Sunday, November 29, 2020

ಕೆಲ ಮಂದಿ ಇಷ್ಟ ಪಡುತ್ತಾರೆ ಕಾವ್ಯ KELA MANDI ISHTA PADUTTAARE KAVYA - WISLAWA SZYMBORSKA'S "SOME PEOPLE LIKE POETRY"

 ಮೂಲ: Some People Like Poetry

ಕವಿ: ವೀಸ್ವಾವ ಶಿಂಬೋರ್ಸ್ಕ Wisława Szymborska, Poland

ಇಂಗ್ಲಿಷ್ ಗೆ: Stanizław Barańczak and Clare Cavanagh 

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಕೆಲ ಮಂದಿ ಇಷ್ಟ ಪಡುತ್ತಾರೆ ಕಾವ್ಯ

ಕೆಲ ಮಂದಿ -- 

ಅಂದ್ರೆ ಎಲ್ಲ್ರೂ ಅಂತಲ್ಲ,

ಹೆಚ್ಚಿನವರೂಂತ ಕೂಡ ಅಲ್ಲ, ಕೆಲವರು ಮಾತ್ರ.

ಶಾಲೆಯನ್ನು ಲೆಕ್ಕಕ್ಕೆ ತೊಗೊಳ್ಳದೇ, ಅಲ್ಲಿ ಪಡಲೇ ಬೇಕು,

ಮತ್ತು ಸ್ವತ್ಃ ಕವಿಗಳನ್ನು,

ಕೊನೆಗೆ ಸಾವಿರದಲ್ಲಿ ಇಬ್ಬರು ಸಿಗಬಹುದು ಅಂತ ಅಂದಾಜು.


ಇಷ್ಟ --

ಅಂದ್ರೆ, ನೀವು ಚಿಕನ್ ನೂಡ್‍ಲ್ ಸೂಪ್ ಇಷ್ಟಪಡಬಹುದು,

ಅಥವಾ ಹೊಗಳಿಕೆಗಳನ್ನು, ಅಥವಾ ನೀಲಿ ಬಣ್ಣ,

ನಿಮ್ಮ ಹಳೇ ಮಫ಼್ಲರ್,

ನಿಮ್ಮದೇ ದಾರಿ,

ನಾಯಿಯನ್ನು ಮುದ್ದು ಮಾಡುವುದು.


ಕಾವ್ಯ -- 

ಆದರೆ ಕಾವ್ಯ ಅಂದ್ರೆ ಕೊನೆಗೆ ಏನದು?

ಒಂದಕ್ಕಿಂತ ಹೆಚ್ಚು ಅಸ್ಥಿರ ಉತ್ತರಗಳು

ಹೊರ ಬಿದ್ದಿವೆ ಆ ಪ್ರಶ್ಣೆ ಮೊದಲು ತಲೆ ಎತ್ತಿದಾಗಿನಿಂದ.

ಆದರೆ ನನಗೆ ಮಾತ್ರ ಗೊತ್ತಾಗುತ್ತಲೇ ಇಲ್ಲದಾಗಿದೆ,

ಹಿಡಿದುಕೊಂಡಿರುವೆ ನಾನು ಅದನ್ನೇ ಗಟ್ಟಿಯಾಗಿ 

ಬಿಡುಗಡೆಯ ಕಟಾಂಜನದ ಹಾಗೆ.

*****




No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...