Monday, February 14, 2022

ನಾನು ನಡೆಯುತ್ತಾ ವಿಸ್ಮಯಪಡುತ್ತೇನೆ - JANIS ELSBERGS' 'I’M WALKING AND WONDERING'

ಮೂಲ: I’M WALKING AND WONDERING

ಕವಿ: ಯಾನಿಸ್ ಎಲ್ಸ್‌ಬರ್ಗ್ಸ, ಲ್ಯಾಟ್ವಿಯಾ 

JANIS ELSBERGS, LATVIA

Translated from the Latvian by Peteris Cedrinš

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


 

ನಾನು ನಡೆಯುತ್ತಾ ವಿಸ್ಮಯಪಡುತ್ತೇನೆ

 

ನಾನು ನಡೆಯುತ್ತಾ ವಿಸ್ಮಯಪಡುತ್ತೇನೆ

ನಾನೇಕೆ ಹೆಜ್ಜೆಗುರುತುಗಳನ್ನ ಹಿಂಬಿಡುವುದಿಲ್ಲವೆಂದು.

ನಾನು ಈ ದಾರಿಯಾಗಿ ನಿನ್ನೆ ಹೋದೆ.

ನಾನು ಈ ದಾರಿಯಾಗಿ ಜೀವನವೆಲ್ಲಾ ನಡೆದಿರುವೆ.

 

ನಾನು ಹಿಂದುರಿಗಿ ನೋಡಲ್ಲ.

ನನ್ನ ನೆರಳನ್ನ ಕಾಣಲಾರೆಂಬ ಆತಂಕ ನನಗೆ.

 

‘ನೀನು ಜೀವಂತವಾಗಿರುವೆಯಾ?’

ಅಮಲೇರಿದ ಸಜ್ಜನನೊಬ್ಬ ಅಚಾನಕ್ಕಾಗಿ 

ಕೇಳುತ್ತಾನೆ ನನ್ನನ್ನು.

 

‘ಹೌದೌದು,’ ನಾನುತ್ತರಿಸುತ್ತೇನೆ ಲಗುಬಗೆಯಿಂದ.

‘ಹೌದೌದು,’ ನಾನುತ್ತರಿಸುತ್ತೇನೆ ನನ್ನಿಂದಾದಷ್ಟು ವೇಗವಾಗಿ.

 

***** 



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...