Sunday, July 24, 2022

ನಾಯಿಯ ಕೂಗು ಏರುವುದು ಆಕಾಶಕ್ಕೆ - RAMUNĖ BRUNDZAITĖ's 'A DOG’S VOICE TO THE HEAVENS GOES'

ಮೂಲ: A DOG’S VOICE TO THE HEAVENS GOES

ಕವಿರಾಮುನ್ ಬ್ರುಂಡ್ಜಾಯಿಟ್ಲಿಥಿವೇನಿಯಾ

RAMUNĖ BRUNDZAITĖ, Lithuania 

Translated from the Lithuanian 

into English by RIMAS UZGIRIS

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 


ನಾಯಿಯ ಕೂಗು ಏರುವುದು ಆಕಾಶಕ್ಕೆ

 

ನನ್ನ ನಾಯಿ 

ರಾತ್ರಿಯಲ್ಲಿ ಪ್ರಾರ್ಥಿಸುತ್ತೆ 

ನಾಯಿ ದೇವರಿಗೆ, 

ಹಗಲಿನಲ್ಲಿ ಬಾಲವನ್ನಾಡಿಸುತ್ತೆ,

ಆದರೆ ಅವನ ದುಃಖಿತ ಕಣ್ಣುಗಳು

ಅವನನ್ನು ಬಿಟ್ಟುಕೊಡುತ್ತದೆ – 

ಅವನಿಗೆಲ್ಲಾ ಗೊತ್ತಿದೆ,

ಮತ್ತೆ ಆ ‘ಒಲ್ಡ್ ಯೆಲರ್’*-ನ ಸಾವಿನ ಬಗ್ಗೆ ಮಾತ್ರವಲ್ಲ,

ಮತ್ತೂ ಗೊತ್ತಿದೆ.

ನಾನು ಕನಸ ಕಾಣುವೆ, ನಾವು ಜತೆಜತೆಯಾಗಿ

ಹೇಗೆಲ್ಲಾ ನಾಯಿ ಚೇಷ್ಟೆಗಳನ್ನ ಆಡುವೆವೆಂದು,

ಆದರೆ ಅವನು ಬಹುಶಃ ನನ್ನ ಜತೆ ಕುಳಿತು 

ಒಂದೆರಡು ಗ್ಲಾಸು ಬಿಯರ್ ಕುಡಿಯಲು ಇಷ್ಟಪಡಬಹುದೇನೊ

ಮತ್ತೆ ನಮ್ಮ ತಲೆ ಸುತ್ತಲಾರಂಭಿಸಿದಾಗ, ಹೇಳುವ ಅವನು: -

ಈ ನಾಯಿ ಬದುಕು ನನಗೆ ರೋಸಿಹೋಗಿದೆ,

ಈ ನನ್ನ ಕಪ್ಪು ತುಪ್ಪುಳು, ಆ ನಾಯಿ ದೇವತೆ,

ಅದೂ ಬಹುಶಃ ಮಾನವನ ಕಲ್ಪನೆಯೆ ಇರಬೇಕು –

ಮಾನವರು ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾರೆ, 

ಅವರನ್ನು ನಾವು ಹಠಹಿಡಿದು ನಿರ್ಲಕ್ಷಿಸುತ್ತೇವೆಂಬ 

ಕಲ್ಪನೆಯೂ ಸಹ.

 

*****


*‘ಒಲ್ಡ್ ಯೆಲರ್’(Old Yeller) ಎಂಬುದು ಅದೇ ಹೆಸರಿನ 1956ರಲ್ಲಿ ಫ಼‌್ರೆಡ್ ಗಿಪ್ಸನ್ (Fred Gipson) ಎಂಬ ಅಮೇರಿಕನ್ ಲೇಖಕಬರೆದ ಕಾದಂಬರಿಯಲ್ಲಿ ಬರುವ ದೊಡ್ಡ ಗಾತ್ರದ ಕಪ್ಪು ಮೂತಿಯ ಹಳದಿ ಬಣ್ಣದ, ‘ಬ್ಲ್ಯಾಕ್ ಮೌತ್ ಕರ್’ (Black Mouth Cur) ಎಂಬ ಜಾತಿಯ ಬೇಟೆ ನಾಯಿ. 1957ರಲ್ಲಿ ಈ ಕಾದಂಬರಿಯನ್ನು ಆಧರಿಸಿ ಇದೇ ಹೆಸರಿನಲ್ಲಿ ಮಾಡಿದ ಚಲನಚಿತ್ರ ಬಹಳ ಯಶಸ್ಸು ಕಂಡಿತು.  ಒಂದು ಮಕ್ಕಳ ಚಿತ್ರವಾಗಿ, ಒಬ್ಬ ಬೆಳೆಯುವ ಹುಡುಗ ಮತ್ತು ಅವನ ನಾಯಿಯ ನಡುವೆ ಇರುವ ಸಂಬಂಧ, ಪ್ರೀತಿಗಳ ಕತೆಯಾಗಿ ಅಮೇರಿಕದ ಜನತೆ ‘ಒಲ್ಡ್ ಯೆಲರ್’ ಚಿತ್ರವನ್ನು ಮೆಚ್ಚಿಕೊಂಡರು.  ಅಮೇರಿಕದ ಕ್ಯಾನ್ಸಸ್ (Kansas) ಪ್ರಾಂತದ ಗ್ರಾಮ್ಯ ಹಿನ್ನೆಲೆಯಲ್ಲಿ ನಡೆಯುವ ಈ ಕಥೆ ಅಮೇರಿಕದಲ್ಲಿ ಎರಡನೆಯ ವಿಶ್ವಯುದ್ಧದ ನಂತರ ಹುಟ್ಟಿದ ತಲೆಮಾರಿನವರಿಗೆ (Baby Boomers) ಈ ಚಿತ್ರವೊಂದು ಸಾಂಸ್ಕೃತಿಕ ಮೈಲಿಗಲ್ಲು ಎನ್ನಬಹುದು.  ಈ ಚಿತ್ರದಲ್ಲಿ ಕ್ಯಾನ್ಸಸ್-ನ ರೈತನೊಬ್ಬನ ಕಿರಿಮಗ ‘ಒಲ್ಡ್ ಯೆಲರ್’ನ್ನು ತನ್ನ ಸಾಕುನಾಯಿಯನ್ನಾಗಿ ಇಟ್ಟುಕೊಳ್ಳುತ್ತಾನೆ.  

 

ಹಳದಿ ಬಣ್ಣದ ನಾಯಿಯಾದ್ದರಿಂದ, ಇದಕ್ಕೆ ‘yellow’ ಎಂದು ಹೆಸರಿಡುತ್ತಾನೆ ಆ ಹುಡುಗ, ಆದರೆ ‘ಯೆಲೊ’ ಪದ ಆ ಪ್ರಾಂತದವರ ಉಚ್ಛಾರಣೆಯಲ್ಲಿ ‘ಯೆಲರ್’ (yeller) ಎಂದು ಕೇಳಿಬರುತ್ತೆ; ಈ ನಾಯಿ ಬಹಳವೇ ಜೋರಾಗಿ ಬೊಗಳುತ್ತೆ, ಆದ್ದರಿಂದಲೂ ಕೂಡ ‘ಯೆಲರ್’ ಎಂಬ ಹೆಸರು ಸೂಕ್ತವಾಗಿದೆ.  ಇಂಗ್ಲಿಷ್-ನಲ್ಲಿ ‘ಯೆಲ್’ (yell) ಅಂದರೆ ಬೊಬ್ಬೆ ಹೊಡೆಯುವುದೆಂದು ಅರ್ಥ.

 

ನಾಯಿಯನ್ನು ಇಟ್ಟುಕೊಳ್ಳುವುದಕ್ಕೆ ಅವನ ಮನೆಯವರೆಲ್ಲರ ವಿರೋಧವಿದ್ದರೂ, ಅವನು ನಾಯಿಯನ್ನು ಬಿಟ್ಟುಕೊಡುವುದಿಲ್ಲ.  ಅದು ದೊಡ್ಡದಾಗಿ ಬೆಳೆದು ಕಾವಲುನಾಯಿಯಾಗಿ ಆ ರೈತನ ಮನೆಯವರಿಗೆ, ಅವನ ಕೆಲಸದಲ್ಲಿ ಸಹಾಯ ಮಾಡುತ್ತೆ.  ಮನೆಯ ದನಗಳ ಮೇಲೆ ಒಂದು ದಿನ ತೋಳವೊಂದು ಹಲ್ಲೆ ಮಾಡಿದಾಗ, ಒಲ್ಡ್ ಯೆಲರ್ ಅದರೊಂದಿಗೆ ಸೆಣಸಾಡಿ ಓಡಿದುತ್ತೆ.  ಆದರೆ, ಆ ಸೆಣಸಾಟದಲ್ಲಿ ತೋಳವು ಒಲ್ಡ್ ಯೆಲರ್-ನು ಕಚ್ಚಿಬಿಡುತ್ತೆ.  ಅದರಿಂದ ಒಲ್ಡ್ ಯೆಲರ್-ಗೆ ರೇಬೀಸ ರೋಗ ಬಂದು ಒದ್ದಾಡುತ್ತೆ.  ಅದರ ಕಷ್ಟ ನೋಡಲಾರದೆ, ಒಲ್ಡ್ ಯೆಲರನ್ನು ಸಾಯಿಸಬೇಕಾಗಿ ಬರುತ್ತೆ.  ಗುಂಡಿಟ್ಟು ಕೊಲ್ಲಲ್ಲಾಗುತ್ತೆ.  ಈ ಕವನದಲ್ಲಿ ಬರುವ ‘ಒಲ್ಡ್ ಯೆಲರ್’ನ ಸಾವಿನ ಲ್ಲೇಖ ಕವಿಯು ಈ ಕಾದಂಬರಿ/ ಚಲನಚಿತ್ರದಿಂದ ತೆಗೆದುಕೊಂಡಿದ್ದಾರೆ.  ಅಂದರೆ, ಲಿಥುವೇನಿಯಾದ ಸಮಕಾಲೀನ ಕವಿಯೊಬ್ಬಳು 1950ರ ಅಮೇರಿಕನ್ ಚಲನಚಿತ್ರವೊಂದರ ಒಂದು ನಾಯಿಯ ಉಲ್ಲೇಖವನ್ನು ತನ್ನ ಕವನದಲ್ಲಿ ಸೇರಿಸಿರುವುದು ನನಗೆ ಬಹಳ ಸ್ವಾರಸ್ಯಕರ ಸಂಗತಿ ಎಂದನಿಸಿತು.  ಕವನ ಓದಿದಾಗ ‘ಒಲ್ಡ್ ಯೆಲರ್’ ಏನೂಂತ ಆರ್ಥವಾಗಲಿಲ್ಲ.  ನೋಡಿಬಿಡುವಾಂತ ‘ಗೂಗಲ್’ನಲ್ಲಿ ಹಾಕಿದಾಗ ಇಷ್ಟೆಲ್ಲಾ ಗೊತ್ತಾಯಿತು. 


Saturday, July 23, 2022

ಅಡಗುವುದು ಹುಡುಕುವುದು - RAMUNĖ BRUNDZAITĖ's 'HIDE AND SEEK'

ಮೂಲHIDE AND SEEK

ಕವಿರಾಮುನ್ ಬ್ರುಂಡ್ಜಾಯಿಟ್ಲಿಥಿವೇನಿಯಾ

RAMUNĖ BRUNDZAITĖ, Lithuania 

Translated from the Lithuanian 

into English by RIMAS UZGIRIS

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 


ಅಡಗುವುದು ಹುಡುಕುವುದು

 

ಈ ನಗರ ತುಂಬಾ ಚಿಕ್ಕದು ಅಡಗಿಕೊಳ್ಳುವುದಕ್ಕೆ:

ಹೇಗಾದರೂ ಸಿಕ್ಕೇ ಸಿಗುತ್ತಾರೆ ನಿನಗೆ 

ನೀನು ಭೇಟಿಯಾಗಲೇ ಬೇಕೆನ್ನುವ ಎಲ್ಲರೂ 

ನೀನು ಭೇಟಿಯಾಗಲು ಬಯಸದವರು ಕೂಡ...

 

ಹೆಚ್ಚಾಗಿ ಮಾಲ್‌ಗಳಲ್ಲಿ:

ಷ್ಟೊಂದು ಇದಾವೆ, ಅದೆಷ್ಟು ದೊಡ್ಡವು,

ಅಷ್ಟೇ ಅನಾಮಕ

ದರೂ ನೀನು ಸರ್ಫ಼್ ಡಬ್ಬಿಗಳ ಹಿಂದೆ ಅಡಗಿಕೊಳ್ಳುವೆ

(ನಿರ್ಮಲ ಆತ್ಮದ ಒಂದು ನವಿರಾದ ಸಂಕೇತದಂತೆ)

 

ಹಲವರು ಹೇಳುವರು ಎಲ್ಲರಿಗೂ ಕಾಣುವಂತೆ 

ಅಡಗಿಕೊಳ್ಳುವುದೇ ಉತ್ತಮವೆಂದು

ಎಂದೇ, ನಾನು ಮೂರ್ತ ಪದಗಳ ಮತ್ತು 

ವ್ಯಕ್ತ ಜನರ ಪಕ್ಕದಲ್ಲಿ ನಿಂತುಕೊಳ್ಳುವೆ – 

ಅಲ್ಲಿ ನಾನು ನಿಮಗೆ ಸುಲಭವಾಗಿ ಸಿಗುತ್ತೇನೆ

ಅಲ್ಲಿ ನನಗೊಂದು ಹೆಸರಿದೆ, ಕುಲನಾಮವಿದೆ

ನನ್ನ ಹೆಸರಿನ ಗುರುತಿನ ಕಾರ್ಡ್ ಇದೆ,

ನಿಗದಿತ ಮೌಲ್ಯವೊಂದಿದೆ 

ಅಚ್ಚುಕಟ್ಟಾದ ಸಂಖ್ಯೆಗಳ ಪಟ್ಟಿಯಲ್ಲಿದ್ದಂತೆ,

ಪ್ಲಾಸ್ಟಿಕ್ ಕಪ್ ನಲ್ಲಿ ಕಾಫಿ, ನಮ್ಮ ಸೋದರರೊಂದಿಗೆ 

ಏಕಾಂತದಲ್ಲಿ ಹಂಚಿಕೊಳ್ಳುವ ಸಿಗರೇಟುಗಳು, 

ಅವುಗಳನ್ನು ಒಬ್ಬರಿಂದೊಬ್ಬರಿಗೆ ಸುತ್ತಿಸುತ್ತಾ 

ದಿಂಗಿಣಹಾಕಿದಂತೆ ... 

 

ಈ ನಗರ ತುಂಬಾ ಚಿಕ್ಕದು ಅಡಗಿಕೊಳ್ಳುವುದಕ್ಕೆ

ಬಹಳ ದೊಡ್ಡದು ಹುಡುಕಿಹಿಡಿಯುವುದಕ್ಕೆ


*****


ಸೂರ್ಯಕಾಂತಿ ಹೂವುಗಳು - RAMUNĖ BRUNDZAITĖ's 'SUNFLOWERS'

ಮೂಲSUNFLOWERS

ಕವಿರಾಮುನ್ ಬ್ರುಂಡ್ಜಾಯಿಟ್ಲಿಥಿವೇನಿಯಾ

RAMUNĖ BRUNDZAITĖ, Lithuania 

Translated from the Lithuanian 

into English by RIMAS UZGIRIS

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 


ಸೂರ್ಯಕಾಂತಿ ಹೂವುಗಳು

 

ಅವನ ತುಟಿಗಳು 

ಸುಲಿದ ಸೂರ್ಯಕಾಂತಿಹೂವಿನ ಬೀಜದ ನೆನಪು ತರಿಸುತ್ತದೆ

ಅವೆರಡರ ರುಚಿ ಒಂದೇ:

ಪ್ಪುಪ್ಪು, ಸ್ವಲ್ಪ ಕಹಿ

ಅವನ ತುಟಿಗಳು ಬೀಜದ ತೆರೆದ ಚಿಪ್ಪುಗಳಂತೆ

 

ನನ್ನ ನಾಲಿಗೆ ಅವನ ಕಿವಿಯ ಸವರುತ್ತಿರುವಾಗ

ನನಗೆ ವ್ಯಾನ್ ಗೋನ ನೆನಪಾಗುತ್ತದೆ

ನಾಗುವುದು ಆಗ, ಏನಾಗಬಹುದು 

ನಾನು ಕಚ್ಚಿಬಿಟ್ಟರೆ

ಎಂದು ಯೋಚಿಸುತ್ತೇನೆ – 

 

ನನಗೆ ಅವನ ದೇಹವ ಮರಳಿಸಲು ಇಷ್ಟವಿಲ್ಲ

ನಾನು ಹಳದಿ ಹೂವುಗಳನ್ನು ಕಪ್ಪು ಬೀಜಗಳನ್ನು

ಬಿಟ್ಟು ಹೋಗುವೆ

 

ಏನು ಮೊಳೆಯಬಹುದು

ಒಂದು ವೇಳೆ ನಾನು ಅವನ ತುಟಿಗಳನ್ನು 

ಬೀಜಗಳ ಹಾಗೆ ಬಿತ್ತುವುದಾದರೆ?


*****


ನಾನು ಕಲಿತಳಿಸಿದ್ದೇನೆ - VERONICA STEFANET's "I'VE UNLEARNED"

ಮೂಲ: I’VE UNLEARNED  

(published in CIRCUMFERENCE https://circumferencemag.com/when-i-too-had-a-kitchen/)

ಮೂಲ ಭಾಷೆರೊಮೇನಿಯನ್

ಕವಿ: ವೆರೊನಿಕಾ ಸ್ಟೆಫ಼ನೆಟ್ರಿಪಬ್ಲಿಕ್ ಆಫ಼‌್ ಮೊಲ್ಡೊವಾ

Veronica Stefanet, Republic of Moldova

Translated from the Romanian by Monica Cure

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್


ನಾನು ಕಲಿತಳಿಸಿದ್ದೇನೆ

 

ತಿರುಗಾಟ, ಸಂಗೀತ, ಮಳೆಗಳ ಆನಂದಿಸುವುದನ್ನು

ತಿಂಡಿ, ಜೋಕು, ವಿಮಾನದಾಣ, 

ಪರಿಮಳಗಳ ಆಸ್ವಾದಿಸುವುದನ್ನು

ನನ್ನ ಮಗುವಿನ ಯಶಸ್ಸುಗಳನ್ನು, ನನ್ನನ್ನೇ, 

ಮತ್ತು ಇತರರನ್ನು ಕಂಡು ಹಿಗ್ಗುವುದನ್ನು

ನಾನು ಕಲಿತಳಿಸಿದ್ದೇನೆ

 

ಆ ಇಬ್ಬರು-ಮೂವರು ಗಂಡಸರು

ಆಶಿಸಲು ಯಾವ ಕಾರಣವೂ ಇಲ್ಲದವರು

ದರೂ ಪ್ರತಿ ಸಲ ನಾನು ಅವರಿಗೆ 

ಮೈತ್ರಿಯಪ್ಪುಗೆ ಕೊಟ್ಟಾಗ 

ಅವರ ಮೈಕಂಪನ

ನನ್ನಲ್ಲಿ ಭಯಹುಟ್ಟಿಸುತ್ತೆ

 

ಸರೊವರದ ತೀರದಲ್ಲಿ ಕೂತು

ನೀರಿನ ಶಾಂತ ಮುಖವನ್ನು ನೋಡುತ್ತಾ

ಅದನ್ನು ಕದಲಿಸಲಿಕ್ಕಾಗತ್ತಾ ಅಂತ ನೋಡಲು 

ಕಲ್ಲೊಂದನ್ನು ಎತ್ತಿಕೊಂಡೆ

ಮತ್ತೆ ಬದಿಯಲ್ಲಿಟ್ಟುಬಿಟ್ಟೆ 


*****


Friday, July 8, 2022

ನನ್ನ ಜೀವದ ಗಡಿಯಾರ - INDRĖ VALANTINAITĖ's 'BIOLOGICAL CLOCK'

ಮೂಲ: BIOLOGICAL CLOCK

ಕವಿಇಂಡ್ರೆ ವ್ಯಾಲಂಟಿನಾಯ್ಟೆಲಿಥುವೇನಿಯಾ

INDRĖ VALANTINAITĖ, LITHUANIA 

Translated from the Lithuanian into English by ADA VALAITIS

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್ 



ನನ್ನ ಜೀವದ ಗಡಿಯಾರ


ತಲೆಮಾರಿನಿಂದ ತಲೆಮಾರಿಗೆ ಕೈದಾಟಿ ಬಂದಿರುವುದು.

ಒಂದು ಅಮೂಲ್ಯ ಪುರಾತನ ವಸ್ತು.

ಆದರೆ, ನಾನದನ್ನು ಅಡವಿನಂಗಡಿಯಲ್ಲಿ ಒತ್ತೆಯಿಡಕ್ಕಾಗಲ್ಲ - ನನ್ನೊಳಗೆ ಆಳವಾಗಿ ಹುದುಗಿದೆ ಅದು.

 

ನನ್ನ ಜೀವದ ಗಡಿಯಾರ 

ಆತಂಕವಾದಿಯೊಬ್ಬನ ಕೈಯಲ್ಲಿರುವ 

ಬಾಂಬಿನ ಹಾಗೆ ಟಿಕ್ ಟಿಕ್ ಟಿಕ್ 

ಎಂದು ಕ್ಷಣಗಳ ಎಣಿಸುತ್ತಿದೆ.

 

ಒಂದಾನೊಂದು ದಿನ ನಾನು ಜನ್ಮನೀಡುವೆ.

ಒಂದಾನೊಂದು ದಿನ ನಾನು ಪುಟ್ಟ ಮೀನೊಂದನ್ನು

ಶಾರ್ಕ್-ಮೀನಿನ ತೊಟ್ಟಿಯಲ್ಲಿ ಎಸೆಯುವೆ.

 

ನಾನು ನನ್ನ ಮಗನ ಮೊದಲ ಕಂಪಾರ್ಟ್‌ಮೆಂಟಾಗುವೆ, 

ಕಪ್ಪಿಟ್ಟ ಕಿಟಿಕಿಗಳೊಂದಿಗೆ,

ನಾನು ಅವನನ್ನು ಬೆಳಕುಳ್ಳ ಸ್ಟೇಶನಿನಲ್ಲಿ ಇಳಿಸುವೆ, 

ಆದರೆ ಪೇಪರ್‌ಗಳಲ್ಲಿ ವರದಿಗಳು ಬರುತ್ತಾನೆ ಇರುತ್ತವೆ 

ನೆರೆಗಳ, ಆತ್ಮಹತ್ಯೆಗಳ.

ಬಿರುಗಾಳಿಗಳ, ಅಪಘಾತಗಳ ಬಗ್ಗೆ, ಮತ್ತಿತರ ದಂಡನೆಗಳ ಬಗ್ಗೆ.

 

ಮತ್ತೆ, ನನ್ನ ಜೀವದ ಗಡಿಯಾರ 

ಆತಂಕವಾದಿಯೊಬ್ಬನ ಕೈಯಲ್ಲಿರುವ 

ಬಾಂಬಿನ ಹಾಗೆ ಟಿಕ್ ಟಿಕ್ ಟಿಕ್ 

ಎಂದು ಕ್ಷಣಗಳ ಎಣಿಸುತ್ತಿದೆ

 

*****

Thursday, July 7, 2022

ಹೊಟೆಲ್ ರೂಮು - INDRĖ VALANTINAITĖ's 'HOTEL ROOM'

ಮೂಲ: HOTEL ROOM

ಕವಿಇಂಡ್ರೆ ವ್ಯಾಲಂಟಿನಾಯ್ಟೆಲಿಥುವೇನಿಯಾ

INDRĖ VALANTINAITĖ, LITHUANIA 

Translated from the Lithuanian into English by Rimas Uzgiris

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


ಹೊಟೆಲ್ ರೂಮು

 

ಅವನು ತುಂಬಾನೆ ಊರೂರು ತಿರುಗುತ್ತಿರುತ್ತಾನೆ.

ಪ್ರತಿ ರಾತ್ರಿ ಅನಿಸುತದೆ ಅವನಿಗೆ

ಆ ಬಾಡಿಗೆ ರೂಮು

ಅವನನ್ನು ಒತ್ತಾಯಿಸುತ್ತದೆ

ಲ್ಲಾ ಏಳು ದಾರಿಗಳನ್ನೂ ಹಿಡಿಯಲು.

 

ದಾಗ್ಯೂ, ಇದೆಯಲ್ಲಿ ರೂಮಿನಲ್ಲಿ

ಒಂದು ಬೈಬಲ್ ಮತ್ತೆ ಒಂದು ಮಿನಿ ಬಾರ್:

ನಾಳೆಯನ್ನು ಹಿಡಿದಿಟ್ಟುಕೊಳ್ಳಲು

ರಡು ದಾರಿಗಳು.

 

*****


ಫ಼್ರೀಡಮ್ ಬೂಲವಾರ್ಡ್ - INDRĖ VALANTINAITĖ's 'FREEDOM BOULEVARD'

ಮೂಲ: FREEDOM BOULEVARD

ಕವಿಇಂಡ್ರೆ ವ್ಯಾಲಂಟಿನಾಯ್ಟೆಲಿಥುವೇನಿಯಾ

INDRĖ VALANTINAITĖ, LITHUANIA 

Translated from the Lithuanian into English by Rimas Uzgiris

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


ಫ಼್ರೀಡಮ್ ಬೂಲವಾರ್ಡ್

 

ನನ್ನ ಅಜ್ಜಿ ವಾಸಿಸುತ್ತಿದ್ದಳಲ್ಲಿ

ಆ ಹಳೆ ಬಸ್ತಿಯ ಮನೆಯಲ್ಲಿ,

ರಡು ಯುದ್ಧಗಳ ನಡುವಿನ ಸಮಯದಲ್ಲಿ,

ಹೊಟ್ಟೆಗಿಲ್ಲದೆ ನರಳುತ್ತಿದ್ದರಲ್ಲಿ, 

ನನ್ನ ಅಪ್ಪ ಹುಟ್ಟಿದ್ದ ಅಲ್ಲಿ ಅಟ್ಟದಲ್ಲಿ,

ತೆರೆದಿದ್ದಾರೆ ಈಗ ಅದರಡಿಯಲ್ಲಿ 

ಟ್ರೆಂಡಿ ರೆಸ್ಟಾರೆಂಟೊಂದನ್ನು.

ಅದರ ಉದ್ಘಾಟನೆಗೆ ಹೋದೆ ನಾನು,

ನಿಂತಿದ್ದೆ ನಾನು ಸೋಗಿನ 

ತಿಂಡಿಗಳನ್ನಿಟ್ಟುಕೊಂಡು ಬಾಯಲ್ಲಿ, 

ವಿಚಿತ್ರ ಅಪರಾಧಿ ಭಾವ ನನ್ನ ಹೊಟ್ಟೆಯಲ್ಲಿ,

ಏಕೆಂದರೆ ಬರೀ ಒಂದು ಸೂರು ಬೇರ್ಪಡಿಸುತ್ತೆ 

ಈ ಜಾಗವನ್ನು ಮತ್ತು ಆ ಜಾಗವನ್ನು 

ಎಲ್ಲಿ ಅವಳು ತನ್ನ ಪತ್ರವನ್ನು ಬಿಟ್ಟಿದ್ದಳು.

ನನ್ನ ಪಟ್ಟಿಕಟ್ಟಿದ ಕೈಯ್ಯಿಂದ 

ಗ್ಲಾಸೊಂದನ್ನು ಎತ್ತುತ್ತಾ,

ನಾನು ಜೀವನವ ಕೊಂಡಾಡುವೆ

ನಮ್ಮಿಬರಿಗಾಗಿ.

 

*****

*ಸಾಲುಮರಗಳಿಳ್ಳ ವಿಶಾಲವಾದ ಬೀದಿ



ಲಿಥುವೇನಿಯನ್ ಸಾಹಿತ್ಯದ ಬಗ್ಗೆ ಒಂದು ಪ್ರಬಂಧ - EUGENIJUS ALISANKA's 'Essay on Lithuanian Literature'

ಮೂಲ: Essay on Lithuanian Literature 

ಕವಿ: ಯುಜಿನಿಯಸ್ ಅಲಿಸಂಕ, ಲಿಥುವೇನಿಯಾ

EUGENIJUS ALISANKA, LITHUANIA 

Translated from the Lithuanian into English by Kerry Shawn Keys

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಲಿಥುವೇನಿಯನ್ ಸಾಹಿತ್ಯದ ಬಗ್ಗೆ ಒಂದು ಪ್ರಬಂಧ

 

ನಾನೇಕೆ ಬರೆಯುತ್ತೇನೆಂಬ ಪ್ರಶ್ನೆಗೆ ಉತ್ತರ 

ಕೊಡುವ ಸಾಧ್ಯತೆ ಕಡಿಮೆಯಾಗುತ್ತಾ ಬರುತಿದೆ

ಕೆಲಸಲ ಅನಿಸುತ್ತೆ: ಬರೆಯಬೇಕಾದರೆ

ಕೆಲಸಲ ನಾನು ಬೆಳಕ ಕಾಣುತ್ತೇನೆ

ಕಾವ್ಯದಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಬರುತಿದೆ  

(ಗದ್ಯದ ಬಗ್ಗೆ ಬೇರೆಯಾಗಿ ಹೇಳಬೇಕಾಗಿಲ್ಲ)

ಕೆಲಸಲ ಅನಿಸುತ್ತೆ: ನಾನು ಮರೆಯಲಿಕ್ಕಾಗಿ ಓದುತ್ತೇನೆಂದು

ಕೆಲಸಲ ಅನಿಸುತ್ತೆ: ಈ ಅನುದ್ದಿಷ್ಟ ಪದಗಳ ಆಟದ ಹಿಂದೆ ಇರುವುದು ನಾನೇ

ಲಿಥುವೇನಿಯನ್ ಕವಿಗಳ ಸಂಗದಲ್ಲಿ ಇರಬೇಕೆಂದು 

ನನ್ನನ್ನು ನಾನು ಹೆಚ್ಚು ಹೆಚ್ಚು ಒತ್ತಾಯ ಪಡಿಸಿಕೊಳ್ಳುತ್ತೇನೆ

ಕೆಲಸಲ ಈ ಕವಿಗಳು ರಷ್ಯನ್ ಕಾವ್ಯದಲ್ಲಿದ್ದಂತೆ 

ಪುಷ್ಕಳವಾಗಿ, ಕುಟಿಲಮನಸ್ಸಿನವರಾಗಿರುತ್ತಾರೆ 

ಕೆಲಸಲ ರಾಪ್ ಸಂಗೀತದಲ್ಲಿದ್ದಂತೆ 

ಮತ್ತೇರಿದವರಾಗಿ, ಜಗಳಗಂಟರಾಗಿರುತ್ತಾರೆ

ಕೆಲಸಲ ನನ್ನ ಹಾಗೆ ಇದ್ದೂ ಇಲ್ಲದಂತಿರುತ್ತಾರೆ

ಲಿಥುವೇನಿಯನ್ ಕಾವ್ಯದ ಬಗ್ಗೆ ನಾನು ಅತಿಶಯಿಸದೆ ಯೋಚಿಸಿದಾಗ

ಕೆಲಸಲ ನನಗೆ ನೆನಪಾಗುಗುವುದು ಕೆಲವೇ ಹೆಸರುಗಳು ಮಾತ್ರ: 

ವ್ಯಾಟೌಟಸ್, ಅಲಫೋನ್ಸಸ್, ಸಿಗಿಟಸ್

ಕೆಲಸಲ ನಾನನ್ನುತ್ತೇನೆ: ಕಾವ್ಯ ಕಲೆಯನ್ನು ಕಲಿಸಬಹುದು 

ಜೀವನವನ್ನಲ್ಲ

ಕೆಲಸಲ ನಾ ಕೇಳುತ್ತೇನೆ: ಕಾವ್ಯಕ್ಕೆ ಜೀವನದ ಬಗ್ಗೆ 

ಕಾಳಜಿಯಿದೆಯೇ ಸೆಲಾನ್‌ಗೆ ಇದ್ದಂತೆ 

ಕೆಲಸಲ ನಾನು ಮೌನವಾಗಿರುತ್ತೇನೆ: 

ಈ ಮೌಢ್ಯ ಮುಂದೆಂದೋ ನನ್ನನ್ನು ಪೇಚಿಗೆ ಸಿಲಿಕಿಸುತ್ತೆ

 

***** 


ಸ್ಕ್ರಿಪ್ಟ್ - EUGENIJUS ALISANKA's 'SCRIPT'

ಮೂಲ: SCRIPT 

ಕವಿ: ಯುಜಿನಿಯಸ್ ಅಲಿಸಂಕ, ಲಿಥುವೇನಿಯಾ

EUGENIJUS ALISANKA, LITHUANIA 

Translated from the Lithuanian into English by 

EUGENIJUS ALISANKA and KERRY SHAWN KEYS

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


ಸ್ಕ್ರಿಪ್ಟ್

 

ಕಾಲ: ಶತಮಾನದ ಆದಿಯಲ್ಲಿ

ಸ್ಥಳ: ಸಾಧ್ಯತೆಗಳಿರುವ ಶಹರಿನಲ್ಲಿ

ದೃಶ್ಯ ಒಂದು: ಒಂದು ಕೆಫೆ, ಮುಂಜಾನೆಯಲ್ಲಿ

ಪಾತ್ರಗಳು: ತೂರಾಡುತ್ತಿರುವ ಕೆಫೆ ಮಾಲಿಕ ಮತ್ತು 

ಮೊದಲ ಗ್ರಾಹಕ

ಮೊದಲನೆಯ ಅಂಕ: ಯುವಕನೊಬ್ಬ ‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’ 

ಪುಸ್ತಕವನ್ನು ಮೂಲ ಭಾಷೆಯಲ್ಲಿ ಓದುತ್ತಾ 

ಕಾಫಿ ಹೀರುತ್ತಿದ್ದಾನೆ. ಪುಸ್ತಕವನ್ನು 

ಮೇಜಿನಲ್ಲೇ ಬಿಟ್ಟು ಎದ್ದು ಹೋಗುತ್ತಾನೆ.

ದೃಶ್ಯ ಎರಡು: ಅದೆ ಕೆಫೆ, ಮಧ್ಯಾಹ್ನದ ಹೊತ್ತು

ಪಾತ್ರಗಳು: ಉಲ್ಲಾಸಭರಿತ ಕೆಫೆ ಮಾಲಿಕ ಮತ್ತು 

ಊಟಮಾಡುತ್ತಿರುವ ಕಾರ್ಮಿಕರು.

ಎರಡನೆಯ ಅಂಕ: ಊಟಕ್ಕೆ ಬಂದವರು ದಿನಪತ್ರಿಕೆಗಳ ಪುಟ 

ತಿರುಗಿಸುತ್ತಿದ್ದಾರೆ; ಯೂರೋ ಕರೆನ್ಸಿಯ ವಿನಿಮಯ ದರದ 

ಬಗ್ಗೆ ತ್ಸಾಹದಿಂದ ಚರ್ಚಿಸುತ್ತಿದ್ದಾರೆ.

ದೃಶ್ಯ ಮೂರು: ಅದೇ ಕೆಫೆ, ರಾತ್ರಿಯಲ್ಲಿ

ಪಾತ್ರಗಳು: ಸುಸ್ತಾಗಿರುವ ಕೆಫೆ ಮಾಲಿಕ ಮತ್ತು 

ಕೆಲಸದ ನಂತರ ಅಲ್ಲಿ ಸೇರಿರುವ ಸ್ಥಳೀಯರು.

ಮೂರನೆಯ ಅಂಕ: ಬಿಯರ್ ಕುಡಿಯುತ್ತಿರುವ ಸ್ಥಳೀಯರು.  

ಟೀವಿ-ಯಲ್ಲಿ ಯುರೊಪಿಯನ್ ಫುಟ್ಬಾಲ್ ಚ್ಯಾಂಪಿಯನ್‌ಶಿಪ್

ಪ್ರಸಾರವಾಗುತ್ತಿದೆ, ಬಲು ಜೋರಾಗಿ ಕೇಳಿಬರುತ್ತಿದೆ.

ದೃಶ್ಯ ನಾಲ್ಕು: ಅದೇ ಕೆಫೆ, ಮುಚ್ಚುವ ಮುನ್ನ

ಪಾತ್ರಗಳು: ಕೆಫೆಯ ಮಾಲಿಕ

ನಾಲ್ಕನೆಯ ಅಂಕ: ಕೆಫೆ ಮಾಲಿಕ ‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’ 

ಪುಸ್ತಕವನ್ನು ಓದುತ್ತಿದ್ದಾನೆ.

ಪರದೆ 

***** 

‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’ [The Decline of the West] ಎಂಬುದು ಸ್ವಾಲ್ಡ್ ಸ್ಪೆಂಗ್ಲರ್ [Oswald Spengler] ಎಂಬ ಜರ್ಮನ್ ತಹಾಸಜ್ಞ ಹಾಗೂ ಇತಿಹಾಸದ ಚಿಂತಕ, ಜರ್ಮನ್ ಭಾಷೆಯಲ್ಲಿ, ರಡು ಸಂಪುಟಗಳಲ್ಲಿ [1918ರಲ್ಲಿ ಮೊದಲ ಸಂಪುಟ ಹಾಗೂ 1922ರಲ್ಲಿ ಎರಡನೆಯ ಸಂಪುಟ], ಬರೆದ ಪುಸ್ತಕ.    ಸ್ಪೆಂಗ್ಲರ್ ತನ್ನ ಪುಸ್ತಕವನ್ನು "ಕೋಪರ್ನಿಕನ್ ಲೋಕ-ದೃಷ್ಟಿಯನ್ನು ಬುಡಮೇಲು” ಮಾಡುವ ಪುಸ್ತಕ  ಎಂದು ಪರಿಚಯಿಸಿದನು.  ಸಮಾಜದ ಕುಸಿತದ ಒಂದು ನಿರ್ದಿಷ್ಟ ರೂಪಕವಿದು ಹಾಗೂ ಇತಿಹಾಸದ ಯುರೋಸೆಂಟ್ರಿಕ್‌ ದೃಷ್ಟಿಯನ್ನು, ವಿಶೇಷವಾಗಿ ಇತಿಹಾಸವನ್ನು "ಪ್ರಾಚೀನ-ಮಧ್ಯಕಾಲೀನ-ಆಧುನಿಕ" ಆಗಿ ವಿಭಜಿಸುವ ಕ್ರಮವನ್ನು ತಿರಸ್ಕರಿಸುತ್ತದೆ.


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...