Sunday, October 10, 2021

ಪಿಂಗಾಣಿ ವಸ್ತುಗಳಾದರೆ, ಹೇಗಿರಬೇಕೆಂದರೆ - STANISLAW BARANCZAK'S "IF PORCELAIN, THEN ONLY THE KIND"

ಮೂಲ: IF PORCELAIN, THEN ONLY THE KIND

ಕವಿ: ಸ್ತನಿಸ್‌ಲೊ ಬರನ್‌ಚಕ್, ಪೋಲಂಡ್ STANISLAW BARANCZAK, POLAND

Translated from the Polish into English by Frank Kujawinski

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ಪಿಂಗಾಣಿ ವಸ್ತುಗಳಾದರೆ, ಹೇಗಿರಬೇಕೆಂದರೆ

 

ಪಿಂಗಾಣಿ ವಸ್ತುಗಳಾದರೆ, ಹೇಗಿರಬೇಕೆಂದರೆ ಬುಲ್ಡೋಜ಼ರ್ ಅಥವಾ ಟ್ಯಾಂಕಿನ

ಗಾಲಿಗಳಡಿಯಲ್ಲಿ ಪುಡಿಪುಡಿಯಾದರೂ ನಿಮ್ಮ ಗಮನಕ್ಕೆ ಬಾರದಂತಹದ್ದಾಗಿರಬೇಕು;

ಕುರ್ಚಿಯಾದರೆ, ಹೆಚ್ಚು ಆರಾಮದಾಯಕವಾಗಿರಬಾರದು, 

ಎದ್ದು ಹೊರಡಬೇಕಾದಾಗ ಎಲ್ಲಾದರೂ ಬೇಸರವಾಗಿಬಿಟ್ಟರೆ;

ಬಟ್ಟೆಗಳಾದರೆ, ಅಷ್ಟೇ, ಒಂದು ಸೂಟ್‌ಕೇಸಿನಲ್ಲಿ ಹಿಡಿಯುವಷ್ಟು;

ಪುಸ್ತಕಗಳಾದರೆ, ಅವೇ, ನಿಮ್ಮ ನೆನಪಿನಲ್ಲಿ ಒಯ್ಯಲಾಗುವಷ್ಟು;

ಯೋಜನೆಗಳಾದರೆ, ಅವೇ, ಮುಂದೆಂದಾದರೂ ಬೇರೊಂದು ಬೀದಿಗೆ, ಖಂಡಕ್ಕೆ,

ಐತಿಹಾಸಿಕ ಕಾಲಕ್ಕೆ, ಲೋಕಕ್ಕೆ ಹೋಗಬೇಕಾದ ಸಮಯ ಬಂದಾಗ

ಅಲಕ್ಷಿಸುವಂತಹದ್ದಾಗಿರಬೇಕು:

 

ಯಾರು ನಿನಗೆ ಹೇಳಿದರು ನಿನಗೆ ನೆಲೆನಿಲ್ಲಲು ಅನುಮತಿಯಿದೆಯೆಂದು?

ಯಾರು ನಿನಗೆ ಹೇಳಿದರು ಇದು ಯಾ ಅದು ಸದಾಕಾಲ ಬಾಳುತ್ತದೆಂದು?

ಯಾರೂ ನಿನಗೆ ಹೇಳಲಿಲ್ಲವೇ ನೀನೆಂದೂ ಈ ಲೋಕದಲ್ಲಿ 

ನಿರಾತಂಕವಾಗಿ ಇರಲಾರೆಯೆಂದು?


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...