Saturday, December 26, 2020

ಕಲ್ಲಂಗಡಿ ಹಣ್ಣುಗಳು-4 - KALLANGADI HANNUGALU - ARUN KOLATKAR'S 'WATERMELONS - 4'

ಇಂಗ್ಲಿಷ್ ಮೂಲ: Watermelons - 4 

ಕವಿ: ಅರುಣ್ ಕೊಲಟ್‌ಕರ್ Arun Kolatkar

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ 


ಕಲ್ಲಂಗಡಿ ಹಣ್ಣುಗಳು - 4


ನನ್ನ ಹೃದಯವು ಜಿಗಿಯುತ್ತದೆ ಎತ್ತರಕೆ

ಹಾದು ಹೋಗುವ ಕಲ್ಲಂಗಡಿಯ ಗಾಡಿಯ

ನಾ ಕಂಡಾಗ.


ನನ್ನ ಕೈಯಿಂದ ಕೋಲು ಬೀಳುತ್ತದೆ.

ಸೈಕಲಿನ ಚಕ್ರ ಗಿರಕಿ ಹೊಡೆದು  

ಥೊಪ್ಪೆಂದು ನೆಲಕ್ಕೆ ಬೀಳುತ್ತದೆ,


ಮರೆತಾಗೋಗಿದೆ ಆಗಲೇ.

"ಕಲ್ಲಂಗಡಿ ಹಣ್ಣೂಊ...," ಕೇಳಿಸಿತು ಕೂಗು,

ಯಾರೂ ಹಾಗೆ ಕೂಗಲಿಲ್ಲ, ನಿಜ ಹೇಳ್‌ಬೇಕೆಂದ್ರೆ.


ನನ್ನ ಅಜ್ಜಿಗಾಗಿ ಆಚೀಚೆ ನೋಡುತ್ತೇನೆ,

ಎಲ್ಲಿದ್ದಾಳೆ ಅವಳು?

ಈ ಶುಗರ್‌ಬೇಬೀಸ್ ಅವಳಿಗೆಷ್ಟು ಇಷ್ಟಾಂದ್ರೆ...


ನನ್ನಮ್ಮ,

ಅವಳು ಆಗಲೇ ಅಲ್ಲಿದ್ದಳೆ,

ಗಾಡಿಯ ಜೊತೆ ನಡೆಯುತ್ತಿದ್ದಾಳೆ.


ಚೌಕಾಸಿ ಮಾಡುತ್ತಿದ್ದಾಳೆ,

ಅದರಲ್ಲವಳು ನಿಸ್ಸೀಮಳು,

ಗಾಡಿ ನಿಲ್ಲುತ್ತದೆ.


ಸರಿಯಾದ ವೇಳೆಗೆ ನಾನಲ್ಲಿ ತಲುಪುವೆ

ನೊಡಲೊಂದು ಚಾಕು ಇರಿತವ

ಕಂಡೆನೊಂದು ಸೂರ್ಯಸ್ಫೋಟವ.


ನನ್ನ ಗಂಟಲು

ಒಣಗಿ ಹೋಗುತ್ತದೆ. 

*****



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...