Monday, February 14, 2022

‘ತೋಳ ಚಂದ್ರ'*ವು ನಾಕ್ಷತ್ರಿಕ ಶೂನ್ಯದಲ್ಲಿ ತೂಗುತ್ತಿರುವ ಸೂಜಿಗಲ್ಲು - AMANDA AIZPURIETE's 'THE WOLF MOON IS A MAGNET'

ಮೂಲTHE WOLF MOON IS A MAGNET SUSPENDED IN THE STARRY EMPTINESS

ಕವಿಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Mārta Ziemelis 

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್


 

ತೋಳ ಚಂದ್ರ*ವು ನಾಕ್ಷತ್ರಿಕ ಶೂನ್ಯದಲ್ಲಿ ತೂಗುತ್ತಿರುವ ಸೂಜಿಗಲ್ಲು

 

‘ತೋಳ ಚಂದ್ರ’ವು ನಾಕ್ಷತ್ರಿಕ ಶೂನ್ಯದಲ್ಲಿ ತೂಗುತ್ತಿರುವ ಸೂಜಿಗಲ್ಲು

ಊರಿನ ಕತ್ತೆಕಿರುಬಗಳು ಮೂಲೆತಿರುವುಗಳಲ್ಲಿ ಮೆಲ್ಲನೆ ಊಳಿಡುತ್ತವೆ

ಊರಿನ ವೀರರು ಸದ್ದಿಲ್ಲದೇ ಯುದ್ಧಭೂಮಿಯಿಂದ ತೆರಳುತ್ತಿದ್ದಾರೆ

ಬಳಲಿದ ಊರಿನ ದೇವತೆ ನನ್ನ ಕಾಲ್ಚಾಪೆಯ ಮೇಲೆ ದಣಿವಾರಿಸಿಕೊಳ್ಳುತ್ತಿದ್ದಾನೆ

ಅವನ ಗಡ್ಡದಲ್ಲಿ ಚಂದ್ರ-ಹಿಮಸರಳುಗಳು

ಅವನ ಹುಬ್ಬುಗಳಲ್ಲಿ ಚಂದ್ರ-ಮಂಜುಗಡ್ಡೆ

ಅವನ ಮುಖ ಕಣಿಯೇನೂ ಹೇಳಲ್ಲ

ನಂದಿದ ಉರಿಬೆಟ್ಟಗಳ ಲಾವಾ ಚಂದ್ರ ಸಾಗರಗಳನ್ನು ಕರಿಗೊಳಿಸುತ್ತದೆ  

‘ತೋಳ ಚಂದ್ರ’ದ ರಾತ್ರಿಯಂದು ನಾವು ನಮ್ಮ 

ಬದುಕು ಬದಲಾಯಿಸಿಕೊಳ್ಳಬಹುದೆಂದು ಜನರನ್ನುತ್ತಾರೆ 

ಹಿಮಸರಳೊಂದು ನನ್ನ ಕೈಯಲ್ಲಿ ಕರಗುತ್ತದೆ

ಪೂರ್ಣಚಂದ್ರನ ಕಲೆ ಬಹುಶಃ ನನ್ನ 

ಅಂಗೈಯ ಗೆರೆಗಳನ್ನು ಅಳಿಸಬಲ್ಲುದೇನೋ

 

*****

*ಜನವರಿ ತಿಂಗಳ ಮೊದಲ ಹುಣ್ಣಿಮೆಯ ಚಂದ್ರನನ್ನು ‘ವುಲ್ಫ಼್ ಮೂನ್’ ಎಂದು ಕರೆಯುತ್ತಾರೆ; ಕನ್ನಡದಲ್ಲಿ ‘ತೋಳ ಚಂದ್ರ’ ಎಂದು ಅನುವಾದ ಮಾಡಬಹುದು.  ಈ ಪದದ ಮೂಲ ಅಮೇರಿಕದ ಮೂಲ ನಿವಾಸಿ ಇಂಡಿಯನ್ನರಿಂದ ಹಾಗೂ ಮಧ್ಯಕಾಲೀನ ಯೂರೋಪಿಯನ್ನರಿಂದ ಇಳಿದು ಬಂದಿದೆ.  ಸುಮಾರು ಜನವರಿ ಸಮಯದ ಕಡು ಚಳಿಗಾಲದ ರಾತ್ರಿಗಳಲ್ಲಿ ಅಹಾರದ ಅಭಾವದಿಂದ ಒದ್ದಾಡುವ ಹಾಗೂ ಸಂಗಾತಿಗಳಿಗಾಗಿ ಹುಡುಕಾಡುವ ತೋಳಗಳ ಊಳಿಡುವಿಕೆ ಹೆಚ್ಚಾಗುತ್ತಿದ್ದವು. ಚಂದ್ರನ ನೋಡಿ ಊಳಿಡುತ್ತಿದ್ದವು; ಹುಣ್ಣಿಮೆ ಚಂದ್ರನ ಬೆಳಕಿನಿಂದ ತೋಳಗಳಿಗೆ ಕಸಿವಿಸಿಯಾಗುತ್ತಿತ್ತೋ ಏನೋ.  ಇದನ್ನು ಗಮನಿಸಿದ ಆ ಜನರು ಮೊದಲ ಹುಣ್ಣಿಮೆಯ ಚಂದ್ರವನ್ನು ‘ವುಲ್ಫ಼್ ಮೂನ್’ ಎಂದು ಕರೆಯತೊಡಗಿದರು.  




ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು AMANDA AIZPURIETE's 'THAT WINTER IT WAS AS COLD AS ON THE PEAK OF EVEREST'

ಮೂಲTHAT WINTER IT WAS AS COLD AS ON THE PEAK OF EVEREST

ಕವಿಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Mārta Ziemelis 

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು

 

ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು

ಅಸಹಾಯಕತೆಯ ಗಡಿಯಲ್ಲಿ ತಣ್ಣಗಿರುವ ಚೆಕ್‌ಪಾಯಿಂಟಿನ ಹಾಗೆ

ನಾವು ಹಲಗೆಗಳನ್ನು ಒಗೆದೆವು ನಮ್ಮ ಚಿಕ್ಕ ಒಲೆಯೊಳಗೆ 

ಶ್ವೇತ ಶೂನ್ಯತೆಯೊಂದು ಕಿಟಕಿಗಾಜುಗಳನ್ನು ನೆಕ್ಕುತ್ತದೆ

ನಾವು ಕೋಣೆಯನ್ನು ಬೆಚ್ಚಗಾಗಿಸಿದೆವು 

ಈಗ ದೊಡ್ಡವರಾಗಿ ಮನೆಬಿಟ್ಟಿರುವ ಕೂಸುಗಳ 

ಮಂಚಗಳನ್ನು ಒಲೆಗೆ ಒಗೆಯುತ್ತಾ

ಫೋಟೊ ಫ಼್ರೇಮುಗಳನ್ನ, ಸ್ಟೂಲುಗಳನ್ನ ಒಲೆಗೆ ಒಗೆಯುತ್ತಾ

ನಂತರ, ನಾನು ಬೆಂಕಿಗೆ ಪುಸ್ತಕಗಳನ್ನು ಉಣಿಸಿದೆ

ಮತ್ತೆ ಮತ್ತೆ ಓದುತ್ತಾ

ಮೆದುಳಲ್ಲಿ ತಂತಾನೆ ಕೊರೆದಿರುವ ಸಾಲುಗಳನ್ನ 

ಬೆಂಕಿಯ ಭಯವಿಲ್ಲದ ಸಾಲುಗಳನ್ನ

ಕಿಟಕಿಗಳು ಹೊಗೆಮಸಿಯಿಂದ ಮೆಲ್ಲ ಮೆಲ್ಲನೆ ಕಪ್ಪಾದವು 

ನಾವು ಅದೃಶ್ಯರಾದೆವು

ಆ ಬಿಸಿಯಲ್ಲಿ

 

*****


ಇನ್ನುಮುಂದೆ ನಮಗೆ ಭಯ ಭೀತಿ ಬೇಕಿಲ್ಲ - AMANDA AIZPURIETE's 'WE DON’T NEED HORROR OR FEAR ANYMORE'

ಮೂಲWE DON’T NEED HORROR OR FEAR ANYMORE

ಕವಿಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Mārta Ziemelis 

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್


 

ಇನ್ನುಮುಂದೆ ನಮಗೆ ಭಯ ಭೀತಿ ಬೇಕಿಲ್ಲ

 

ಇನ್ನುಮುಂದೆ ನಮಗೆ ಭಯ ಭೀತಿ ಬೇಕಿಲ್ಲ

ತಮ್ಮ ಪೂರ್ವಜನ್ಮಗಳ ಹೆಣಗಳ ರಾಶಿಯ ಮಧ್ಯೆ 

ಹಾದುಹೋಗುತ್ತಿದ್ದಾರೆ ಸೈನಿಕರು

ಒಂದು ಕಾಲದಲ್ಲಿ ನಗರಗಳಿದ್ದ ಜಾಗದಲ್ಲಿ 

ಗ ಟ್ಯಾಂಕುಗಳು ಮರೀಚಿಕೆಗಳನ್ನ ಇರಿಸಿವೆ

ಎಂದೇ, ನಮಗೀಗ 

ಗುಲಾಬಿಹೂ ಅರಳುವುದನ್ನ ನೋಡುವ ಅಗತ್ಯವಿದೆ

ಉದ್ಯಾನಗಳು ಇನ್ನೂ ಉಳಿದಿರುವಾಗ 

ಗತಕಾಲದ ಫ಼್ರೆಂಚ್ ಕಾವ್ಯವನ್ನ ಓದುವ ಅಗತ್ಯವಿದೆ

ಗ್ರಂಥಾಲಯಗಳು ಇನ್ನೂ ಉಳಿದಿರುವಾಗ

ಮಕ್ಕಳನ್ನ ಪ್ರೀತಿಸಬೇಕು

ಈ ಜಗತ್ತಿನ ಎಲ್ಲಾ ಮಕ್ಕಳನ್ನ

ನಮ್ಮದೇ ಮಕ್ಕಳಂತೆ

ಈಗಲೇ  

ಅವರನ್ನು ಸೈನಿಕರಾಗಿ ಬದಲಾಯಿಸುವ ಮುನ್ನ

***** 


ದಿನಾ ಬೆಳಗ್ಗೆ ನಾವು ಸಮರಸಾರುತ್ತೇವೆ - AMANDA AIZPURIETE's 'EACH MORNING WE GO TO WAR'

ಮೂಲEACH MORNING WE GO TO WAR

ಕವಿಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Mārta Ziemelis 

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ದಿನಾ ಬೆಳಗ್ಗೆ ನಾವು ಸಮರಸಾರುತ್ತೇವೆ

 

ದಿನಾ ಬೆಳಗ್ಗೆ ನಾವು ಸಮರಸಾರುತ್ತೇವೆ

ನನ್ನ ವಿರುದ್ಧ ನೀನು

ನಿನ್ನ ವಿರುದ್ಧ ನಾನು

 

ಹೋಗಲು ಬಿಡು ನನ್ನನ್ನು ಮರುಭೂಮಿಗೆ

ಶತ್ರುಗಳಿಲ್ಲದ ಕಡೆಗೆಲ್ಲಾದರೂ ಹೋಗಬೇಕು ನನಗೆ”

“ಮರುಭೂಮಿಗಳನ್ನೆಲ್ಲಾ ಬಹಳ ಹಿಂದೆಯೇ ಮುಚ್ಚಲಾಗಿದೆ”

 

“ಕುಡಿಯಲು ಬಿಡು ಸ್ವಲ್ಪ ನದಿಯ ನೀರನ್ನು

ಪರಾಗದಂತೆ ಆಕಾಶದಂತೆ ರುಚಿಯಾಗಿರುವ ಆ ಸಿಹಿ ನೀರನ್ನು

ನನ್ನ ಗಂಟಲು, ಆತ್ಮಗಳೆರಡೂ ನೆತ್ತರುಗಟ್ಟಿವೆ”

“ಎಲ್ಲರಂತೆ ನೀನೂ ನಿನ್ನ ನೆತ್ತರಿನ ಶೀಶೆಯಿಂದ ಕುಡಿ

ಆ ನದಿನೀರು ನಮಗೆ ವಿಷದ ಹಾಗೆ

ನಮ್ಮ ಆಕಾಶ ಉಪ್ಪು ಮತ್ತು ಹೊಗೆಯ ಆಕಾಶವಾಗಿದೆ.”

 

ನಾಳೆ ಮತ್ತದೇ ಸಮರ

 

ಬದಲಾಗಿರುವ ನೀನು

ಬದಲಾಗಿರುವ ನಾನು

 

***** 


ನಸುಕು ಆಗಲೇ ಬಿರಿದಿದೆ - HASSO KRULL's 'DAWN HAS ALREADY BROKEN'

ಮೂಲDAWN HAS ALREADY BROKEN

ಕವಿಹಾಸೊ ಕ್ರಲ್ಎಸ್ಟೋನಿಯಾ HASSO KRULL, ESTONIA

Translated from the Estonian by Brandon Lussier

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 


ನಸುಕು ಆಗಲೇ ಬಿರಿದಿದೆ

 

ನಸುಕು ಆಗಲೇ ಬಿರಿದಿದೆ.  ಆಗಲೇ ನಸುಕು ಬಿರಿದಿದೆ.

ಮರಗಳಲ್ಲಿ ರೆಂಬೆಗಳು ಮೂಡುತ್ತವೆ.  ರೆಂಬೆಗಳಲ್ಲಿ ಎಲೆಗಳು ಮೂಡುತ್ತವೆ.

ಲೆಗಳಲ್ಲಿ ಬಣ್ಣ ಮೂಡುತ್ತೆ.  ಬಣ್ಣದಲ್ಲಿ ಛಾಯೆ ಮೂಡುತ್ತೆ.

ಛಾಯೆಯಲ್ಲಿ ಗಾಢತೆ ಮೂಡುತ್ತೆ.  ಗಾಢತೆಯಲ್ಲಿ ನವುರಾಗುತ್ತಾ.

 

ನೆಲದಲ್ಲಿ ಒಂದು ರಗ್ಗು ಉದ್ಭವಿಸುತ್ತದೆ.  ರಗ್ಗಿನ ಮೇಲೆ ಚಪ್ಪಲಿಗಳು ಉದ್ಭವಿಸುತ್ತವೆ. 

ಮೇಜಿನ ಮೇಲೆ ಒಂದು ಗ್ಲಾಸು ಉದ್ಭವಿಸುತ್ತದೆ.  ಗ್ಲಾಸಿನಲ್ಲಿ ನೀರು ಉದ್ಭವಿಸುತ್ತದೆ.  

ಗೋಡೆಯ ಮೇಲೆ ಪರದೆಯೊಂದು ಉದ್ಭವಿಸುತ್ತದೆ.  ಪರದೆಯ ಮೇಲೆ ಒಂದು ಆಕೃತಿ ಉದ್ಭವಿಸುತ್ತದೆ.  

ಶೆಲ್ಫುಗಳಲ್ಲಿ ಪುಸ್ತಕಗಳು ಉದ್ಭಸುತ್ತವೆ.  ಪುಸ್ತಕಗಳಲ್ಲಿ ಪತ್ರಗಳು ಉದ್ಭವಿಸುತ್ತವೆ.

 

ತಲೆದಿಂಬಿನಲ್ಲಿ ಕೂದಲು ಕಾಣಿಸಿಕೊಳ್ಳುತ್ತೆ.  ಕೂದಲಲ್ಲಿ ಮುಖ ಕಾಣಿಸಿಕೊಳ್ಳುತ್ತೆ.  

ಮುಖದಲ್ಲಿ ಕಣ್ಣುಗಳು ಕಾಣಿಸಿಕೊಳ್ಳುತ್ತವೆ.  ಕಣ್ಣುಗಳ ಮೇಲೆ ರೆಪ್ಪೆಗಳು ಕಾಣಿಸಿಕೊಳ್ಳುತ್ತವೆ.  

ರೆಪ್ಪೆಗಳ ಮೇಲೆ ರೆಪ್ಪೆಗೂದಲು ಕಾಣಿಸಿಕೊಳ್ಳುತ್ತವೆ.  ರೆಪ್ಪೆಗೂದಲಗಳ ಮೇಲೆ ಕಂಪನವೊಂದು ಕಾಣಿಸಿಕೊಳ್ಳುತ್ತೆ.  ಕಂಪನದಲ್ಲಿ ಪರದೆಯೊಂದು ಕಾಣಿಸಿಕೊಳ್ಳುತ್ತೆ.  ಪರದೆಯ ಮೇಲೆ ಕನಸುಗಳು ಕಂಡುಬರುತ್ತವೆ.  

 

ಹಿಂಗಣ್ಣಿನ ಪರದೆಯ ಮೇಲೆ ಕನಸುಗಳು ಚಲಿಸುತ್ತವೆ.  

ನೀ ನಿನ್ನ ಮೊಣಕೈಯನ್ನು ಸರಿಸುವೆ.  ನಾ ನಿನ್ನ ಮುಟ್ಟುವೆ.  

ನೀನು ಮಗ್ಗಲು ತಿರುಗುವೆ.  ಕಂಬಳಿಯೊಳಗೆ ಕಾವೇರುತ್ತದೆ.  

ಆ ಕಾವಿನಲ್ಲಿ ಕನಸೊಂದು ಬೀಳುತ್ತೆ.  ಕನಸಿನಲ್ಲಿ ಸೂರ್ಯ ಉದಯಿಸುತ್ತದೆ.

 

*****

ನಾನು ನಡೆಯುತ್ತಾ ವಿಸ್ಮಯಪಡುತ್ತೇನೆ - JANIS ELSBERGS' 'I’M WALKING AND WONDERING'

ಮೂಲI’M WALKING AND WONDERING

ಕವಿಯಾನಿಸ್ ಎಲ್ಸ್ಬರ್ಗ್ಸಲ್ಯಾಟ್ವಿಯಾ 

JANIS ELSBERGS, LATVIA

Translated from the Latvian by Peteris Cedrinš

ಕನ್ನಡ ಅನುವಾದಎಸ್. ಜಯಶ್ರೀನಿವಾಸ ರಾವ್


 

ನಾನು ನಡೆಯುತ್ತಾ ವಿಸ್ಮಯಪಡುತ್ತೇನೆ

 

ನಾನು ನಡೆಯುತ್ತಾ ವಿಸ್ಮಯಪಡುತ್ತೇನೆ

ನಾನೇಕೆ ಹೆಜ್ಜೆಗುರುತುಗಳನ್ನ ಹಿಂಬಿಡುವುದಿಲ್ಲವೆಂದು.

ನಾನು ಈ ದಾರಿಯಾಗಿ ನಿನ್ನೆ ಹೋದೆ.

ನಾನು ಈ ದಾರಿಯಾಗಿ ಜೀವನವೆಲ್ಲಾ ನಡೆದಿರುವೆ.

 

ನಾನು ಹಿಂದುರಿಗಿ ನೋಡಲ್ಲ.

ನನ್ನ ನೆರಳನ್ನ ಕಾಣಲಾರೆಂಬ ಆತಂಕ ನನಗೆ.

 

‘ನೀನು ಜೀವಂತವಾಗಿರುವೆಯಾ?’

ಅಮಲೇರಿದ ಸಜ್ಜನನೊಬ್ಬ ಅಚಾನಕ್ಕಾಗಿ 

ಕೇಳುತ್ತಾನೆ ನನ್ನನ್ನು.

 

‘ಹೌದೌದು,’ ನಾನುತ್ತರಿಸುತ್ತೇನೆ ಲಗುಬಗೆಯಿಂದ.

‘ಹೌದೌದು,’ ನಾನುತ್ತರಿಸುತ್ತೇನೆ ನನ್ನಿಂದಾದಷ್ಟು ವೇಗವಾಗಿ.

 

***** 



Sunday, February 13, 2022

ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ - KRYSTYNA MILOBEDZKA's 'I lose verbs quickest'

ಮೂಲI lose verbs quickest

ಕವಿಕ್ರಿಸ್ಟೀನಾ ಮಿಲೊಬೆಡ್ಜ಼್ಕಪೋಲಂಡ್ 

KRYSTYNA MILOBEDZKA, POLAND

Translated from the Polish by ELŽBIETA WÓJCIK-LEESE 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್


 

ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ

 

ನಾನು ಬಲುಬೇಗ ಕ್ರಿಯಾಪದಗಳ ಕಳಕೊಳ್ಳುವೆ, ನಾಮಪದಗಳು, ವಸ್ತುಗಳು 

ಉಳಿಯುವುದು

ಈಗ ವೈಯಕ್ತಿಕ ಸರ್ವನಾಮಗಳು ಮಾತ್ರ (ಬಹಳಷ್ಟು ನಾನು, ಮತ್ತೂ ಮತ್ತೂ ನಾನು)

ಮತ್ತೆ ಹೆಸರುಗಳು? ಮಾಯ, ಸಂಯೋಗಪದಗಳು ಮಾಯ

ಮೂರು ಪದಗಳು, ಎರಡು ಪದಗಳು

ಕೊನೆಗೆ ನನ್ನ – ನನ್ನದು ನನ್ನೊಳಗೆ 

ನನ್ನದರ ಜತೆ ನಾನು – 

ಜಗತ್ತು

 

ನಾನು ಉತ್ತಮ ಮತ್ತು ಕೊನೆಯ ಪುರುಷದಲ್ಲಿ

*****



ಹಾಯಾಗಿ ಬಂತು ಹಾಯಾಗಿ ಹೋಯ್ತು - KRYSTYNA MILOBEDZKA's 'easy come easy go'

ಮೂಲeasy come easy go

ಕವಿಕ್ರಿಸ್ಟೀನಾ ಮಿಲೊಬೆಡ್ಜ಼್ಕಪೋಲಂಡ್

KRYSTYNA MILOBEDZKA, POLAND

Translated from the Polish by ELŽBIETA WÓJCIK-LEESE 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್


 

ಹಾಯಾಗಿ ಬಂತು ಹಾಯಾಗಿ ಹೋಯ್ತು

 

ಹಾಯಾಗಿ ಬಂತು ಹಾಯಾಗಿ ಹೋಯ್ತು

ಸುಳಿವೊಂದೂ ಬಿಡದೇ

 

ಕಾಂತಿಯಿಂದ 

ಕಾಂತಿಯೊಳಗೆ

 

ಬಯಲಿನಿಂದ 

ಬಯಲಿಗೆ

 

ಅಳಲಿಲ್ಲ ನಗಲಿಲ್ಲ

ಮುಖವಿರಲಿಲ್ಲ


*****

ಅವನ ನಗುವಿನಲ್ಲಿ ನಿನ್ನ ಮುಖ - KRYSTYNA MILOBEDZKA's 'in his laughter your face'

ಮೂಲin his laughter your face 

ಕವಿಕ್ರಿಸ್ಟೀನಾ ಮಿಲೊಬೆಡ್ಜ಼್ಕಪೋಲಂಡ್ 

KRYSTYNA MILOBEDZKA, POLAND

Translated from the Polish by ELŽBIETA WÓJCIK-LEESE 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್


 

ಅವನ ನಗುವಿನಲ್ಲಿ ನಿನ್ನ ಮುಖ

 

ಅವನ ನಗುವಿನಲ್ಲಿ ನಿನ್ನ ಮುಖ, ನಿಖರ ನಿಕಟ,

ಮಾರ್ದನಿಸುತ್ತದೆ ಮೆಲುದನಿಯಾಗಿ ಹಿಂದಿರುಗುತ್ತದೆ: ನಿನ್ನ ಮೊಮ್ಮಗ ನಕ್ಕ, ಅಪ್ಪಾ

 

ನನ್ನ ಕಣ್ಗಳಿಂದ ನಿನ್ನ ಕಳಕೊಳ್ಳಲಾರೆ  ನಾ ಕಳೆಯುವೆ

ನಿನ್ನ ಬಗ್ಗೆ ಮಾತಾಡಬೇಕು  ನನ್ನ ದನಿಯೇ ಕೇಳುವೆ

 

ಕಾಲುದಾರಿಯಲ್ಲ ಹಾದಿಯಲ್ಲ

ಕಿರಿದಾದ ಎತ್ತರದಲ್ಲಿ

ಯಾವುದರದೋ ಮೂಲಕ ನಿನ್ನ ಹಿಂದೆಯೇ

ಉದಯಿಸುತ್ತದೆ ಮರು ತಿರುಗುತ್ತದೆ

ಬೂಟು ರೆಂಬೆಯನ್ನು ದಬ್ಬಿದ ಈ ನಿಮಿಷಕ್ಕೆ

 

ಅಲ್ಪಪಾಲಿಗಾಗಿ ಅಷ್ಟೇ

ಕೆಲವು ಉರುಟಾದ ಹೊನ್ನ ಅಕ್ಷರಗಳಿಗಾಗಿ

 

ಅಲ್ಲಿ ಮೇಲೆ ನಮ್ಮ ದಾರಿ

ಅಲ್ಲಿ ಕೆಳಗೆ ನಮ್ಮ ದಾರಿ

ನಡೆಯುತ್ತೇವೆ ನಾವು ಜತೆಗೆ

ಈ ಮಹಾ ಮಲೆಗಳ ಮಾಲೆಗಳ ನಡುವೆ

ಕೆಳಗೆ ಕಲ್ಲು ಚಿಪ್ಪುಗಳು

ನ್ನೂ ಕೆಳಗೆ ಗಿಡಗಳು

 

ಚಿರಾಯತ

ಈ ಶಬ್ಧದ ಸೋಲರಿಯದ ನೀಲಮಣಿ 

 

ನಾವು ಓಡುತ್ತೇವೆ: ಕ್ಷಿಪ್ರವಾಗಿ ಬೀಳುತ್ತೇವೆ ಕಡುಕಪ್ಪು ಎಲೆಯ ದಾರಿಯಾಗಿ

 

*****

ಇದೊಂದು ಜೋಗುಳ IDONDU JO:GULA - ULRIKE ALMUT SANDIG's 'A LULLABY FOR ALL THOSE '

ಮೂಲA LULLABY FOR ALL THOSE 

ಕವಿಉಲ್ರೀಕ ಆಲ್ಮತ ಜ಼ಂಡಿಷ್ಜರ್ಮನಿ

ULRIKE ALMUT SANDIG, GERMANY

Translated from the German into English by Karen Leeder

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಇದೊಂದು ಜೋಗುಳ

 

ನಿದ್ದೆಯ ಹೊತ್ತು ನಿದ್ದೆಯನ್ನು ತಡೆಯುವವರೆಲ್ಲರಿಗಾಗಿ ಇದೊಂದು ಜೋಗುಳ.  

ನಿದ್ದೆಯೊಂದಿಗೆ ಕಾದಾಡುವವರೆಲ್ಲರಿಗಾಗಿ ಈ ಜೋಗುಳ, 

ಯಾರಾದರೂ ಹೇಳಿದಾಗ: ದೀಪ ಆರಿಸು, ಮಾತು ನಿಲ್ಲಿಸು, 

ನನ್ನ ದಣಿದ ಗೆಳೆಯರೇ, ಬಾರುಗಳಲ್ಲಿ ಕುರ್ಚಿಗಳನ್ನೆಲ್ಲಾ ಮೇಜುಗಳ ಮೇಲೆ ಜೋಡಿಸಲಾಗಿದೆ, 

ಪೋಸ್ಟರುಗಳು ಬದಲಾಗುತ್ತಿದ್ದಂತೆ ಜಾಹಿರಾತು ಫಲಕಗಳ ಹಮ್‌ಮ್‌ಮ್ಮೆನ್ನುವ ಸದ್ದು, 

ಬ್ಯಾಂಕುಗಳ ಖಾಲಿ ಹಾಲುಗಳನ್ನು ಸೆರೆಹಿಡಿಯುತ್ತಿರುವ ಕ್ಯಾಮರಾಗಳು,

ರಾತ್ರಿಯಂಗಡಿಗಳೆಲ್ಲವೂ ಬೆಳಗುತ್ತಿವೆ, 

ರಾತ್ರಿಬಸ್ಸುಗಳೆಲ್ಲವೂ ಚರ್ಚಿನಂತೆ ಪ್ರಕಾಶಮಾನವಾಗಿರುವ 

ಈ ಶಹರಿನಲ್ಲಿ ಪರ್ರರ್ರೆಂದು ಚಲಿಸುತ್ತಿವೆ.  

 

ನಾವು ಚಿತ್ರಗಳ ಮೂಲಕ ಮಾತಾಡುತ್ತಿದ್ದೇವೆ ಅಷ್ಡೇ, 

 

ಆದರೆ ನಮಗೇನಾದರೂ ಸುಳಿವಿದೆಯೇ ಕತ್ತಲು ಹೇಗೆ ಬರೆಯಲ್ಪಡುತ್ತದೆಂದು?  

ನನ್ನ ದಣಿದ, ನನ್ನ ಇರುಳಾಂಧ ಗೆಳೆಯರೇ, 

ನಾವು ಶುಭವಾರ್ತೆಗಳಿಗಾಗಿ ಕಾಯುತ್ತಿದ್ದೇವೆ, 

ಶುಭವಾರ್ತೆಗಳು ಈ ದಿನಗಳಲ್ಲಿ ವಿರಳವಾಗುತ್ತಿವೆಯಾದರೂ, 

ನಾವು ಕಾಯುತ್ತಿದ್ದೇವೆ ಎರಡು-ಮೂರು ಚೆನ್ನಾದ ಝೇಂಕರಿಸುವ ಕನಸುಗಳಿಗಾಗಿ, 

ನಾಲ್ಕು ಶಾಂತಿ ಒಪ್ಪಂದಗಳಿಗಾಗಿ, 

ಗಾಢ ನಿದ್ರೆಯಲ್ಲಿರುವ ಐದು ಸೇಬುಗಳಿಗಾಗಿ

ನಾವು ಕಾಯುತ್ತಿದ್ದೇವೆ ಆರು ಚರ್ಚುಗಳಿಗಾಗಿ 

ಹಾಗೂ ಏಳು ಕೊಬ್ಬಿದ ಹಸುಗಳಿಗಾಗಿ, 

ಪ್ರಶಾಂತ ನಿದ್ರಾಭರಿತ ಎಂಟು ಗಂಟೆಗಳಿಗಾಗಿ, 

ನಾವು ಕಾಯುತ್ತಿದ್ದೇವೆ ಕಾಣೆಯಾದ ಒಂಬತ್ತು ಗೆಳೆಯರಿಗಾಗಿ.  

ನಾವು ನಮ್ಮ ಬೆರಳುಗಳನ್ನ ಎಣಿಸುತ್ತಿದ್ದೇವೆ.  

ನಾವು ಈಗಲೂ ತಡೆಯುತ್ತಿದ್ದೇವೆ.  ನಾವು ನಿದ್ದೆ ಮಾಡಲ್ಲ.  

 

*****


Wednesday, February 9, 2022

ಅಲೆದಾಟಗಾರ ALEDAATAGAARA - PIOTR MATYWIECKI's 'THE WANDERER'

Dear friends ... here is my Kannada translation of Polish poet PIOTR MATYWIECKI’s poem THE WANDERER ... this is from the English translation of the original Polish poem by RYSZARD REISNER.  Reisner has made two translations of this poem; one is the ‘faithful’ translation where he has retained the names of the streets that appear in the first line and also towards the end and in the other version, he has replaced the names with just ‘two well-known streets’ ... I did the first version first ... there is no major difference actually, except for the names of streets ... and Matywiecki is known for his ‘city’ poems, so the first version is firmly rooted in Warsaw ... but after a discussion with my friend Kamalakar Bhat, I felt I should use the second ‘universal’ version, where the streets could be located in any city ... the streets in Warsaw used in the poem are New World Street and Jerusalem Avenue, two well-known historical streets ... I got stuck at a couple of places and troubled my friends, and Shashi Kumar and Kamalakar helped me out ... thank you ಮಿತ್ರೋಂ ...   

 

Also, about my version of the title in Kannada ... the first word that came to mind was ‘alemaari’ ಅಲೆಮಾರಿ, but I felt it was ‘flippant’ for this poem ... the ‘wandering’ here had a different edge to it, I felt ... ‘aledaatagaara’ ಅಲೆದಾಟಗಾರ is not a common word, not even a word at all possibly, in Kannada ... I know ...  maybe I will get some suggestions here ... 

 

ಮೂಲTHE WANDERER

ಕವಿ: ಪ್ಯೋತ್ರ್ ಮಾತಿವಿಯೆಚ್‌ಸ್ಕಿಪೋಲಂಡ್ PIOTR MATYWIECKI, POLAND

TRANSLATED FROM THE POLISH BY RYSZARD REISNER

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಅಲೆದಾಟಗಾರ  

 

ಎರಡು ಸುಪರಿಚಿತ ರಸ್ತೆಗಳ ಕೋನದಲ್ಲಿ ನನ್ನನ್ನು ನಾನು ಕಂಡುಕೊಂಡೆ

ಮತ್ತದೇ ಕ್ಷಣದಲ್ಲಿ ನಾನು ದಾರಿ ತಪ್ಪಿದೆ

ಮುಂದಿನ ದಾರಿ ಇಲ್ಲಿಂದ ಶುರುವಾಗದು.

ನನ್ನ ಕೊನೆಯನ್ನೂ ನನ್ನಿಂದಿಲ್ಲಿ ಕಾಣಲಾಗದು.

ತ್ತುಂಗಕ್ಕೆ ದಾರಿ ಮೇಲೆ ಎತ್ತರದಲ್ಲಿದೆ

ಮತ್ತೆ ಕೆಳಗೆ ಈಗಲೂ ನನಗೆ ಜಾಗವಿಲ್ಲಿದೆ 

ನನ್ನ ಹೃದಯ ನನ್ನ ಅಕ್ಷದಲ್ಲಿರಲಿಲ್ಲ,

ಹೋಲಿ ಕ್ರಾಸ್ ಇಗರ್ಜಿಯ ಘಂಟೆಗಳ ಸದ್ದು ನನಗೆ ಕೇಳಿಸಲಿಲ್ಲ.

ಪನಗರಗಳು ಒಂದಕ್ಕೊಂದು ಅಡ್ಡಹಾಯ್ದವು, ಕೊನೆಗೆ ತಾಣಗಳ 

ಬಗ್ಗೆ ಯೋಚಿಸಿದೆ, ದೂರದ ರಸ್ತೆಗಳು ಕತ್ತರಿಸುವಲ್ಲಿ ನಿಂತು ನಾನು,  

ಲ್ಲದ ರಕ್ತದ ಕಲೆ ಹರಿಯಿತು ನಗರದ ನಕಾಸೆಯ ಹಾಗೆ,

ವಿಶಿಷ್ಟ ನಕಾಸೆಯದು, ಶೂನ್ಯದಲ್ಲಲ್ಲ, ಕಾಲದಲ್ಲಿ ಬಿಡಿಸಿದ್ದು:
ಪ್ರಾಗೈತಿಹಾಸಿಕ ಅಡವಿಯಿಂದ ಡಾಂಬರಿನ ರಸ್ತೆಯವರೆಗೂ

ನನ್ನನ್ನು ಯಾರೂ ನೋಡಲಿಲ್ಲ, ಎಲ್ಲರೂ ನೋಡಿದರು

ಎರಡು ಸುಪರಿಚಿತ ರಸ್ತೆಗಳ ಕೋನದಲ್ಲಿ ನಿಂತಿರುವ ನೋಡುಗನನ್ನು.
ದಾರಿಹೋಕನೊಬ್ಬ ಅವನತ್ತ ಹೋಗಿ ಕೇಳಿದ:

“ಮಿತ್ರಾ, ಅನಂತದ ದಾರಿ ಯಾವುದು?” 

ದರೆ ಅಂವ ನಕ್ಕುಬಿಟ್ಟ, ರಸ್ತೆ ದಾಟಿದ, ಅಡ್ಡರಸ್ತೆ ಹಿಡಿದ,

ಶಹರದ ಇಟ್ಟಿಗೆ ಕಾಂಕ್ರೀಟುಗಳನ್ನು ಹಾದುಹೊದ,

ಖರೀದಿಸಿದನೊಂದು ಹೊಸ ಸರ್ವಜ್ಞಾನಿ ಕಂಪ್ಯೂಟರನ್ನು 

ಮತ್ತೊಂದು ಮಕ್ಕಳ ಗಿರಗಟ್ಟಿಯನ್ನು, ಎಲ್ಲ ವಯಸ್ಸಿನವರೂ ಸಂತೋಷವಾಗಲಿಯೆಂದು.

Translated by Richard Reisner (“Wędrowiec” from Któr&dy na zawsze, 2015) 



ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...