Monday, July 20, 2020

MARURIYA BEEDIYALLONDU HOSTEL ಮರೂರಿಯ ಬೀದಿಯಲ್ಲೊಂದು ಹಾಸ್ಟೆಲ್ -- Pablo Neruda's "La pensión de la Calle Maruri"

ಮರೂರಿಯ ಬೀದಿಯಲ್ಲೊಂದು ಹಾಸ್ಟೆಲ್ 

ಮೂಲ: La pensión de la Calle Maruri (ಸ್ಪ್ಯಾನಿಷ್)
ಕವಿ: ಪಾಬ್ಲೊ ನೆರೂದ Pablo Neruda 

ಇಂಗ್ಲಿಷ್ ಗೆ: ಅಲಿಸ್ಟರ್ ರೀಡ್ Alastair Reid
The Rooming House on the Calle Maruri
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಮರೂರಿಯಲ್ಲಿ ಒಂದು ಬೀದಿ.
ಅಲ್ಲಿನ ಮನೆಗಳು ಒಂದನ್ನೊಂದು ನೋಡುವುದಿಲ್ಲ
ಒಂದಕ್ಕೊಂದು ಹಿಡಿಸುವುದಿಲ್ಲ ಕೂಡ.
ಆದರೂ, ಅಂಟಿಕೊಂಡಿವೆ,
ಗೋಡೆಗೆಗೋಡೆ ತಾಕಿಕೋಂಡು, ಆದರೆ
ಅವುಗಳ ಕಿಟಿಕಿಗಳು 
ಬೀದಿಯನ್ನು ನೊಡುವುದಿಲ್ಲ, ಮಾತಾಡುವುದಿಲ್ಲ.
ಅವೇ ಮೌನ.

ಒಂದು ಹಾಳೆ ಹಾರುತಿದೆ ಛಳಿಗಾಲದ ಮರದ 
ಮಸಿದ ಎಲೆಯಂತೆ.

ಈ ಮಧ್ಯಾಹ್ನವು ಒಂದು ಸೂರ್ಯಾಸ್ತವನ್ನು ಹೊತ್ತಿಸುತ್ತದೆ.  ಗೊಂದಲಗೊಂಡ
ಆಕಾಶವು ಅಡಗಿಕೊಂಡು ಪ್ರತಿ ಬೆಂಕಿ ಹಬ್ಬಿಸುತ್ತದೆ.  

ಕರಿ ಮಂಜು ಮಹಡಿಗಳ ಕೈಸಾಲೆಗಳಿಗೆ ಧಾಳಿ ಹೂಡಿವೆ.

ನಾ ನನ್ನ ಪುಸ್ತಕ ತೆರೆಯುತ್ತೇನೆ.  ನಾ ಬರೆಯುತ್ತೇನೆ
ಒಂದು ಗಣಿಯ ಸುರಂಗದಲ್ಲಿದ್ದವನಂತೆ, 
ಅದೊಂದು ತೊರೆದ ತೇವಭರಿತ ಕೋಣೆ.   
ನನಗೆ ಗೊತ್ತು ಈಗ ಯಾರೂ ಇಲ್ಲಾಂತ,
ಮನೆಯಲ್ಲಿ, ಬೀದಿಯಲ್ಲಿ, ನಿಷ್ಠುರ ನಗರದಲ್ಲಿ.
ನಾನೊಬ್ಬ ಬಂದಿ, ಬಾಗಿಲು ತೆರೆದುಬಿದ್ದಿದೆ,
ಲೋಕವೇ ತೆರೆದುಬಿದ್ದಿದೆ.
ಮುಸ್ಸಂಜೆಯಲ್ಲಿ ಮರೆತ ಒಬ್ಬ ಉತ್ಕಂಠ ವಿದ್ಯಾರ್ಥಿ ನಾನು,
ನಾ ಹತ್ತುತ್ತೇನೆ ಅಕ್ಷರಗಳ ಸೂಪಿಗಾಗಿ
ಆಮೇಲೆ ಇಳಿಯುತ್ತೇನೆ ನನ್ನ ಹಾಸಿಗೆಗೆ, ಮರುದಿನಕ್ಕೆ.

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...