Tuesday, November 24, 2020

ಅಮ್ಮಾ AMMA - GOPAL HONNALGERE'S "AMMA"

ಮೂಲ: Amma 

ಕವಿ: ಗೋಪಾಲ ಹೊನ್ನಲಗೆರೆ Gopal Honnalgere

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಅಮ್ಮಾ

ನಮ್ಮ ಕೀಲುಗಳು ನೊಂದಾಗ

ಹಾಸಿಗೆಯಲ್ಲಿ ಮುದುಡಿಕೊಂಡು 

ಅಮ್ಮಾ ... ಅಮ್ಮಾ... ಅಂತ ನರಳುತ್ತೇವೆ

ಆಗ ಬೇರೆಲ್ಲಿಂದಲೋ ಕೇಳಿಬರುತ್ತದೆ

ನಮ್ಮಮ್ಮಂದಿರೂ ನರಳುವ ಒರಲ 

ಅಮ್ಮಾ ... ಅಮ್ಮಾ ... 

ಹಾಗೆಯೇ ನಮ್ಮಜ್ಜಿಯಂದಿರ ಒರಲು ಕೂಡ,

ಅವರಿನ್ನೂ ಬದುಕಿರುವುದಾಗಿದ್ದರೆ.


ನಮ್ಮೆಲ್ಲರ ಮುತ್ತಜ್ಜಿಯ ಅಜ್ಜಿ 

ಅವಳೊಬ್ಬಳೇ 

ಅವಳೂ ನರಳುತ್ತಿದ್ದಾಳೆ

ಅದಕ್ಕೇ ಸೀತೆ

ಮಣ್ಣಲ್ಲಿ ಒಂದಾದಳು

ಇನ್ನು ಇದಕ್ಕಿಂತ ಹೆಚ್ಚು ನೋವು

ತಡೆಯಲಾರದೇ.

*****



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...