ 

ಕಳೆದ ಲ್ಲದ ಗೆಳೆಯರು?

ಸೈಬೀರಿಯಾದ ಹಿಮಗಾಳಿಯಲ್ಲಿ ಯಾವ 

ಅತಿಮಾನುಷದೃಶ್ಯಗಳು ಕಾಣುತ್ತಿವೆ ಅವರಿಗೆ?

ಚಂದ್ರನ ವರ್ತುಲದಲ್ಲಿ ಯಾವ 

ಭ್ರಾಂತಿಗಳ ದರ್ಶನವಾಗುತ್ತಿವೆ ಅವರಿಗೆ?

ಅವರೆಲ್ಲರಿಗೂ ಈ ವಿದಾಯವನ್ನು ಕಳಿಸುವೆ

ಅವರೆಲ್ಲರಿಗೂ ಒಳಿತಾಗಲಿ ಎಂದು ಬಯಸುವೆ

*****


ಒಂದು ನೆನಪು ಹುದುಗಿದೆ ನನ್ನೊಳಗೆ - ANNA AKHMATOVA's 'A MEMORY IS IN ME'

ಮೂಲ: A MEMORY IS IN ME

ಕವಿ: ಅನ್ನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ಒಂದು ನೆನಪು ಹುದುಗಿದೆ ನನ್ನೊಳಗೆ

 

ಒಂದು ನೆನಪು 

ಹುದುಗಿದೆ ನನ್ನೊಳಗೆ,

ಒಂದು ಬಾವಿಯ ತಳದಲ್ಲಿ

ಒಂದು ಬಿಳಿಯ ಕಲ್ಲು.

ಅದರೊಂದಿಗೆ

ಹೋರಾಡಲಾಗದು ನನ್ನಿಂದ,

ಬಯಸುವುದಿಲ್ಲ ಕೂಡ:

ಅದು ಲ್ಲಾಸ.

ಅದು ವೇದನೆ.

 

ದರೆ ಯಾರಾದರೂ

ನನ್ನ ಕಣ್ಣುಗಳನ್ನು ನೋಡಿದರೆ,

ಅವನಿಗೆ ಕಾಣುತ್ತೆ ಅದು.

ಅವನು ದುಃಖಪಡುತ್ತಾನೆ

ಯೋಚನಾಗ್ರಸ್ತನಾಗುತ್ತಾನೆ

ಹಳೆಯ ಕತೆಗಳನ್ನು 

ಕೇಳಲು ಇಷ್ಟಪಡುವವನ ಹಾಗೆ.

 

ಮನುಷ್ಯರನ್ನು ವಸ್ತುಗಳನ್ನಾಗಿ

ಮಾರ್ಪಡಿಸುವಾಗ, ದೇವರುಗಳು

ಮನಸ್ಸನ್ನು ಹಾಗೇ ಬಿಡುತ್ತಾರಂತೆ,

ಅಂತ ಹೇಳುತ್ತಾರೆ.

 

ನನ್ನ ಅಲೌಕಿಕ ದುಃಖಕ್ಕೆ

ಜೀವ ಕೊಡುವಲ್ಲಿ

ನೀನಾದೆ

ಒಂದು ನೆನಪು.

 

ಬೇಸಗೆ, 1916 ಸ್ಲೆಪ್‌ನ್ಯೊವೊ

 

*****


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...