Thursday, September 17, 2020

SANKETAGALU ಸಂಕೇತಗಳು -- AMA ATA AIDOO'S "TOTEMS"

ಸಂಕೇತಗಳು

ಇಂಗ್ಲಿಷ್ ಮೂಲ: Totems 

ಕವಿ: ಅಮ ಅಟ ಆಯ್ಡೂ - Ama Ata Aidoo, Ghana

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ನಾನು

ಹಠಾತ್ತಗಿ 

ಎದುರಾದೆನೊಂದು ಗೂಬೆಯ

ನಾಕು ರಸ್ತೆ ಕೂಡುವಲ್ಲಿ,

ಕಣ್ ಕಣ್ ಬಿಡುತಿತ್ತು

ನನಗಾಗಿರುವ ಗೊಂದಲಕ್ಕಿಂತಲೂ

ಹೆಚ್ಚು ಗೊಂದಲದಲ್ಲಿ!


ವಿನಾಶದ ಹಕ್ಕಿ.

ವಚನದ ಹಕ್ಕಿ.


ನಗರದ ಒಂದು ಜೋಳದ ಗದ್ದೆಯ

ಫ಼್ಲೊರಸೆಂಟ್ ಬೆಳಕುಗಳು,

ಹೇಳುತ್ತವೆ ಗೂಬೆಗೆ

ಕಾಲ ಬದಲಾಗಿದೆಯೆಂದು.


ಕಾಗೆಯ ಪೈಕಿಯವರು

ವಿವಾಹಗಳ ಮೂಲಕ

ಹಣೆಬರಹಗಳನ್ನು

ಕೆತ್ತಿಸಿಕೊಳ್ಳಲಾರರು.


ಯಾರಿಂದಲಾದರೂ ಸಾಧ್ಯವೇ?


ಅವನು ಅವಳನ್ನು ಪ್ರೀತಿಯಿಂದಲೇ

ನೋಡಿಕೊಳ್ಳುತ್ತಿದ್ದ,

ಅವಳಿಗೆ ಗೊತ್ತಾಗುತ್ತಿತ್ತು ಯಾವಾಗಲೂ

ಯಾವಾಗ ಗಂಜಿಹಾಕಿದ ಹಳೆ ಬಟ್ಟೆಗಳು

ಇನ್ನೊಬ್ಬರ ಮಗುವನ್ನು

ಹೊದಿಸಲು ಹೋಗುತ್ತಿತ್ತೆಂದು.


ತಾಳೆ ಮರದ ದೊಡುವಾ:

ಮೊದಲ ಸಲ ಒಗೆದ

ಉಳಿದ ಹೊಸ ಬಟ್ಟೆಗಳನ್ನು

ಅವಳು ಒಣಗಲು ನೆತು ಹಾಕುತ್ತಿದ್ದಾಳೆ.


ಎಲ್ಲಾಗುತ್ತೊ ಅಲ್ಲಿ ಕೂರು, ಕೂತು

ನಿನ್ನ ಕಥೆಯ ಹೇಳು.  ಎಲ್ಲಾ 

ಮಾಡುಗಳೂ ಮನೆಗಳನ್ನು 

ಮಳೆಯಿಂದ ಕಾಪಾಡುತ್ತವೆಯೆಂದು

ನಂಬಿಸುತ್ತಾರೆ ಅವರು.


ಅಕುವಾ, ನನ್ನ ಸೋದರಿ, 

ಬಿರುಗಾಳಿಯಲ್ಲಿ ಮರದಡಿ

ನಿಲ್ಲಲು ಯಾರೂ ಇಚ್ಛಿಸುವುದಿಲ್ಲ.


ಆದ್ದರಿಂದ

ನೀನು

ಜ್ಞಾಪಿಸುವವಳಾಗಬೇಡ

ನಾನು 

ಮಹಾನ್ ಪೂರ್ವಿಕರಿಗಾಗಿ ಅಳಬೇಕೆಂದು,

ನೆನೆಪಿಸಬೇಡ 

ಒಂದು ಕಾಲದಲ್ಲಿ ರಾಜರ ಬೀಡಾಗಿದ್ದ 

ಆ ಪಾಳುಬಿದ್ದ ಹಳ್ಳಿಯನ್ನು.


ಇಟು ಕ್ವಾನ್

ಮಾ

ಅಡ್ಜ಼ೆ ಸಾ ವೊ ಆ 

ನಾ

ಅಡ್ಜ಼ೆ ಅಸಾ ವೊ!!

(ಕತ್ತಲೆ ಯಾವಾಗ ಪಯಣವ ದಾಟಿ ಮುಂದಕ್ಕೆ ಹೊಗುತ್ತೋ, ಅದು ಹೋಗುತ್ತೆ!!) 

*****



Tuesday, September 15, 2020

BADALU ಬದಲು -- SUBRAYA CHOKKADY'S TULU POEM "BADAL"

Here is a Kannada translation of a Tulu poem, ‘Badal’ by Subraya Chokkadi. Though I am a Mangalorean (technically!), I only spent five years of my life in Mangalore. During those five years, I learnt to speak Tulu fluently, but slowly lost it over the years after moving away from Mangalore. While looking for the first novel in Tulu, Sati Kamale, I stumbled upon the Karnataka Tulu Sahitya Academy website, where I found the novel, and I thought I’d read some Tulu poems too and bought a book of poems called Noodu Kabitelu. While reading the poems, I discovered that I actually hadn’t lost all of my Tulu. While translating this poem, for a couple of words I sought help from my father, who was born and brought up in Mangalore and speaks Tulu fluently. And I also got help from my brother’s colleague, Krishnaprakash Ullithaya. Thanks to both. Tulu has a particular spoken lilt to it, which I hope I have managed to capture in the Kannada translation.

ತುಳು ಮೂಲ: ಬದಲ್ Badal

ಕವಿ: ಸುಬ್ರಾಯ ಚೊಕ್ಕಾಡಿ Subraya Chokkadi

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಬದಲು

ನಮ್ಮ ಈ ಹಳೆಯ ದೊಡ್ದ ಬಂಗ್ಲೆಯಲ್ಲಿ

ಇಲಿಗಳ ಕಾಟವೋ ಕಾಟ

ಅಂತ್ಹೇಳಿ ಒಂದು ಬೆಕ್ಕನ್ನು ತಂದೆವು

ಅದು ಬಣ್ಣ ಬಣ್ಣದ ಬೆಕ್ಕು -- ಬರೀ ಪಾಪದ್ದು

ನೋಡ್ಲಿಕ್ಕೆ ಭಾರಿ ಚಂದ

ಕೆಲಸದ ಮಟ್ಟಿಗೆ ಬರೀ ಬೂಸು

ಇಲಿಗಳೇ ಅದನ್ನು ಹೆದ್ರಿಸ್ಲಿಕ್ಕೆ ಶುರುಮಾಡಿದವು


ಹೀಗಾಯ್ತಲ್ಲ ಅಂತ್ಹೇಳಿ ಒಂದು

ದಪ್ಪ ರೋಮದ ಕಪ್ಪು ಗಂಡು ಬೆಕ್ಕನ್ನು ತಂದೆವು

ಬಣ್ಣ ಬಣ್ಣದ ಬೆಕ್ಕೂ ಕಪ್ಪು ಬೆಕ್ಕೂ

ಬೆಳೆದುಕೊಂಡು ಬಂದ ಹಾಗೆಯೇ 

ತವುಡು ತಿನ್ನುವವನು ಹೋಗಿ ಹೊಟ್ಟು ತಿನ್ನುವವನು

ಬಂದ ಹಾಗೆ ಆಯಿತು


ಅವೆರಡೇ ತಾಪತ್ರಯಗಳನ್ನು ಮಾತಾಡ್ಲಿಕ್ಕೆ ಶುರುಮಾಡಿದವು

ಕಚ್ಚಾಡಿಕೊಳ್ಳಲಿಕ್ಕೆ ಶುರುಮಾಡಿದವು

ಜಗಳ ಮಾಡ್ಲಿಕ್ಕೆ ಶುರುಮಾಡಿದವು

ಸಾಮಾನುಗಳನ್ನು ಆಚೀಚೆ ಬಿಸಾಡ್ಲಿಕ್ಕೆ ಶುರುಮಾಡಿದವು


ಇದರ ನಡುವೆ ಅವುಗಳಿಗೆ

ಇಲಿಗಳ ನೆನೆಪಾದರೂ ಆಗುವುದು ಹೇಗೆ?

ಇಲಿಗಳಿಗೀಗ ಬೆಕ್ಕುಗಳ ಜಗಳ ಬಿಡಿಸುವ ಕೆಲಸ

ಸಾಮನುಗಳನ್ನು ಅರಸಿ ತೆಗೆದು

ಜಾಗ್ರತೆ ಮಾಡುವ ಕೆಲಸ

*****

Friday, September 11, 2020

KAHI ಕಹಿ -- IFI AMADIUME'S "BITTER"

"ಕಹಿ

ಇಂಗ್ಲಿಷ್ ಮೂಲ: Bitter 

ಕವಿ: ಐಫ಼ಿ ಅಮೆಡಿಯುಮ್ Ifi Amadiume, Nigeria

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಒಂದುವೇಳೆ ನೀವು ನನ್ನನ್ನು ಹಿಂಡಿ ಒಗೆಯುವುದಾದರೆ,

ನನ್ನನ್ನು 

ಹಿಂಡಿ ಒಗೆಯುವುದಾದರೆ,

ಹಿಂಡಿ 

ನನ್ನನ್ನು ಒಗೆಯುವುದಾದರೆ,

ಮತ್ತೆ 

ಮತ್ತೆ ಮತ್ತೆ

ನಾ ನೊರೆ ಕಾರುವೆನಾದರೂ,

ದೀರ್ಘ ಕಾಲದಿಂದ ಬಾಡಲು ಬಿಟ್ಟ

ಕಹಿ ಎಲೆಯಂತೆ,

ಹಿಂಡಿ ತೆಗೆಯಲಾರಿರಿ ನೀವು 

ನನ್ನಲಿರುವ ಕಯ್ಪನ್ನು.

*****


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...