ಮೂಲ: THE POOL
ಕವಿ: HUMBERTO AK’ABAL, GUATEMALA ಉಂಬೆರ್ತೋ ಅಖ್’ಅಬಾಲ್, ಗ್ವಾಟೆಮಾಲಾ
Translated from the Spanish into English by Earl Shorris & Sylvia Sasson Shorris
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಕೊಳ
ಕೊಳದಲ್ಲಿ ಅನೇಕ
ನಕ್ಷತ್ರಗಳಿದ್ದವು;
ಅವುಗಳನ್ನು ಹೊರತೆಗೆಯೆಂದು
ನನ್ನಪ್ಪನ ಕೇಳಿದೆ
ಅವನು ನೀರನ್ನು
ಹನಿ ಹನಿಯಾಗಿ ತೆಗೆದು ನನ್ನ
ಕೈಗಳಲ್ಲಿ ಹಾಕಿದ
ಬೆಳಗ್ಗೆದ್ದು
ನನ್ನಪ್ಪ ನಿಜವಾಗಿಯೂ ಅವುಗಳನ್ನು
ತೆಗೆದು ಹಾಕಿದನೇ ಎಂದು ನೋಡಬಯಸಿದೆ
ಹೌದು, ಅದು ನಿಜವೇ,
ಕೊಳದಲ್ಲಿ ಉಳಿದದ್ದು
ಆಕಾಶವೊಂದೇ
No comments:
Post a Comment