Wednesday, November 17, 2021

ಗೋರಿಗಳ ಮೇಲಿನ ಹಳದಿ ಹೂವುಗಳು HUMBERTO AK'ABAL'S "THE YELLOW FLOWERS OF THE GRAVES"

ಮೂಲ: THE YELLOW FLOWERS OF THE GRAVES

ಕವಿ: HUMBERTO AK’ABAL, GUATEMALA ಉಂಬೆರ್ತೋ ಅಖ್ಅಬಾಲ್ಗ್ವಾಟೆಮಾಲಾ

Translated from original K’iche into the Spanish by Humberto Ak’Abal and from the the Spanish into English by Miguel Rivera (with Fran Quinn) 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

 

ಗೋರಿಗಳ ಮೇಲಿನ ಹಳದಿ ಹೂವುಗಳು

 

ತೋಳಗಳು ಊಳಿಡುತ್ತವೆ, ರಾತ್ರಿಯ ನುಚ್ಚುನೂರಾಗಿಸುತ್ತವೆ:

ಗಾಳಿಯೊಂದಿಗೆ ಜಗಳವಾಡುತ್ತವೆ.

“ಇದು ಅಪಶಕುನ ... ”

 

ಆ ಹಿಂದಿನ ದಿನಗಳಲ್ಲಿ

ಗೂಬೆಗಳು ಯಾವಾಗಲೋ ಒಮ್ಮೆ ಕೂಗುತ್ತಿದ್ದವು,

ಈಗ ಅವು ಹೆಚ್ಚು-ಕಮ್ಮಿ ಯಾವಾಗಲೂ ಕೂಗುತ್ತವೆ.

“ಇದು ದುರದೃಷ್ಟ ... ”

 

ಮರಣಗಾಳಿಯೊಂದು ಪರ್ವತಶಿಖರದಿಂದ ಕೆಳಗಿಳಿಯುತ್ತೆ,

ಥಂಡಿ ಗಾಳಿಯದು, ಕಡಿಯುತ್ತೆ

ರೇಬೀಸ್-ಪೀಡಿತ ನಾಯಿಯ ಹಾಗೆ ...

ಹೂವುಗಳು ಹೆದರಿ ಬಾಗುತ್ತವೆ,

ಮಧ್ಯಾಹ್ನದ ಮುಂಚೆಯೇ ಬಾಡುತ್ತವೆ.

 

ಆ ದಿನಗಳಿಗೆ ನಾವು ಹೋಗಬಲ್ಲೆವಾದರೆ

ಭೂಮಿ ಮನುಜನ ಸಂಗ

ಹಾಡುತ್ತಿದ್ದ ಆ ದಿನಗಳಿಗೆ.

 

ಈಗ ಸಸಿಗಳನ್ನು ಸಿಗಿದುಹಾಕುತ್ತಾರೆ

ಶಿಶುಗಳ ಚೀತ್ಕಾರ ಪೀಡಿಸುವುದಿಲ್ಲ 

ಯಾರನ್ನೂ, ಕರುಣವಿಲ್ಲ ಯಾರಿಗೂ:

ಆಕಾಶವು ತನ್ನ ಬಾಯಿ ತೆರೆದು, ಸಾವು

ಅಡಗಿಸಿದ ಚೀತ್ಕಾರವನ್ನು ನುಂಗುತ್ತದೆ.

 

‘ಇಂಡಿಯನ್’ರಾದ ನಮ್ಮನ್ನು ಯಾಕೆ ಪೀಡಿಸುತ್ತಾರೆ?

ನಾವು ನಿನಗೇನ ಮಾಡಿದೆವು ಗ್ವಾಟೆಮಾಲಾ?

ಯಾಕೀ ದ್ವೇಶ? ಯಾಕೀ ರಕ್ತದ ದಾಹ?

 

ಮೃತ್ಯುವಿಗೆ ನಾವು ಯಾವ ಋಣವೂ 

ಸಂದಾಯ ಮಾಡಬೇಕಾಗಿಲ್ಲ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...