Thursday, November 26, 2020

ಕವಿತಾನುವಾದದ ಬಗ್ಗೆ KAVITAANUVAADADA BAGGE - ZBIGNIEW HERBERT'S 'ON TRANSLATING POETRY'

ಕವಿ: ಜ಼್ಬಿಗ್ನಿಎಫ಼್ ಹೆರ್ಬೆರ್ತ್ Zbigniew Herbert, Poland

ಮೂಲ: On Translating Poetry; translated from the original Polish by Alissa Valles

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಕವಿತಾನುವಾದದ ಬಗ್ಗೆ

ಒಂದು ಅಡ್ನಾಡಿ ಹೆಜ್ಜೇನಿನ ತರ  

ಅಂವ ಒಂದು ಹೂವಿನ ಮೇಲೆ ಇಳಿದ

ನಾಜೂಕಾದ ಕಾಂಡವನ್ನು ಬಗ್ಗಿಸುತ್ತಾ


ಹೂದಳಗಳ ಸಾಲುಗಳನ್ನು

ತಳ್ಳಿಕೊಂಡು ಮುನ್ನುಗ್ಗಿದ

ನಿಘಂಟಿನ ಪುಟಗಳನ್ನು 

ಮಗುಚುವ ಹಾಗೆ


ಹೋಗಬೇಕು ಅವನಿಗಲ್ಲಿ

ಕಂಪು ಇಂಪು ಇರುವಲ್ಲಿ

ಅವನಿಗೆ ನೆಗಡಿಯಾಗಿದ್ದರೂ

ನಾಲಿಗೆ ರುಚಿ ಇಲ್ಲದಿದ್ದರೂ

ಅಂವ ನುಗ್ಗುತ್ತಲೇ ಇದ್ದ

ಹಳದಿ ಶಲಾಕೆಗೆ ತಲೆ 

ಗುದ್ದಿಕೊಳ್ಳುವವರೆಗೂ


ಅಷ್ಟೇ, ಅಲ್ಲಿವರೆಗೆ ಮಾತ್ರ ಹೋಗಬಲ್ಲ

ಬಹಳ ಕಷ್ಟ

ಪುಷ್ಪಪಾತ್ರವನ್ನು ಭೇಧಿಸಿ ಮುನ್ನುಗ್ಗಲು

ಬೇರೊಳಗೆ ಸೇರಲು


ಎಂದೇ, ಹೆಜ್ಜೇನು ಮತ್ತೆ ಮೇಲಕ್ಕೆ ಹಾರುತ್ತೆ

ಜೋರಾಗಿ ಝೇಂಕರಿಸುತ್ತಾ

ಡೌಲಿನಿಂದ ಹೊರಮೂಡುತ್ತಾನೆ


ನಾನಲ್ಲಿ ಒಳಗೆ ಹೋಗಿದ್ದೆ


ಅವನ ಮಾತನ್ನು ನಂಬದವರಿದ್ದರೆ

ಅವರು

ಅವನ ಮೂಗನ್ನು ನೋಡಬಹುದು

ಪರಾಗದ ಹಳದಿ ಹರಡಿದೆ

*****




No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...