Stanislaw Baranczak graduated from the Adam Mickiewicz University in 1969 and taught Polish literature there until he was fired, for political reasons, in 1977. The Solidarity Movement brought about a thaw and he was reinstated in his former teaching position in 1980, and taught there till March 1981, when he obtained a visa and came to the US. He taught Polish Language and Literature at Harvard University. This poem is part of a series of poems he wrote during his stay in the US.
ಮೂಲ: THE NEW WORLD
ಕವಿ: ಸ್ತನಿಸ್‌ಲೊ ಬರನ್‌ಚಕ್, ಪೋಲಂಡ್ STANISLAW BARANCZAK, POLAND
Translated from the Polish into English by Stanislaw Baranczak and Reginald Gibbons
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಹೊಸ ಜಗತ್ತು
ಒಂದೇ ಸಮಸ್ಯೆ ಅದೇನೆಂದರೆ ಪಾರ್ಕಿಂಗ್-ಗೆ ಜಾಗ ಹುಡುಕುವುದು,
ಅದು ಬಿಟ್ಟರೆ, ಮಿಕ್ಕೆಲ್ಲ ವಿಷಯಗಳ ಬಗ್ಗೆ ನನಗೆ ಹೆಚ್ಚು ಕಮ್ಮಿ ಖಾತ್ರಿಯಿದೆ –
ಹೊಸ್ತಿಲ ಮೇಲೆ ಬೆಳಗ್ಗಿನ ಪೇಪರ್, ಕಟ್ಟಬೇಕಾದ ಇನ್ಕಮ್ ಟ್ಯಾಕ್ಸ್ ಮೊತ್ತ,
ನಿಜವಾಗುವ ಹವಾಮಾನ ಮುನ್ಸೂಚನೆಗಳು, ಹಾದು ಹೋಗುವ ಹೆಂಗಸರಿಂದ
ಬರುವ ಸಾಬೂನಿನ ವಾಸನೆ, ಬ್ಯಾಂಕ್ ಕ್ಲರ್ಕ್ ಒಬ್ಬನ ನಗೆ, ನಿಗಧಿತ ಸಮಯಕ್ಕೆ
ಆಗಮಿಸುವ ಸಾವು, ಕೆಲಸದಿಂದ ಮನೆಗೆ ಬಂದಾಗ, ನನ್ನ ಲೆಟರ್-ಬಾಕ್ಸಿನಲ್ಲಿ
ನನಗೆ ಬಿಲ್ಲುಗಳು, ಜಾಹೀರಾತುಗಳು, ಮತ್ತಿತರ ಕಸವಲ್ಲದೇ, ವಾರ್‌ಸಾ ನಗರದ
‘ನ್ಯೂ ವರ್ಲ‌್ಡ್ ಸ್ಡ್ರೀಟ್’ನ ಚಿತ್ರವಿರುವ ಒಂದು ಪೋಸ್ಟ್ ಕಾರ್ಡ್ ಕೂಡ
ದೊರೆಯುವ ಸಂಭವವಿದೆ; ಈ ಮಧ್ಯೆ ಬಂಧಿಸಲ್ಪಟ್ಟ
ಗೆಳೆಯನೊಬ್ಬ ಶುಭೇಚ್ಛೆ ಬರೆದು ಕಳಿಸಿದ ಪೋಸ್ಟ್ ಕಾರ್ಡ್.
ಕೇಂಬ್ರಿಜ್, ಮಾಸಚುಸೆಟ್ಸ್
1982-85
*****
No comments:
Post a Comment