Sunday, November 8, 2020

BELAGINA HAKKIGALU ಬೆಳಗಿನ ಹಕ್ಕಿಗಳು - TOMAS TRANSTROMER'S "MORNING BIRDS"

ಮೂಲ: Morning Birds 

ಕವಿ: ಟೊಮಾಸ್ ಟ್ರಾನ್ಸಟ್ರೊಮರ್, ಸ್ವೀಡಿಷ್ ಕವಿ Tomas Transtromer, Sweden

ಇಂಗ್ಲಿಷ್ ಗೆ: ರಾಬಿನ್ ಫ಼ುಲ್ಟನ್ Robin Fulton 

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

*****

ಬೆಳಗಿನ ಹಕ್ಕಿಗಳು

ನಾನು ಕಾರನ್ನು ಎಬ್ಬಿಸಿದೆ

ಅದರ ಮುಂಗಾಜಿನ ಮೇಲೆ ಪರಾಗದ ಹೊದಿಕೆಯಿತ್ತು.

ನಾನು ಕೂಲಿಂಗ್ ಗ್ಲಾಸ್ ಏರಿಸಿಕೊಂಡೆ.

ಹಕ್ಕಿಯುಲಿ ದಟ್ಟವಾಯಿತು.


ಅಷ್ಟರಲ್ಲಿ ಇನ್ನೊಬಾಂವ 

ಅಲ್ಲಿ ತುಕ್ಕು ಹಿಡಿದು ಕೆಂಪಾಗಿ

ಬಿಸಿಲಿನಲ್ಲಿ ಮಿನುಗುತ್ತ ನಿಂತಿರುವ 

ದೊಡ್ಡ ಗೂಡ್ಸ್ ಬಂಡಿಯ ಪಕ್ಕದಲ್ಲಿರುವ 

ರೈಲ್ವೇ ಸ್ಟೇಷನ್ ನಲ್ಲಿ ಪೇಪರ್ ಕೊಳ್ಳುತ್ತಾನೆ.


ಇಲ್ಲೆಲ್ಲಿಯೂ ಖಾಲೀ ಜಾಗವಿಲ್ಲ.


ಈ ಬೆಚ್ಚನ ವಸಂತದ ಮಧ್ಯೆ ತಣ್ಣಗಿನ ಕಾರಿಡಾರೊಂದರಿಂದ

ಯಾರೊ ಓಡಿ ಬಂದು

ಹೇಗೆ ಮೇಲೆ ಹೆಡ್-ಆಫ಼ೀಸಿನಲ್ಲಿ ತನ್ನನ್ನು

ನಿಂದಿಸಿದರು ಎಂದು ಹೇಳುತ್ತಾನೆ.


ಆ ಪ್ರಕೃತಿಚಿತ್ರದ ಹಿಂಬಾಗಿಲಿನಿಂದ

ಕಪ್ಪು ಬಿಳಿ ಬಣ್ಣದ 

ಮ್ಯಾಗಪೈ ಹಕ್ಕಿಯೊಂದು ಬರುತ್ತದೆ.

ಕಪ್ಹಕ್ಕಿಯೊಂದು ಸರಸರ ಆಚೀಚೆ ಹಾರಾಡುತ್ತಿದೆ,

ಹಗ್ಗದಲ್ಲಿ ಒಣಗುತ್ತಿರುವ ಬಿಳೀ ಬಟ್ಟೆಗಳ ಬಿಟ್ಟು

ಉಳಿದವೆಲ್ಲ ಇದ್ದಲಕಡ್ಡಿಯಿಂದ ರಚಿಸಿದ ರೇಖಾಚಿತ್ರವಾಗುತ್ತದೆ:

ಪಾಲೆಸ್ಟ್ರೀನನ ಬಹುಧ್ವನೀಯ ಮೇಳದ ಹಾಗೆ.


ಇಲ್ಲೆಲ್ಲಿಯೂ ಖಾಲೀ ಜಾಗವಿಲ್ಲ.


ನಾನು ಸ್ವತಃ ಕುಗ್ಗುತ್ತಿರುವಾಗ

ನನ್ನ ಕವನ ಬೆಳೆಯುತ್ತಿರುವ ಪರಿ ನೋಡಿ ಅದ್ಭುತವೆನಿಸುತ್ತದೆ.

ಅದು ಬೆಳೆಯುತ್ತದೆ, ನನ್ನ ಸ್ಥಾನ ವಹಿಸಿಕೊಳ್ಳುತ್ತದೆ.

ನನ್ನನ್ನು ಪಕ್ಕಕ್ಕೆ ದೂಡುತ್ತದೆ.

ನನ್ನನ್ನು ಗೂಡಿನಿಂದ ಹೊರಗೆಸೆಯುತ್ತದೆ.

ಕವನ ತಯಾರಗುತ್ತದೆ.

*****






No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...