ಮೂಲ: SOME DAY, YEARS FROM NOW
ಕವಿ: ಸ್ತನಿಸ್‌ಲೊ ಬರನ್‌ಚಕ್, ಪೋಲಂಡ್ STANISLAW BARANCZAK, POLAND
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
ಒಂದಲ್ಲ ಒಂದು ದಿನ, ವರುಷಗಳ ನಂತರವಾದರೂ
“ಒಂದಲ್ಲ ಒಂದು ದಿನ, ವರುಷಗಳ ನಂತರವಾದರೂ, ನಾವು ಸರಿಯೆಂದು ಇತಿಹಾಸ ಸಾಬೀತುಪಡಿಸುತ್ತೆ.”
ಆದರೆ, ಇತಿಹಾಸ ಏನನ್ನೂ ಸಾಬೀತುಪಡಿಸಲ್ಲ, ಏನನ್ನೂ ವಾದಿಸಲ್ಲ,
ಏನನ್ನೂ ಒಪ್ಪಿಕೊಳ್ಳಲ್ಲ, ಇತಿಹಾಸ ಮತ್ತೊಂದು ಮಾತನ್ನಲ್ಲ,
ಇತಿಹಾಸ ಐದಡಿ ಮಣ್ಣು-ಕಸದಡಿಯಲ್ಲಿ ಬಿದ್ದಿದೆ,
ಇತಿಹಾಸದ ಚರ್ಮದಡಿಯಲ್ಲಿ ನೆತ್ತರು ಗಾಢವಾಗಿ ನೀಲಿಗಟ್ಟಿದೆ,
ಮೆಲ್ಲ ಮೆಲ್ಲನೆ ಕೆಳಕ್ಕೆ ಇಳಿಯುತ್ತೆ, ಗುರುತ್ವಾಕರ್ಷಣೆಯ ನಿಯಮಕ್ಕೆ ಅನುವಾಗಿ,
ಇತಿಹಾಸದ ಕಣ್ಣಗುಳಿಗಳು ಖಾಲಿಯಾಗಿವೆ, ಮತ್ತದರ ಹೊಡೆದು ಬೀಳಿಸಿದ ಹಲ್ಲುಗಳ ಮುಂದಿರುವ
ಸದಾ ಬಿಗಿದಿರುವ, ಶಾಶ್ವತವಾಗಿ ಸದ್ದಡಗಿಸಲ್ಪಟ್ಟ, ಯಾವತ್ತೂ ಹದಿನೆಂಟರ ತುಟಿಗಳು ಕದಲುತ್ತಿಲ್ಲ.
*****
No comments:
Post a Comment