Tuesday, August 31, 2021

ಮೂಲಭೂತ ಬಿಕ್ಕಟ್ಟುಗಳು MOOLABHOOTA BIKKATTUGALU - JULIAN KORNHAUSER'S 'FUNDAMENTAL DIFFICULTIES'

ಮೂಲFUNDAMENTAL DIFFICULTIES

ಕವಿಯೂಲ್ಯನ್ ಕೋನ್ಹಾವ್ಸ(ರ್), ಪೋಲಂಡ್ JULIAN KORNHAUSER, POLAND

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಮೂಲಭೂತ ಬಿಕ್ಕಟ್ಟುಗಳು

 

ಕವನವೆಂದರೇನು ಸರಳ ಯೋಚನೆಯೊಂದಕ್ಕೆ ತೊಟ್ಟಿಲು

ಕಾಣದ ಗುಡ್ಡದ ಮೇಲೆ ಹಳದಿ ಬಣ್ಣದ ಕೋಟೆಮನೆ 

ಗಾಳಿ ಗರಿಸಿಕೊಂಡ ಮಾಸಿದ ಕಾಗದದ ಹಾಳೆ

ಕವನವೆಂದರೇನು ನೆನಪಿನ ರಬ್ಬರ್ ಸ್ಟಾಂಪ್

ಶಸ್ತ್ರಾಗಾರದ ನಕಾಶೆ ಅವಸರದ ಉಸಿರು

ಅವಿವೇಕಿ ಕ್ಷಣವೊಂದರ ಮಿನುಗು

ನಿಜವಾಗಿಯೂ ಗೊತ್ತಿಲ್ಲ ನನಗೆ 

ಗೊತ್ತಿಲ್ಲ ನನಗೆ ಕವನಗಳು ಇನ್ನೂ ಅಜೀವವೇ ಎಂದು

ಜೀವಿಸಲು ಸಹಾಯ ಮಾಡುತ್ತಾವೆಯೇ ಎಂದು


***** 



ನೀವು ಈ ಲಕೋಟೆಯನ್ನು ತೆರೆಯುವುದಾದರೆ NEEVU EE LAKOTEYANNU - RYSZARD KRYNICKI'S 'IF YOU OPEN THIS LETTER'

ಮೂಲIF YOU OPEN THIS LETTER

ಕವಿರಿಶಾರ್ಡ ಕ್ರಿನಿತ್‌ಸ್ಕಿ, ಪೋಲಂಡ್ RYSZARD KRYNICKI, Poland

Translated from the Polish into English by ALYSSA VALLES

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ನೀವು ಈ ಲಕೋಟೆಯನ್ನು ತೆರೆಯುವುದಾದರೆ

 

ಇಷ್ಟೊಂದು ಸಮಯದ ನಂತರ

ಕೊನೆಗೂ ನಿಮಗೆ ತಲುಪಿದ ಪತ್ರದ

ಲಕೋಟೆಯನ್ನು ನೀವು ತೆರೆಯುವುದಾದರೆ

ಅದರೊಳಗಿಂದ ಊದಿರುವ ಕಣ್ಣಗುಡ್ಡೆಯೊಂದು

ಹೊರ ಬಿತ್ತೆಂದರೆ,

 

ಚಕಿತರಾಗಬೇಡಿ, ನಿಜವಾಗಿಯೂ,

ಪ್ರತಿ ಫೋ‌ನ್ ಕಾಲ್‌ನ ಕೊನೆಯಲ್ಲಿ

ರಿಸೀವರ್‌ನಿಂದ ಕಿವಿಯೊಂದು ಹೊರ ಬೀಳುವುದಾದರೆ

ಅದು ಎಲ್ಲವನ್ನೂ, 

ಕಿವಿಯ ಬಡಿಗಲ್ಲುಮೂಳೆಯನ್ನೂ

ಮತ್ತೆ ಸಣ್ಣ ಸಣ್ಣ ನಡುಗಿವಿಯ ಸುತ್ತಿಗೆಮೂಳೆಗಳನ್ನೂ ಕೂಡ

ತನ್ನೊಂದಿಗೆ ಎಳಕೊಂಡು ಬೀಳುವುದಾದರೆ,

ಪ್ರತಿ ಸಲ ನಾನು ಚಕಿತನಾಗಬೇಕೆಂದರೆ

ನಾನೇನು ಮಾಡಲಿ ಹೇಳಿ,

 

*****




Saturday, August 21, 2021

ಹಗುರವಾಗಿ ಅಗ್ಗವಾಗಿ - HAGURAVAAGI AGGAVAAGI - RYSZARD KRYNICKI'S 'LIGHTER AND CHEAPER'

ಮೂಲLIGHTER AND CHEAPER

ಕವಿರಿಶಾರ್ಡ ಕ್ರಿನಿತ್‌ಸ್ಕಿ, ಪೋಲಂಡ್ RYSZARD KRYNICKI, Poland

Translated from the Polish into English by ALYSSA VALLES

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ಹಗುರವಾಗಿ ಅಗ್ಗವಾಗಿ

 

ಬರೀ ಭೂಪಟಗಳಲ್ಲಿ ಮಾತ್ರ

ಇರುವ ದೇಶವಲ್ಲ ದು,

ಇಲ್ಲಿ ಮಾತ್ರವೇ ನೀವು ನಿಜಕ್ಕೂ

ನಿಮ್ಮ ಜೀವನೋಪಾಯವನ್ನು ಸಾಗಿಸಬಹುದು:

 

ಇಲ್ಲಿ ಜೀವನ ನಿರಂತರವಾಗಿ

ಹಗುರವಾಗುತ್ತಾ ಅಗ್ಗವಾಗುತ್ತಾ ಇರುತ್ತೆ

ಗಾಳಿಗಿಂತ ಹಗುರ

ಗಾಳಿಗಿಂತ ಅಗ್ಗ,

 

ಗಾಳಿ,

ನಿಮ್ಮ ಚಲನವಲನಗಳಿಗೆ ಅಡ್ಡಿ ಬರುವುದಿಲ್ಲ,

ನಿಮಗಿಂತ ಮೇಲೆ ತನ್ನನ್ನು ಏರಿಸಿಕೊಳ್ಳುವುದಿಲ್ಲ,

ಕೊಲ್ಲುವುದಿಲ್ಲ,

ಸುಳ್ಳು ಹೇಳುವುದಿಲ್ಲ

ನೋಡಿದ್ದೇನನ್ನೂ ಕೇಳಿದ್ದೇನನ್ನೂ

ಹೊರಗೆಡವುದಿಲ್ಲ,

 

ಬೇರೊಂದು ಲೋಕದಿಂದ ಬಂದ ನವಾಗಮನಿಯೇ,

ನಾವಿಬ್ಬರೂ ಅದೇ ಗಾಳಿಯನ್ನು ಉಸಿರಾಡುತ್ತೇವೆ

 

ಆದರೆ ನಾನದನ್ನು ಬೇರೆ ರೀತಿ ಉಸಿರಾಡುತ್ತೇನೆ.

 

*****

Friday, August 20, 2021

ಊರಿಂದಾಚೆ - OORINDAACHE - PIOTR SOMMER'S 'OUT OF TOWN'

ಮೂಲOUT OF TOWN

ಕವಿಪ್ಯೋತ್ರ್ ಸಾಮರ್ಪೋಲಂಡ್ – PIOTR SOMMER, Poland

Translated from the Polish into English by JAROSLAW ANDERS and W. MARTIN

ಕನ್ನಡ ಅನುವಾದಸ್ ಜಯಶ್ರೀನಿವಾಸ ರಾವ್

 

ಊರಿಂದಾಚೆ

 

ಇಷ್ಟು ವರುಷಗಳ ನಂತರ, ನೀರು ಈಗಲೂ ಸೋರುತ್ತದೆ – 

ವಾಲ್ವ್‌ನ್ನು ಬಿಗಿಯಲು ಯಾರೂ ಇಲ್ಲ.

ಹಳೆಯ ಪೈಪುಗಳ ಮೂಲಕ ಹರಿಯುತ್ತದೆ

ಕೆಳಗೆ ಸೆಪ್ಟಿಕ್ ಟ್ಯಾಂಕ್ ವರೆಗೂ.

 

ಮರುದಿನ ಬೆಳಗ್ಗೆ ಸೆಲ್ಲಾರಿನಲ್ಲಿ

ಮೋಟರ್‌ನ್ನು ಒಂದು ಕೋಲಿನಿಂದ ಚಲಾಯಿಸುವೆ.

ಅದು ಅಲ್ಲಾಡುತ್ತೆ, ಗುಡುಗುಡುತ್ತೆ, ಚಿಲಿಪಿಲಿಸುತ್ತೆ – 

ಸ್ವಿಚ್ಚು ಒಡೆದು ಹೋಗಿದೆ ಅಷ್ಟೇ.

 

ರಾತ್ರಿಯಲಿ ನೀರು ಗಮಿಸುತ್ತೆ

ಅಕ್ರಮವಾಗಿ, ಭೂಗತವಾಗಿ,

ಅದೇ ಕುಳಿಯಲ್ಲಿಗೆ 

ಕಳೆದ ವಸಂತದಲ್ಲಿ 

ಕೊತ್ತಂಬರಿ ಮೋಳಕೆಬಿಟ್ಟಲ್ಲಿಗೆ.

 

ಮತ್ತೆ ಬುಡದಲ್ಲಿ, ಅದರ ಪಕ್ಕದಲ್ಲಿ,

ಹುಲುಸಾಗಿ ಬೆಳೆದ,  ಕರ್ರಗಾಗುತ್ತಿರುವ ಪುಲ್ಲಂಪುರುಚಿ 

ರುಚಿರುಚಿಯಾಗಿ, ಹುಳ್ಳಹುಳ್ಳಗೆ,

 ಗುಪ್ತ ಸಂಭೋಗದಂತೆ.

 

ಮೋಟರ್ ಹುರಿದುಂಬಿಸುತ್ತದೆ

ರಾತ್ರಿ ಕಳೆದದ್ದನ್ನು ಹಿಂದಿರುಗಿಸುತ್ತದೆ.

ಬೆಳಗಾಗಿದೆ, ನಾನು ಮೆತ್ತಗೆ ಹಾಡುವೆ – 

ಅಪರಿಚಿತನೊಬ್ಬ ನನ್ನ ಸ್ಥಾನಕ್ಕೆ ಬರುವನು.

 

ಸೆಲ್ಲಾರಿನಲ್ಲಿ ಬೆಳಕಿನ ಹೊನಲೊಂದು

ಜನ್ನಲಿನ ಸರಳುಗಳನ್ನು ತೊಳೆಯುತ್ತದೆ,

ಅದು ಕಂಪಿಸುತ್ತದೆ, ಮೀಟರ್‌ನ್ನು ಬಡಿಯುತ್ತದೆ – 

ಮೆಟ್ಟಲೇರುತ್ತಾ ನಾನು ನನ್ನ ಲಯವನ್ನು ಹಿಡಿಯುವೆ.

 

ಮತ್ತೆ, ನೆನಪಿಗಿರಲಿಯಂತ ಹಾಡುವೆ – 

ಸಪ್ಟಿಕ್ ಟ್ಯಾಂಕಿನ ಪಕ್ಕದಿಂದ ಹಾದಾಗ – 

ಒಂದು ಸರಾಗ ಹರಿಯುವ, ನೆಲದಡಿಯ ಹಾಡು

ಪುಲ್ಲಂಪುರುಚಿ ಹಾಗೂ ಅಪರಿಚಿತನೊಬ್ಬನ ಕುರಿತ ಹಾಡು.

 

*****


  

ಔಷದ - OUSHADA - PIOTR SOMMER'S 'MEDICINE'

ಮೂಲMEDICINE

ಕವಿಪ್ಯೋತ್ರ್ ಸಾಮರ್ಪೋಲಂಡ್ – PIOTR SOMMER, Poland

Translated from the Polish into English by STANISLAW BARANCZAK and CLARE CAVANAGH

ಕನ್ನಡ ಅನುವಾದಸ್ ಜಯಶ್ರೀನಿವಾಸ ರಾವ್

 


ಷದ


ಒಂದು ಅಸಲಿ ನಿಂಬೇಹಣ್ಣನ್ನು ಮತ್ತೊಮ್ಮೆ ನೋಡುವಂತಾಯ್ತು.

ಅನಿಯಾ ಫ಼್ರಾನ್ಸಿನಿಂದ ಹಿಂದಿರುಗಿ ಬಂದಾಗ ತಂದಿದ್ದಳು.

ಅವಳಲ್ಲಿ ಗೊಂದಲವಿತ್ತು: ತಿರುಗಿ ಮನೆಗೆ ಬರಲಾ ವಿದೇಶದಲ್ಲೇ ಇರಲಾ?

ಹಾಗೆ ನೋಡುವುದಾದರೆ,  ಅವಳನ್ನಿಲ್ಲಿ ಹಿಡಿದಿಟ್ಟುರುವುದಾದರೂ ಏನು – 

ಕೆಲ ಮುಖಗಳು, ಕೆಲ ಪದಗಳು, ಈ ದುಗುಡ?

ನಿಂಬೇಹಣ್ಣು ಹಳದಿಯಾಗಿತ್ತು, ಅಸಲಿ ನಿಂಬೇಹಣ್ಣಿನಂತೆ ಇತ್ತು.

ಹೊರಗೆ ಬಿಸಿಲಲ್ಲಿ ಇಡಬೇಕಾಗಿಲ್ಲ ಇದನ್ನು

ಹಣ್ಣಾಗಲು ನಮ್ಮ ರಂಗಿಲ್ಲದ ಟೊಮೇಟೋಗಳ ಜತೆ.

ಯಾ, ನಾವೇ ಹಣ್ಣಾಗುವಂತೆ

ಬೆಳೆಯುತ್ತಾ ಹಳದಿಯಾಗುತ್ತಾ ವರುಷಗಳು ಕಳೆದಂತೆ.

ಇಲ್ಲ, ಇದು ತಂತಾನೇ ಪೂರ್ಣವಾಗಿತ್ತು ಆಗಲೇ

ಅವಳು ತಂದಿದ್ದಾಗಲೇ, ಬರೀ ಹಳದಿ ಅಲ್ಲ, ಬಂಗಾರ ಬಣ್ಣದ್ದು,

ಸ್ವಲ್ಪ ದೊರಗಾಗಿತ್ತು,

ಎಂದೇ ನಾನು ಕೃತಜ್ಞತೆಯಿಂದ ಸ್ವೀಕರಿಸಿದೆ.

 

ಲೋಕವೆಂಬ ದಪ್ಪ ತೊಗಲಿನಿಂದ ನನ್ನನ್ನು ನಾನು ಹೊದೆಯಲು ಬಯಸುವೆ,

ಹುಳ್ಳಗೆ, ಆದರೆ ರುಚಿಯಾಗಿರಬೇಕೆಂದು ಬಯಸುವೆ.

ಹುಡುಗನೊಬ್ಬ ನನ್ನನ್ನು ಇಷ್ಟವಿಲ್ಲದೇ ತಿನ್ನುತ್ತಾನೆ

ನಾನವನ ನೆಗಡಿಯನ್ನು ಗುಣಪಡಿಸುವೆ.

 

*****


MEDICINE

I saw a real lemon again.
Ania brought it back from France.
She’d been wondering: come home or stay abroad?
And come to think of it, what keeps her here –
a few faces, few words, this anxiety?
The lemon was yellow, it looked like the real thing.
You didn’t have to put it in the window
to ripen alongside our pale tomatoes.
Or as we ourselves ripen
growing up and growing yellow over years.
No, it was already entirely itself
when she brought it, not even yellow, but gold,
and a little rough,
so I took it gratefully.

I want to wrap myself in the thick skin of the world,
I want to be tart, but good-tasting –
some child swallows me reluctantly
and I help to cure his cold.

*****  

Sunday, August 8, 2021

‘O’ - ‘O’ - RYSZARD KRYNICKI's ‘O’

Dear friends ... my Kannada translation of Polish poet Ryszard Krynicki's poem 'O' ... I am stretching it a bit here ... I wanted to translate this poem, but wondered for a long time how to go about it ... It is all about the letter 'O' ... I tried to see if I can find a Kannada word that would fit into the idea that Krynicki was talking about in the poem ... I couldn't find one suitable for this purpose ... and so, I thought some more and decided to retain the English word as it is and work with it and so, this poem ended up being 'bilingual' orthographically ... I didn't want the translation to be gimmicky, so it is not 'gimmicky' ... at least, I thought, 'optimism' and 'pessimism' are not uncommon words ... so, here it is 'O' ... all suggestions are welcome ... 

 

ಮೂಲO

ಕವಿರಿಶಾರ್ಡ ಕ್ರಿನಿತ್‌ಸ್ಕಿ, ಪೋಲಂಡ್ RYSZARD KRYNICKI, Poland

Translated from the Polish into English by ALYSSA VALLES

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

‘O’

 

Optimism ದಿನದಿಂದ ದಿನಕ್ಕೆ ಬೆಳೆಯುತ್ತಿದೆ:

 

ದಿನದಿಂದ ದಿನಕ್ಕೆ ಅದರ ’O’ ಉಬ್ಬುತ್ತದೆ

ಅದರ ’O’ಗೆ ವಿರುದ್ಧವಾಗಿಅದರ ‘p’

(ಅಲ್ಲಿಂದಲೇ pessimism ಪ್ರಾರಂಭವಾಗುತ್ತೆ)

ಹಿಗ್ಗುವುದೂ ಇಲ್ಲ ಕುಗ್ಗುವುದೂ ಇಲ್ಲ

ತಂತಾನಾಗಿಯೇ ಇರುತ್ತೆ

(ವಾಸ್ತವವಾಗಿ ಅದೇ ಜಾಗದಲ್ಲಿರುತ್ತೆ

ವೈಯಕ್ತಿಕವಾಗಿ ಆಕಾರದಲ್ಲಿ ಕುಗ್ಗುತ್ತಿದೆ).

 

’O’, ಪದಗಳು ನಿನ್ನ ವರ್ಣಿಸಲು ಸೋಲುತ್ತವೆ:

 

ನೀನು ’O’ ಮೂಲಕ ಮಾತಾಡುವೆ

ನೀನು ’O’ ಮೂಲಕ ಇಣುಕಿ ನೋಡುವೆ

ನೀನು ’O’ ಮೂಲಕ ಕೇಳಿಸಿಕೊಳ್ಳುವೆ

ನೀನು ’O’ನ ಆಂತರಿಕ ಇಂಗಿತಗಳನ್ನು ತೃಪ್ತಿಸುವೆ,

ನಿದ್ರಿಸುವೆ ನೀನು ತೋರದ ’O’ ಒಂದನ್ನು ಬಾಯಲ್ಲಿಟ್ಟುಕೊಂಡು

ಏಳುವೆ ನೀನು ಅದಕ್ಕಿಂತಲೂ ತೋರದ ’O’ನೊಂದಿಗೆ:

ನೀನು ಇನ್ನೂ ಮತ್ತೂ ತೆರೆದುಕೊಳ್ಳುವೆ,

ನಿನ್ನ ಬಾಯಿ ಇನ್ನೂ ಮತ್ತೂ ಅಗಲವಾಗಿ ತೆರೆಯುತ್ತೆ,

ಕಿರುಚಲಿಕ್ಕಲ್ಲ, ನಗಲಿಕ್ಕಲ್ಲ,

ಒಪ್ಪವಾಗಲ್ಲ, ಊಹೆಗೂ ಮೀರಿದ್ದು.

 

ಇದು ಊಹೆಗೂ ಮೀರಿದ್ದು: ನೀನೇಳುವೆ, 

ನಿನ್ನ ಬಾಯಿಯೊಳಗೆ ಹಿಗ್ಗುತ್ತಿರುವ ’O’ನೊಂದಿಗೆ,

ಅದು ಅಕ್ಷರವಾ? ಅಂಕಿನಾ? ಸ್ವರವಾ?

ತನ್ನನ್ನು ಮೀರಿ ಬೇರೆ ಯಾವ ಲೋಕವೂ ಕಾಣಿಸದದಕೆ.


*****


ದಿಕ್ಕಿಲ್ಲದ ಕವನ - DIKKILLADA KAVANA - EWA LIPSKA's 'HOMELESS POEM'

ಮೂಲ: HOMELESS POEM

ಕವಿಏವಾ ಲೀಪ್ಸ್‌ಕ, ಪೋಲಂಡ್; EWA LIPSKA, Poland

Translated from the Polish into English by RYSZARD REISNER

ಕನ್ನಡ ಅನುವಾದಸ್. ಜಯಶ್ರೀನಿವಾಸ ರಾವ್

 

ದಿಕ್ಕಿಲ್ಲದ ಕವನ

 

ದಿಕ್ಕಿಲ್ಲದ ಕವನವೊಂದು ಗೊತ್ತುಗುರಿಯಿಲ್ಲದೇ

ಚಲಿಸುತ್ತಿದೆ ಕತ್ತಲು ಕಾಗದದ ಮೇಲೆ ಅಡ್ಡಡ್ಡಲಾಗಿ.

ಯಾರದ್ದೂ ಆಗದೆ.  ಕವಿ ಬಿಟ್ಟುಬಿಟ್ಟಿದ್ದಾಳೆ ಅದನ್ನು

ವಿಧಿಯ ಖಯಾಲಿಗೆ.  ಪದಗಳಲ್ಲಿ ಅನಾಥವಾಗಿ.

 

ಕೆಲವೊಮ್ಮೆ 

ಕವನಗಳು

ಕಾವ್ಯದೆಡೆ ನೋಡಿ ಬೊಗಳುವ 

ಯಾರಿಗೂ ಬೇಡವಾದ ನಾಯಿಗಳ ಹಾಗೆ. 

*****


ನೀನು ದಾಟುವ ರಸ್ತೆ - NEENU DAATUVA RASTE - RYSZARD KRYNICKI's 'THE STREET YOU CROSS'

ಮೂಲTHE STREET YOU CROSS

ಕವಿರಿಶಾರ್ಡ ಕ್ರಿನಿತ್‌ಸ್ಕಿ, ಪೋಲಂಡ್ RYSZARD KRYNICKI, Poland

Translated from the Polish into English by ALYSSA VALLES

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ನೀನು ದಾಟುವ ರಸ್ತೆ

 

ನೀನು ದಾಟುವ ರಸ್ತೆ

ಕವಲೊಡೆಯುತ್ತದೆ ಎರಡಾಗಿ, ಮೂರಾಗಿ:

 

ಈಗ ನೀನು ಗಮನಿಸಿದೆಯಲ್ಲ ಯಾರೋ

ಯಾವಾಗಲೂ ನಿನ್ನನ್ನು ಹಿಂಬಾಲಿಸುತ್ತಿದ್ದಾರೆಂದು

ಮತ್ತೆ ಆ ಬದಿಯಲ್ಲಿ ಬೇರೆ ಯಾರೋ

ಅಂದರೆ ಅವನು ತನ್ನ ಏಕಮಾತ್ರ ಬದುಕಿನ ಈ ಒಂದು ಕ್ಷಣವನ್ನು

ಪೂರ್ತಿಯಾಗಿ ಅವನದೇ ಹೆಜ್ಜೆಗಳನ್ನ ಬೆನ್ನಟ್ಟುವುದಕ್ಕಾಗಿ ಮೀಸಲಿಟ್ಟಿದ್ದಾನೆ,

 

ನ್ನು ಮುಂದೆ ಭ್ರಮೆ ಬೇಡ:

 

ನಿನ್ನ ಕಣ್ಣೆದುರಿನಲ್ಲೇ

ವಾಕ್ಯಾರ್ಥ ಒಂದು ನಿರರ್ಥಕ ಚಿತ್ತಕ್ರೀಡೆಯೆಂಬುದು ನಿಂತುಹೋಗುತ್ತದೆ  

ಮತ್ತೆ ನಿನ್ನ “ನೀನು” ಏಕಾಕಿಯಾಗಿದೆ ಎಂದನಿಸಬಹುದು

ಅದು ಒಂಟಿಯಾಗಿಲ್ಲ

ಅದು ಸಹನಾಭರಿತ ಭೂಮಿಯ ಮೇಲೆ ಗೊತ್ತುಗುರಿಯಿಲ್ಲದೇ ಅಲೆಯುವುದೂ ಇಲ್ಲ:

 

ದು 

ಯಾವ ಬೆಲೆಯೂ ತೆತ್ತಬಲ್ಲ

 

ಯಾರದೋ ಇರುವಿಕೆಯ ಬಯಕೆಯನ್ನು ಸಾಬೀತುಪಡಿಸುತ್ತದೆ

 

*****

Monday, August 2, 2021

ನಾನು ನೋಡುವೆ, ಕಾಯುವೆ NAANU NO:DUVE, KAAYUVE - KRYSTYNA MILOBEDZKA'S 'I LOOK AND WAIT'

Dear friends ... I have taken this big risk by translating this poem by the Polish poet, KRYSTYNA MILOBEDZKA (b. 1932) ... Stanislaw Baranczak, another influential Polish poet and writer, singled out her poems for their “dramatic ungramaticalness,” as they speak about elementary human relationships – between woman and man, mother and child – “in a language that is ‘being thought’” ... 

 

Commenting on her sparse diction Milobedzka herself says, “I think it would be best if each writer could invent their own language to write down the very little they have to say.  Only the necessary words.”  

 

Elzbieta Wojcik-Leese, who translated Milobedzka’s poems, says that with Milobedzka, the “Polish language is coaxed into poems revealing its inner energies.” “With Milobedzka’s poems the usual browsing through dictionaries, mental and printed, turns into an etymological – and existential – search.  Yet this portmanteau parsing is far from extravagant: her wordings are simple, seemingly ordinary.” “I look, intensely, at and for.  The looking becomes hearing; the hearing turns into associating, not only in my readings of the Polish originals, but also in my translations.  Milobedzka shows me that ‘listen’ inhabits the word ‘glisten,’ where I never saw it before.” Elzbieta Wojcik-Leese ‘invents her own translated language to convey Milobedzka’s experimental poems into English ... more collaborations than translations... ‘

 

I do so much want to capture what the poet wants to convey ... Polish to English to Kannada is a long journey and a giant linguistic-cultural leap ... I am not sure though ... but Milobedzka’s poems are fascinating as poems themselves and opens up possibilities for conveying thoughts and ideas differently .... 

 

ಮೂಲI LOOK AND WAIT

ಕವಿಕ್ರಿಸ್ಟೀನಾ ಮಿಲೊಬೆಡ್ಜ಼್ಕಪೋಲಂಡ್ KRYSTYNA MILOBEDZKA, POLAND

Translated from the Polish by ELŽBIETA WÓJCIK-LEESE

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ನಾನು ನೋಡುವೆ, ಕಾಯುವೆ

 

ನಾನು ನೋಡುವೆ, ಕಾಯುವೆ ಆಲಿಸುವೆ, ಕಾಯುವೆ

ನಡೆಯುವೆ, ಕಾಯುವೆ ತಿನ್ನುವೆ, ಕಾಯುವೆ, ನಿದ್ರಿಸುವೆ, ಕಾಯುವೆ

 

ದಿನವಲ್ಲದ ಹೊತ್ತಲ್ಲದ

 

ನಾನೂ ಅಲ್ಲದ ನೀನೂ ಅಲ್ಲದ

ಇಲ್ಲಿಂದಲೂ ಅಲ್ಲ ಅಲ್ಲಿ ಮೇಲೆವರೆಗೂ ಅಲ್ಲ

 

ಎಲ್ಲಿ ಇದು ನಡೀತಿದೆ  ಹೋಯ್ತು 


*****



ಇಡೀ ರಾತ್ರಿಯುದ್ದಕ್ಕೂ IDI: RATRIYUDDAKKU: - PIOTR MATYWIECKI'S 'THROUGH THE WHOLE NIGHT'

ಮೂಲTHROUGH THE WHOLE NIGHT

ಕವಿಪ್ಯೋತ್ರ್ ಮಾತಿವಿಯೆಚ್‌ಸ್ಕಿಪೋಲಂಡ್ PIOTR MATYWIECKI, POLAND

TRANSLATED FROM THE POLISH BY RYSZARD REISNER

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಇಡೀ ರಾತ್ರಿಯುದ್ದಕ್ಕೂ

 

ಇಡೀ ರಾತ್ರಿಯುದ್ದಕ್ಕೂ

ನನ್ನ ಮನಸ್ಸಾಕ್ಷಿ ಮತ್ತು ನಾನು

ಗುದ್ದಾಡಿದೆವು.

ಕಪ್ಪು ಬಿಳಿ ಆಕಾರಗಳು

ಚುರುಕಾಗಿ ಚಲಿಸಿದವು

ಚದುರಂಗದಾಟದಲ್ಲಿದ್ದಂತೆ,

ಬೂದುಬಣ್ಣದ ನಸುಕಿನೊಂದಿಗೆ

ಏಕತಾಳವಾಗಿ.

ಆಟದ ನಿಯಮಗಳು ಈಗ ಪ್ರಯೋಜನವಿಲ್ಲ

ಚದುರಂಗದ ಮಣೆಯನ್ನು ಒಗೆದೆ.         

ನನ್ನ ತಪ್ಪುಗಳನ್ನು ನಾನು ಯಾವುದೋ

ದಶಾಜ್ಞೆಯ ತೀರ್ಪಿಗೆ ಒಪ್ಪಿಸುವುದಿಲ್ಲ.

ನನ್ನೆದುರು 

ಇನ್ನೂ ಆಡಬೇಕಾದ, ಮತ್ತೂ ಗೆಲ್ಲಬೇಕಾದ 

ದಿನವೊಂದು ಚಾಚಿ ಬಿದ್ದಿದೆ.

 

*****


Sunday, August 1, 2021

ಧೈರ್ಯದಿಂದ ಹಕ್ಕಿನಿಂದ ಕೇಳು DHAIRYADINDA HAKKININDA KE:LU - JULIA HARTWIG'S 'DEMAND IT COURAGEOUSLY'

ಮೂಲ: DEMAND IT COURAGEOUSLY

ಕವಿ: ಯುಲಿಯಾ ಹಾರ್ತ್‌ವಿಗ್  JULIA HARTWIG, Poland

Translated from the Polish into English by JOHN & BOGDANA CARPENTER

ಕನ್ನಡ ಅನುವಾದ: ಸ್. ಜಯಶ್ರೀನಿವಾಸ ರಾವ್

 

ಧೈರ್ಯದಿಂದ ಹಕ್ಕಿನಿಂದ ಕೇಳು

 

ಮನುಷ್ಯ ಪ್ರಾಣಿಯೇ, ನಿನಗಾಗಿ ಸ್ವಲ್ಪ ಜಾಗ ಮಾಡಿಕೋ.

ಒಂದು ನಾಯಿ ಕೂಡ ತನ್ನ ಒಡೆಯನ ಮಡಿಯಲ್ಲಿ

ಸರಿಯಾಗಿ ಒಗ್ಗಿಸಿಕೊಳ್ಳಲು ಕೊಸರಾಡುತ್ತೆ.

ಅದಕ್ಕೆ ಜಾಗ ಬೇಕಿದ್ದಾಗ ಎದ್ದು ಓಡುತ್ತೆ,

ಯಾವ ಕರೆಗೂ, ಆದೇಶಕ್ಕೂ ಕಿವಿಗೊಡದೇ.

ನೀನು ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ಪಡೆಯಲಿಕ್ಕಾಗಲಿಲ್ಲವಾದರೆ,

ಧೈರ್ಯದಿಂದ ಹಕ್ಕಿನಿಂದ ಕೇಳು, ರೊಟ್ಟಿ ಪಲ್ಯ ಕೇಳುವಂತೆ.

ಮಾನವ ಘನತೆಗಾಗಿ, ಪ್ರತಿಷ್ಠೆಗಾಗಿ, ನಿನಗಾಗಿ ಸ್ವಲ್ಪ ಜಾಗ ಮಾಡಿಕೋ.

ಚೆಕ್ ಲೇಖಕ ಹ್ರಬಲ್ ಹೇಳಿದ್ದ:

“ನಾನು ಕಸಿದುಕೊಳ್ಳುವಷ್ಟು ಸ್ವಾತಂತ್ರ್ಯ ನನಗೆ ದೊರೆಯುತ್ತೆ” 

 

***** 


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...