Wednesday, December 30, 2020

ರಾತ್ರಿಪುಸ್ತಕದ ಒಂದು ಪುಟ - RAATRIPUSTAKADA ONDU PUTA - TOMAS TRANSTROMER'S 'A PAGE OF THE NIGHTBOOK'

ಮೂಲ: A Page of the Nightbook 

ಕವಿ: ಟೊಮಾಸ್ ಟ್ರಾನ್ಸಟ್ರೊಮರ್, ಸ್ವೀಡಿಷ್ ಕವಿ Tomas Transtromer, Sweden

ಇಂಗ್ಲಿಷ್ ಗೆ: ರಾಬಿನ್ ಫ಼ುಲ್ಟನ್ Robin Fulton 

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ರಾತ್ರಿಪುಸ್ತಕದ ಒಂದು ಪುಟ


ಮೇ ತಿಂಗಳಿನ ಒಂದು ರಾತ್ರಿ ನಾನು ದಡಕ್ಕಿಳಿದೆ

ತಣ್ಣನೆಯ ಚಂದ್ರಕಾಂತಿಯಲ್ಲಿ,

ಹುಲ್ಲು ಹಾಗೂ ಹೂಗಳು ಬೂದುಬಣ್ಣದ್ದಿದ್ದರೂ

ಹಸಿರಿನ ಕಂಪಿತ್ತು ಅಲ್ಲಿ.


ಸರಿಯುತ್ತೇರಿದೆ ದಿಣ್ಣೆಯ ಮೇಲೆ

ಆ ವರ್ಣದೃಷ್ಟಿಮಂದ ರಾತ್ರಿಯಲಿ,

ಅಲ್ಲಿದ್ದ ಬಿಳಿ ಬಂಡೆಗಳಾಗ

ಚಂದ್ರನಿಗೆ ಸನ್ನೆ ಮಾಡುತ್ತಿದ್ದವು.


ಕೆಲವೇ ನಿಮಿಷಗಳಷ್ಟು ಉದ್ದದ  

ಅವಧಿಯಾಗಿತ್ತು,

ಐವತ್ತೆಂಟು ವರುಷಗಳಷ್ಟು ಅಗಲ.


ನನ್ನ ಹಿಂದೆ 

ಸೀಸದಂತೆ ಹೊಳೆವ ನೀರಿನಾಚೆ ಇದೆ

ಇದರಿನ್ನೊಂದು ದಡ

ಮತ್ತಲ್ಲಿದ್ದರು ಆಳುವವರು.


ಜನರಿಗಲ್ಲಿ ಭವಿಷ್ಯವಿದೆ

ಮುಖದ ಬದಲು.

*****



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...