Monday, July 20, 2020

NANNA KONE ನನ್ನ ಕೋಣೆ -- Patrick Kavanagh's "My Room"


ನನ್ನ ಕೋಣೆ

ಇಂಗ್ಲಿಷ್ ಮೂಲ: My Room (1933)
ಕವಿ: ಪ್ಯಾಟ್ರಿಕ್ ಕವನಾ (Patrick Kavanagh)
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಹತ್ತು by ಹನ್ನೆರಡು
ಹಾಗೂ ತಗ್ಗಿನ ಸೂರು,
ಪಕ್ಕದ ಗೋಡೆ ಬಳಿ ನಿಂತ್ಕೊಂಡ್ರೆ
ನನ್ನ ತಲೆಗೆ ಕೆಳ್ಸುತ್ತೆ ದೂರು.

ಐದು ಪವಿತ್ರ ಪಟಗಳು
ಗೋಡೆಗಳ ಮೆಲೆ ತೊಂಗಿವೆ – 
ಕನ್ಯೆ ಮತ್ತು ಶಿಶು,
ಪದುವಾದ ಸಂತ ಅಂತೊಣಿ,
ನಮ್ಮವನೇ ಆದ ಸಂತ ಪ್ಯಾಟ್ರಿಕ್,
ಪೋಪ್ ಹದಿಮೂರನೆಯ ಲಿಯೋ,
ಹಾಗೂ ಪುಟ್ಟ ಪುಷ್ಪ, ಸಂತ ತೆರೆಜ಼್.

ನನ್ನ ಮಂಚ ಮಧ್ಯದಲ್ಲಿ,
ನನಗದು ಏನೇನೋ –
ಉಣ್ಣುವ ಮೇಜು,
ಬರೆಯುವ ಮೇಜು,
ಒರಗುವ ಕೌಚು,
ಹಾಗೂ ಶಯನ ಸೌಧ.

ನನ್ನ ಕೋಣೆ ಒಂದು ಧೂಳುಹಿಡಿದ ಅಟ್ಟ,
ಆದರೆ ಅದರ ಸಣ್ಣ ಕಿಂಡಿಯು 
ನಕ್ಷತ್ರಗಳನ್ನು ಒಳ ಬಿಡುತ್ತದೆ. 
  
***** 


My Room

10 by 12
And a low roof,
If I stand by the side-wall
My head gets the reproof.

Five holy pictures
Hang on the walls – 
The Virgin and Child,
St Anthony of Padua,
St Patrick our own,
Leo XIII
And the Little Flower.

My bed in the centre,
So many things to me – 
A dining table,
A writing desk,
A couch,
And a slumber palace.

My room is a musty attic,
But its little window
Lets in the stars.

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...