Monday, July 20, 2020

ANTHAGALU ಅಂತಗಳು -- Derek Walcott's "Endings"

ಅಂತಗಳು

ಇಂಗ್ಲಿಷ್ ಮೂಲ:     Endings
ಕವಿ:                     ಡೆರಿಕ್ ವಾಲ್ಕಾಟ್ (Derek Walcott)
ಕನ್ನಡ ಭಾಷಾಂತರ:  ಎಸ್ ಜಯಶ್ರೀನಿವಾಸ ರಾವ್ 

ವಸ್ತುಗಳು ಸ್ಫೊಟಿಸುವುದಿಲ್ಲ
ಅವು ಅಳಿಯುತ್ತವೆ, ಅಳಿಸಿಹೋಗುತ್ತವೆ,

ಬೆಳಕು ದೇಹದಿಂದ ಕುಂದಿಹೋದ ಹಾಗೆ
ಹೊಯ್ಗೆಯಲ್ಲಿ ನೊರೆ ತಟ್ಟನೆ ಸೋರಿಹೊದ ಹಾಗೆ,

ಪ್ರೇಮದ ಮಿಂಚಿನ ಹೋಳಪು ಕೂಡ
ಗುಡುಗುಡುಗುತ್ತ ಮಡಿಯುವುದಿಲ್ಲ,

ಅದು ಸಾಯುತ್ತೆ ಹೂವುಗಳ 
ಬಾಡುವ ದನಿಯ ಜತೆ 

ಬೆವರುವ ನೊರೆಗಲ್ಲಿನಿಂದ ಚರ್ಮ ಒರೆಸಿಹೋದ ಹಾಗೆ,
ಎಲ್ಲವೂ ಇದನ್ನು ರೂಪಿಸುತ್ತದೆ

ಕೊನೇಗೆ ನಮ್ಮಲಿ ಉಳಿಯುವುದು
ಬೆಯ್ಠೋವನ್ ನ ತಲೆಯ ಸುತ್ತ ಆವರಿಸಿದ ಮೌನ. 

*****

Endings 

Things do not explode
they fail, they fade,

as sunlight fades from the flesh
as the foam drains quick in the sand,

even love’s lightning flash
has no thunderous end,

it dies with the sound
of flowers fading like the flesh

from sweating pumice stone,
everything shapes this

till we are left
with the silence that surrounds Beethoven’s head.


*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...