Tuesday, July 27, 2021

ಗಾಳಿ - JULIA HARTWIG'S 'WINDS'

ಮೂಲ: WINDS

ಕವಿ: ಯುಲಿಯಾ ಹಾರ್ತ್‌ವಿಗ್  JULIA HARTWIG, Poland


Translated from the Polish into English by JOHN & BOGDANA CARPENTER


ಕನ್ನಡ ಅನುವಾದ: ಸ್. ಜಯಶ್ರೀನಿವಾಸ ರಾವ್


ಗಾಳಿ

 

ಗಾಳಿ!  ನಿನ್ನನ್ನು ಹೇಗೆ ನಾನರಿಯುವೆ?

ನಿನ್ನ ದೂತರು ಮಾತ್ರ ನಿನ್ನ ಬಗ್ಗೆ ಹೇಳುವರು

ಮರಗಳ ರೆಂಬೆಗಳು, ನಿನ್ನ ಅಂಗೈಯಡಿಯಲ್ಲಿ ಬಾಗುವ ಹುಲ್ಲುಗಳು

ತೋರಿಸುತ್ತವೆ ಇಲ್ಲಿ! ಇಲ್ಲಿ! ಅವು ತೋರಿಸಿ ಮುಗಿಸಲಿಕ್ಕಿಲ್ಲ 

ನೀನು ಮಾಯ

 

ಅದೃಶ್ಯವಾಗಿದ್ದು ನೀನಾಳುವೆ ದೃಶ್ಯಲೋಕವನ್ನು

ಹಠಾತ್ತಾಗಿ ಬಡಿದ ಜನ್ನಲ ಬಾಗಿಲು

ಅಟ್ಟಿಹೋದ ಮೋಡಗಳ ಮಂದೆಗಳು

ಗಾಳಿಯೊಂದು ಮಾತ್ರವೇ ಮತ್ತೊಂದು ಗಾಳಿಯನು ನೋಯಿಸದೇ ಬೆನ್ನಟ್ಟುತ್ತದೆ

ಮೃದುವಾಗಿ ತಬ್ಬುತ್ತಾ ಅವು ಪ್ರೇಮ, ಸಾವು, ವಿನಾಶವನ್ನು ಬಿತ್ತುತ್ತವೆ

 

ಓ ಗಾಳಿಯ ಕಂದಗಳಿರಾ – ದಕ್ಷಿಣದ ಹೊಳೆಯುವ ಮೊಗದ ಮೇಲೆ 

ನಲಿದಾಡುವ ಕೊಂಕುಕುರುಳಿನ ಮಲೆಗಾಳಿಗಳಿರಾ,

ಬಡಗಣ ಚಳಿಗಾಳಿ, ವಾಣಿಜ್ಯಗಾಳಿ, ವಾಯವ್ಯ ಚಳಿಗಾಳಿ

ಈಗೆಲ್ಲ ಬರೀ ಶರತ್ಕಾಲದ ಹಿಮಬಿರುಗಾಳಿಗಳಷ್ಟೇ

ಮಳೆಯೊಂದಿಗೆ ಬೆರೆತು ಜೋರಾಗಿ ಬೀಸುವ ಚಂಡಮಾರುತಗಳು

ಮತ್ತೆ ತದೇಕವಾಗಿ ನೋಡುವೆವು ಫೋ‌ಟೋ ಆಲ್ಬಮ್ಗಳಲ್ಲಿ 

ಇಟಾಲಿಯನ್ ನಿಸರ್ಗಚಿತ್ರಗಳನ್ನು


***** 


ಪದಗಳನ್ನ ಕಟ್ಕೊಂಡು ಏನ ಮಾಡೋದು - JULIA HARTWIG'S 'WHAT DO WITH WORDS'

ಮೂಲ: WHAT TO DO WITH WORDS

ಕವಿ: ಯುಲಿಯಾ ಹಾರ್ತ್‌ವಿಗ್  JULIA HARTWIG, Poland


Translated from the Polish into English by JOHN & BOGDANA CARPENTER


ಕನ್ನಡ ಅನುವಾದ: ಸ್. ಜಯಶ್ರೀನಿವಾಸ ರಾವ್

 

ಪದಗಳನ್ನ ಕಟ್ಕೊಂಡು ಏನ ಮಾಡೋದು

 

ಪರೋಕ್ಷದಲ್ಲಿ ವಸ್ತುವಿಲ್ಲದ

ಪದಗಳನ್ನ ಕಟ್ಕೊಂಡು ಏನ ಮಾಡೋದು

ಸ್ಪರ್ಶಕ್ಕಿಲ್ಲ ಸ್ವಾದಕ್ಕಿಲ್ಲ 

ದೃಷ್ಟಿ ನೆಲೆಸಲು ಏನೂ ಇಲ್ಲ

ಮಾನವ ಪ್ರಕೃತಿಗೆ ಸಂಬಂಧವಿಲ್ಲ

 

ಉದಾಹರಣೆಗೆ, ‘ಅನಂತತೆ’ ಎಂಬ ಪದ

ಬರಡಾದ, ಶುದ್ದವಾದ, ತಾರೆಗಳ ಹೊಳಪಿನಂತೆ ತಣ್ಣನೆಯ ಪದ

ಅಂತರ್‌ಗೃಹಗಳ ಆಕಾಶದ ಮರುಭೂಮಿಗೆ ನಮ್ಮನ್ನು ಕೊಂಡೊಯ್ಯುತ್ತೆ

ಗಾಳಿ ಅಳ್ಳಕನಾದ ಕತ್ತಲ ಮರಣಕೂಪಕ್ಕೆ ಕೊಂಡೊಯ್ಯುತ್ತೆ

ನಿರಾಮಿಷ ನಿರ್ಗಂಧ ನಿರ್ವರ್ಣ ಪದ

ಸಾಕುಪ್ರಾಣಿಯೂ ಪಾಲಿಸದಂತಹ ಧ್ವನಿಯ ಪದ

ಅನಂತತೆಗಿಂತ ಗಾಳಿಯೇ ಹೆಚ್ಚು ಗ್ರಾಹ್ಯ

ದೊಡ್ಡ ಸಂಖ್ಯೆಯೊಂದು ಕಡೇಪಕ್ಷ ಎಣಿಸಲು ಬರುವಂತಿರುತ್ತೆ

 

ದರೆ ‘ಅನಂತತೆ’?  

ಅದು ತಲೆಬುರುಡೆಯೊಳು ಲಟಲಟ ಸುತ್ತುತ್ತೆ ಒಮ್ಮೆ ಕರೆಸಿದ ಮೇಲೆ

ಅದನ್ನು ನಿಘಂಟಿನಿಂದ ಅಳಿಸಲಾಗದು ಮ್ಮೆ ಸೃಷ್ಟಿಸಿದ ಮೇಲೆ

ಅನಾಥ ಸ್ವಚ್ಛಂದ ಅಗಾಧ

ನಮ್ಮ ಮರುಳಿಗೆ ಮತ್ತೊಂದು ಪುರಾವೆಯಂತೆ

 

*****


Thursday, July 22, 2021

ಗಂಡನ ಹೆಂಡತಿ - GANDANA HENDATI - MICERE GITAE MUGO'S 'WIFE OF THE HUSBAND'

ಇಂಗ್ಲಿಷ್ ಮೂಲ: WIFE OF THE HUSBAND

ಕವಿ: ಮಿಶೆರೆ ಗಿತಾಯೆ ಮೊಗೊ, ಕೆನ್ಯ MICERE GITAE MUGO, KENYA

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಗಂಡನ ಹೆಂಡತಿ

 

ಅವನ ಗೊರಕೆಗಳು

ಮಲಗಿದ ಗುಡಿಸಲನು ಕಾಯುತ್ತವೆ

ಆದರೆ ದಿನಗೆಲಸದ

ಭಾರ

ಹಾಗೂ ನಾಳಿನ

ಹೊರೆ

ಬಗ್ಗಿಹೋದ ಅಮ್ಮನ ಮೇಲೆ

ಭಾರವಾಗಿ ಕೂತಿವೆ ಅವಳು

 

ಗುಡಿಸಲನ್ನು ಗುಡಿಸುವಾಗ

ಕೊಟ್ಟಿಗೆಯನ್ನು ಮುಚ್ಚುವಾಗ

ಒಲೆಯನ್ನು ಸ್ವಚ್ಛ ಮಾಡುವಾಗ

ಕೆಂಪಿದ್ದಲನ್ನು ಆರಿಸುವಾಗ

ಕೊನೇಗೆ ಅವಳ

ಅವಿಶ್ರಾಂತ ಹಾಸಿಗೆಯನ್ನು ಆಶ್ರಯಿಸುವಾಗ

 

ಅವನ ಗೊರಕೆಗಳು

ಸ್ವಾಗತಿಸುತ್ತವೆ ಅವಳನ್ನು ಹಾಸಿಗೆಗೆ

ನಸುಕಿಗೆ ನಾಲ್ಕು ಘಂಟೆ

ಅವನ ಗೊರಕೆಗಳು 

ಎಬ್ಬಿಸುತ್ತವೆ ಅವಳನ್ನು ಹಾಸಿಗೆಯಿಂದ

ಸರಿಯಾಗಿ ಆರು ಘಂಟೆ

ಎದ್ದೇಳು

ಓ, ಗಂಡನ ಹೆಂಡತಿಯೇ!! 

 

*****


WIFE OF THE HUSBAND 

His snores
protect the sleeping hut 

but the day’s
load 

and the morrow’s 

burden
weigh heavily over
the stooping mother as she 

 

sweeps the hut
bolts the pen
tidies the hearth
buries the red charcoals 

and finally seeks 

her restless bed 

 

His snores
welcome her to bed
four hours to sunrise
His snores rouse her from bed 

six sharp

Arise
O, wife of the husband! 

***** 

ಕೊಳದಲ್ಲೊಂದು ನಿಬ್ಬು - KOLADALLONDU NIBBU - NIYI OSUNDARE'S 'A NIB IN THE POND'

ಮೂಲ: A NIB IN THE POND

ಕವಿ: ನೀಯೀ ಓಶುಂಡಾರೆ, ನೈಜೀರಿಯಾ – NIYI OSUNDARE, NIGERIA

ಕನ್ನಡ ಅನುವಾದ: ಎಸ. ಜಯಶ್ರೀನಿವಾಸ ರಾವ್

 

ಕೊಳದಲ್ಲೊಂದು ನಿಬ್ಬು

 

ಭೂಮಿಯನ್ನು ಬಗೆದು ತೆರೆದ

ನೀ ಬರೆದ ಸಾಲುಗಳನ್ನು ಓದುವೆವು

ಪಥಗಳ ಪುಸ್ತಕದಂತೆ

ಸಾವಿರ ಋತುಗಳ ಮೇಣವನ್ನು ಕರಗಿಸಿದ

ನಿನ್ನ ದನಿಯ ಕೇಳುವೆವು

 

ಮೌನದ ಕೊಳದಲ್ಲಿ 

ನಿಬ್ಬನ್ನು ಎಸೆದವನೇ

ನಿನ್ನ ಮಸಿಕುಡಿಕೆಯಲ್ಲೆದ್ದ ಅಲೆಗಳು

ಸಿಪಾಯಿಚಾಳುಗಳನ್ನು ಪ್ರಬಲವೇಶ್ಯಾಖಾನೆಗಳನ್ನು ದಂಗುಬಡಿಸುತ್ತೆ

ಲೂಟಿಯ ಸಂಚುಗಳನ್ನು ಬುಡಮೇಲಾಗಿಸುತ್ತೆ

ಬಿದ್ದಿದೆ ನೋಡು ಲೆಕ್ಕಾಚಾರದ ಮಗ್ಗಿಪಟ್ಟಿಕೆಯ ಮೇಲೆ

ವಿಷದ ಬಟ್ಟಲಿನಂತೆ

 

ನಾವು ನಿನ್ನ ಕವಿತೆಯ ಹಾಡುವೆವು

ಹಾಗೂ ನಮ್ಮ ದನಿಯ ಕೇಳುವೆವು

ಪದಗಳನ್ನು ಓದುವೆವು

ಹಾಗೂ ಪ್ರತಿ ಅಕ್ಷರದ ಕನ್ನಡಿಯಲ್ಲಿ 

ನಮ್ಮನ್ನು ನಾವೇ ನೋಡುವೆವು

 

ಗ, ಕೈಗಳು ಎರಡಿದ್ದಾಗ್ಯೂ

ಯಾವುದು ಕುಂಡೆ ತೊಳೆಯುವುದೆಂದು ಗೊತ್ತಿದೆ ನಮಗೆ

ರಸ್ತೆ ಕವಲೊಡೆದಿದೆಯಾದರೂ 

ಮನೆಗೆ ಹತ್ತಿರದ ದಾರಿಯಾವುದೆಂದು ಗೊತ್ತಿದೆ ನಮಗೆ

 

***** 



ಸಣ್ಣ ಕವಿತೆಗಳು - BRIEF POEMS - ANNA SWIRSZCZYNSKA

Dear friends ... here are my Kannada translations of 5 'Brief Poems' by the Polish poet, Anna Świrszczyńska (She shortened her name to Anna Swir) ...

Anna Świrszczyńska was not well-known or much celebrated in her native Poland and was virtually unknown to the English-speaking world, though she belonged to the same generation of poets as Wislawa Szymborska, Czeslaw Milosz and others.  

Czeslaw Milosz explains why he introduced her work to a wider, English speaking audience: he translated her poems in order to repair injustice, because she was underestimated. "I consider her a very important poet. But she was somehow in the shade. First of all, she had great difficulty in finding proper expression for her experiences, her war experiences. And then later she had difficulty finding this proper expression also for her love experiences. So she was a latecomer in a way. And for that reason she was not highly known."

In 1985, Milosz published "Happy as a Dog’s Tail," the first collection in English to consist solely of Swir’s poems. All of the poems were translated by Milosz, in partnership with Leonard Nathan, and consisted of poems from her mature volumes . In 1996, Milosz and Nathan re-edited the volume, adding an additional 65 poems and removing 31 that had been in the first edition, and renamed the book "Talking to My Body."

New translations of the poems have appeared in "Building the Barricade," translated by Piotr Florczyk in 2009. I leave it to Milosz, in a posthumous tribute, to sum up the enduring appeal of Anna Swir’s poetry: "Opening myself to her verses, I have been more and more conquered by her extraordinary, powerful, exuberant, and joyous personality . . . her calm in accepting reality, whether it brought bliss or suffering. A mood of detachment is visible in her late poems. To have met such a person through her poems has inclined me to faith and optimism . . . In her later poems it was apparent that she had been gradually moving toward a supreme quietude."

Here are my Kannada translations:

ಮೂಲ: BRIEF POEMS
ಕವಿ: ಆನ್ನಾ ಶ್ವೆರ್‌ಚಿನ್ಸ್‌ಕಾ, ಪೋಲಂಡ್ ANNA SWIRSZCZYNSKA, Poland
Translated from the Polish into English by Czeslaw Milosz and Leonard Nathan
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
 
ನನ್ನೊಳಗೊಂದು ಬೆಳಕಿದೆ
ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ
ಯಾವಾಗಲೂ ನಾನು ನನ್ನೊಳಗೆ
ಬೆಳಕೊಂದ ಹೊತ್ತಿರುವೆ
ಗದ್ದಲ ಗಲಭೆಗಳ ಮಧ್ಯೆ
ನಾ ಮೌನವ ಹೊತ್ತಿರುವೆ
ಯಾವಾಗಲೂ ನಾನು ಬೆಳಕನ್ನು ಮೌನವನ್ನು ಹೊತ್ತಿರುವೆ.
*****
 
ದುಃಖಿತ ಪ್ರೇಮಿಗಳು
ಕಣ್ಣೀರ ಹನಿಯೊಂದು ಕೂಡಿಸಿದ
ಕಣ್ಣು ಮತ್ತು ಕಣ್ಣುರೆಪ್ಪೆಗಳ ಹಾಗೆ
*****

ಆತಂಕ
ಮರಗಳಲ್ಲಿ ಗೂಡೊಂದ ಕಟ್ಟಿರುವೆ ನೀನು
ನಮ್ಮ ಪ್ರೇಮದ ಸಲುವಾಗಿ
ಆದರೆ ನೋಡು ಎಷ್ಟೊಂದು
ಹೂಗಳ ತುಳಿದು ಹಾಕಿರುವೆ
*****
ಕಡಲತೀರದಲ್ಲಿ ಮೆಟ್ಟುಗಳು
ನನ್ನಿಂದ ಈಜಿ ಹೋಗಿರುವೆ ನಾನು
ಕರಿಯಬೇಡ ನನ್ನನ್ನು
ನಿನ್ನಿಂದ ಈಜಿ ಹೋಗು ನೀನೂ ಸಹ
ನಾವಿಬ್ಬರು ಈಜಿ ಹೋಗೋಣ, ನಮ್ಮ
ದೇಹಗಳನ್ನು ತೀರದಲ್ಲಿ ಬಿಟ್ಟು ಬಿಟ್ಟು,
ಬಿಚಿಟ್ಟ ಜೋಡಿ ಮೆಟ್ಟುಗಳ ಹಾಗೆ.
*****

ಬೆನ್ನಚೀಲಗಳು ಮತ್ತು ಪ್ರೇಮ
ಎರಡು ಬೆನ್ನ ಚೀಲಗಳು
ಎರಡು ನರೆತ ತಲೆಗಳು
ಹಾಗೂ ಈ ಭೂಮಿಯ ಎಲ್ಲಾ ರಸ್ತೆಗಳು
ಅಲೆದಾಡುವುದಕ್ಕೆ
*****


THERE IS A LIGHT IN ME

Whether in daytime or in nighttime
I always carry inside
a light.
In the middle of noise and turmoil
I carry silence.
Always I carry light and silence.
*****

SAD LOVERS
Like an eye and an eyelid
United by a tear.
*****

ANXIETY
You make among the trees
a nest for our love.
But look at the flowers
you’ve crushed.
*****

BEACH SANDALS
I swam away from myself.
Do not call me.
Swim away from yourself, too.
We will swim away, leaving our bodies
on the shore
like a pair of beach sandals.
*****

LOVE WITH RUCKSACKS
Two rucksacks,
two grey heads.
And the roads of all the world
for wandering.
*****

Wednesday, July 7, 2021

ಒಂದಾನೊಂದು ದಿನ - ONDANONDU DINA - PIOTR SOMMER'S 'ONE DAY'

ಮೂಲONE DAY

ಕವಿಪ್ಯೋತ್ರ್ ಸಾಮರ್ಪೋಲಂಡ್ – PIOTR SOMMER, Poland

Translated from the Polish into English by Halina Janod and Michael Kasper

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ಒಂದಾನೊಂದು ದಿನ

 

ಒಂದಾನೊಂದು ದಿನ ನಾನು ಈ ಲೋಕದ ಕದವ ತೆರೆಯುವೆ

ಕಾಲಿಡುವೆ ಒಳಗೆ ಮರಳಿ ಬಂದಂತೆ ಮನೆಗೆ.

ನನ್ನ ಬಾಯಿಂದ, ಹೃದಯದಿಂದ ಹೊರಬರುವ ಸ್ವರಕ್ಕಾಗಿ,

ಅಥವಾ ಯಾವುದೇ ಪದಕ್ಕಾಗಿ ನಾ ಸಂಕೋಚಪಡಲಾರೆ.

 

ಕೇಳುವೆ ನಾ ಲೋಕಕ್ಕೆ ಲೆಕ್ಕವ – 

ಕೇಳುವೆ ನಾನಿಲ್ಲಿ ಇಲ್ಲದಾಗಿನ 

ವೇಳೆಯ ವರದಿಯ.

ನಾನನ್ನುವೆ: “ಲೋಕವೇ, ಹೇಳು ನನಗೆ

ಏನಿತ್ತು, ನಾನಿಲ್ಲದಾಗ?”

 

ಆಮೇಲೆ, ಮತ್ತೆ ನಾನನ್ನುವೆ:

“ಕ್ಷಮಿಸು ನನ್ನನ್ನು, ಲೋಕವೇ,

ಇಲ್ಲಿ ತನಕ ನಾ ಕಾಯುತ್ತಿದ್ದೆ ಸೂಕ್ತ ರೈಲುಗಾಡಿಗಾಗಿ,

ನನ್ನೆದೆಯ ರೈಲೆಂಜಿನಿನ ಪಿಸುದನಿಗಾಗಿ,

 

ನೋಡು, ಹೀಗಿರುವೆ ನಾನು, ಲೋಕವೇ,  

ತುಸು ಬದಲಾಗಿರಬಹುದು,

ವ್ಯಂಗ್ಯವೆಲ್ಲವ ತೊರೆದು

ಹಾಗೂ ಗಂಭೀರತೆ ಹೆಚ್ಚಾಗಿರಬಹುದು.”

 

ನಾನಿಲ್ಲಿಗೇ ನಿಲ್ಲಿಸುವುದು ಒಳ್ಳೆಯದು ಅಂತನಿಸುತ್ತದೆ – 

ನನ್ನ ಮೂಳೆಗಳಲ್ಲಿ ನಾ ಆಯಾಸವ ಅನುಭವಿಸುವೆ,

ಲೋಕದ ಮುಖದಲ್ಲಿ ಪ್ರೀತಿಯ ನೋಡುವೆ,

ಸ್ವಲ್ಪಮಟ್ಟಿಗೆ ಪದಗಳಿಗಾಗಿ ಪರದಾಡುವೆ;


*****

Tuesday, July 6, 2021

ಕಣ್ಮರೆಯಾದ ಕಲ್ಲುಗಳು - KANMAREYAADA KALLUGALU - CLIFTON GACHAGUA'S 'LOST STONES'

Dear friends ... here is my Kannada translation of another English poem by the new generation Kenyan poet, CLIFTON GACHAGUA (b. 1987), LOST STONES ... this poem is also from Clifton Gachagua’s collection, “The Madman at Kilifi” ... 

 

I’m still wondering if I got the poem right ... this one haunts me ...   

 

ಮೂಲLOST STONES 

ಕವಿಕ್ಲಿಫ಼‌್ಟನ್ ಗಚಗುವ, ಕೆನ್ಯ CLIFTON GACHAGUA, KENYA

ಕನ್ನಡಕ್ಕೆ ಅನುವಾದಎಸ್ ಜಯಶ್ರೀನಿವಾಸ ರಾವ್

 

ಕಣ್ಮರೆಯಾದ ಕಲ್ಲುಗಳು

 

ಬನ್ನಿ ಈಗ ನನ್ನ ಹಿಂದೆ ಕಣ್ಮರೆಯಾದ ಕಲ್ಲುಗಳತ್ತ;

ಇಷ್ಟೇ ನಿಮ್ಮನ್ನು ಬೇಡಿಕೊಳ್ಳುತ್ತೇನೆ.

 

ಧೂಳು ಶೇಖರಿಸುತ್ತಾ, ನೀಡಿ ಗಮನಭಂಗಗಳ

ಒಂದು ಕ್ಷಣ, ಎಂದೂ ಆಯಲ್ಪಡದಂತಹ ಕಲ್ಲುಗಳು

 

ಮಳೆಯನ್ನು ಅನುಭವಿಸುವಂತೆ.

ಬನ್ನಿ ನನ್ನ ಹಿಂದೆ ಧೂಳಿನತ್ತ.  ಹೇಗೆ 

ಮೈಮರೆತು ಹೋಗಿವೆ ಕೆಲವು ಕಲ್ಲುಗಳು ನೋಡಿ.

 

*****  



LOST STONES 

 

Now follow me to lost stones; 

all this I beg you. 

 

Collecting dust, offer distractions for 

a second, experiencing rain as 

 

stones never to be picked up. 

Follow me to the dust. See 

 

how lost some stones can be. 

 

*****

Monday, July 5, 2021

ಲೇಖಕಿಯೊಬ್ಬಳು ಬಟ್ಟೆ ಒಗೆಯುತ್ತಾಳೆ - LEKHAKIYOBBALU BATTE OGEYUTTALE - ANNA SWIRSZCZYNSKA'S 'A WOMAN WRITER DOES LAUNDRY'

ಮೂಲ: A WOMAN WRITER DOES LAUNDRY

ಕವಿನ್ನಾ ಶ್ವೆರ್‌ಚಿನ್ಸ್‌ಕಾ, ಪೋಲಂಡ್  ANNA SWIRSZCZYNSKA, Poland 

Translated from the Polish into English by Czeslaw Milosz and Leonard Nathan


ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ಲೇಖಕಿಯೊಬ್ಬಳು ಬಟ್ಟೆ ಒಗೆಯುತ್ತಾಳೆ

 

ಟೈಪ್ ಮಾಡಿದ್ದು ಸಾಕು.

ಇವತ್ತು ನಾನು ಬಟ್ಟೆ ಒಗೆಯುವೆ

ಹಳೆಯ ಪದ್ಧತಿಯಲ್ಲಿ.

ನಾ ಗೆಯುವೆ, ನಾ ಒಗೆಯುವೆ, ಅಲಸುವೆ, ಹಿಂಡುವೆ,

ನನ್ನ ಅಜ್ಜಿ ಪಿಜ್ಜಿಯರು ಒಗೆಯುತ್ತಿದ್ದ ಹಾಗೆ.

ವಿರಾಮತೆ.

 

ಬಟ್ಡೆ ಒಗೆಯುವುದು ಆರೋಗ್ಯಕರ, ಉಪಯುಕ್ತ,

ಒಗೆದ ಒಂದು ಅಂಗಿಯ ಹಾಗೆ.  ಬರವಣಿಗೆ

ಅನುಮಾನಾಸ್ಪದ.  

ಹಾಳೆಯ ಮೇಲೆ ಮೂರು ಪ್ರಶ್ನೆಚಿಹ್ನೆಗಳನ್ನು

ಟೈಪ್ ಮಾಡಿದ ಹಾಗೆ. 

 

*****



A WOMAN WRITER DOES LAUNDRY

 

Enough typing.
Today I am doing laundry
in the old style.
I wash, I wash, rinse, wring
as did my grandmothers and great-grandmothers.
Relaxation.

Doing laundry is healthful and useful
like a washed shirt. Writing
is suspect.
Like three interrogation marks
typed on a page.

 

*****

Friday, July 2, 2021

ಸತ್ತವರ ನಾಡು - SATTAVARA NAADU - JARED ANGIRA'S "THE COUNTRY OF THE DEAD"

Dear friends ... continuing with my current tour of poets from Africa, here is my Kannada translation of Kenyan poet, JARED ANGIRA’s English poem, THE COUNTRY OF THE DEAD ...  Jared Angira was born in 1947 and has published seven volumes of poems.  He was once hailed by Wole Soyinka and lauded by Ezenwa-Ohaeto as “one of the most exciting poets in Africa.”  He has also been called “the country's first truly significant poet.”  

 

ಮೂಲ: THE COUNTRY OF THE DEAD

ಕವಿ: ಜಾರೆಡ್ ಅಂಗಿರಾ, ಕೆನ್ಯ – JARED ANGIRA, KENYA

ಕನ್ನಡಕ್ಕೆ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ಸತ್ತವರ ನಾಡು

 

ಸತ್ತವರ ನಾಡು

ನಾ ಮಾತಾಡುವೆ

ಉತ್ತರವಿಲ್ಲ

ನಾನಳುವೆ

ಕರುಣೆಯಿಲ್ಲ

ನಾ ನೋಡುವೆ

ಬಣ್ಣವಿಲ್ಲ

ನಾನಾಲಿಸುವೆ

ಶಬ್ಧವಿಲ್ಲ

ಸತ್ತವರ ನಾಡು

 

ನಾ ಕಿರುಚುವೆ, ಮಾರುಲಿ

ಸತ್ತ ಬಂಡೆಗೆ ಹೊಡೆಯುತ್ತೆ

ನಾ ಒದೆಯುವೆ, ಹೆಬ್ಬೆಟ್ಟು 

ಒಣ ಕೊರಡಿಗೆ ಬಡಿದು ಮುರಿಯುತ್ತೆ

ನಾನಳುವೆ, ಕರುಣೆಯಿಲ್ಲ

ಸತ್ತವರ ನಾಡು

 

ನಾ ಹೊರಬಾಗಿಲ ಕಡೆ ಹುಡುಕಾಡಿರುವೆ

ಆದರೆ ಕೇಳಿಸಲಿಲ್ಲ ಗೂಬೆಗಳ ಕೂಗು,

ಗಿಣಿಗಳ ಕೂಗು, ಅಲೆಗಳು ಅಪ್ಪಳಿಸಿದವು

ಹಡಗುಗಳ ಅವಶೇಷಗಳನ್ನು ಬಹುದೂರ

ನನ್ನ ಕೂಡ ಹೊಯಿಗೆಯೂ ಎವೆಯಿಕ್ಕದೇ ನೋಡುತ್ತದೆ

ಸತ್ತವರ ನಾಡು.

 

*****



THE COUNTRY OF THE DEAD 

 

The country of the dead 

I speak
no answer
I weep 

no pity
I watch
no colour
I listen
no sound
the country of the dead

 

I shout, the echo strikes 

the dead rock
I kick, my toe mutilates 

on dry stump 

I weep, no pity
the country of the dead 

 

I’ve searched the exit
but heard no owls
no parrots, the waves beat afar 

on wrecks of ships
the sand stares with me
the country of the dead.


*****

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...