Sunday, November 8, 2020

TWO SHORT POEMS BY ANNA AKHMATOVA - ಆನ್ನಾ ಅಖ್ಮಾತೊವಾ - ಎರಡು ಕವನಗಳು

Dear friends ... my Kannada translation of two short poems by the Russian poet, Anna Akhmatova.  These poems have no given titles.  They were translated into English by Robert Chandler.


ರಷಿಯನ್ ಮೂಲ: ಆನ್ನಾ ಅಖ್ಮಾತೊವಾ Anna Akhmatova

ರಷಿಯನ್ ನಿಂದ ಇಂಗ್ಲೀಷಿಗೆ: ರಾಬಾರ್ಟ್ ಚಾಂಡ್ಲರ್ Robert Chandler

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


1

ತಲೆದಿಂಬನ್ನು ಮಗುಚಿದಾಗ ಕೂಡ ಅಷ್ಟೇ ಬಿಸಿಯಾಗಿತ್ತು.  

ಎರಡನೆಯ ಮೊಂಬತ್ತಿಯೂ ಈಗ ಮಿಣುಕುತ್ತಿದೆ.

ಕಾಗೆಗಳು ಎಂದೂ ಇಲ್ಲದಂತೆ ಗಟ್ಟಿಯಾಗಿ ಕಿರುಚುತ್ತಿದ್ದಾವೆ.

ಒಂದು ಹನಿ ನಿದ್ದೆಯಿಲ್ಲ ... ನಿದ್ದೆಯ ಬಗ್ಗೆ ಯೋಚಿಸಲೂ 

ಈಗ ಹೊತ್ತು ಮೀರಿ ಹೋಗಿದೆ. 

ಬಿಳುಪು, ಕಣ್ಣು ತೆರೆಯಲಾರದಷ್ಟು ಬಿಳುಪು -- 

ಒಂದು ತೆರೆ, ಬಿಳಿಯ ಜನ್ನಲಿನ ಮೇಲೆ.

Good morning!

(೧೯೦೯) 


2

ಹುಷಾರು, ಬೆಕ್ಕೇ, ಆ ಕುರ್ಚಿಗೆ ಒಂದು

ಗೂಬೆಯ ಚಿತ್ರವ ಬುಟ್ಟೆ ಹಾಕಲಾಗಿದೆ.

ಬೂದು ಬೆಕ್ಕೇ, ಗುರುಗುಟ್ಟಬೇಡ -- 

ಅಜ್ಜ ಕೇಳಿಸಕೋತಾನೆ.

ಮೊಂಬತ್ತಿ ಆರಿ ಹೋಗಿದೆ;

ಮೆಟ್ಟಲುಗಳ ಮೇಲೆ ಇಲಿಗಳಿವೆ.  

ನನಗೆ ಆ ಗೂಬೆಯೆಂದರೆ ಭಯ.

ಅಜ್ಜಿ, ಅದನ್ನು ಅಲ್ಲಿ ಯಾರಿಟ್ಟರು?

(೧೯೧೧)




No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...