Friday, January 1, 2021

ಮುನ್ನುಡಿ-ಕಾವ್ಯದ ಬಗ್ಗೆ ಒಂದು ಟ್ರೀಟಿಸ್ - MUNNUDI-KAAVYADA BAGGE ONDU TREATISE - CZESLAW MILOSZ'S 'PREFACE-A TREATISE ON POETRY'

ಮೂಲ: Preface - A Treatise on Poetry

ಕವಿ: Czesław Miłosz ಚೆಸ್‌ವಾಫ಼್ ಮಿವಾಶ್ Polish-American

Translated from the original Polish by Czesław Miłosz and Robert Hass

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಮುನ್ನುಡಿ - ಕಾವ್ಯದ ಬಗ್ಗೆ ಒಂದು ಟ್ರೀಟಿಸ್


ಮೊದಲಿಗೆ, ಮಾತೃಭಾಷೆಯಲ್ಲಿ ನೇರ ಮಾತು.

ಅದನ್ನು ಕೇಳುತ್ತಿದ್ದಹಾಗೆ ನಿನಗೆ ಕಾಣಿಸಬೇಕು

ಬೇಸಿಗೆಯ ಮಿಂಚಿನ ಹೊಳಪಿನಲ್ಲಿ ಕಂಡಂತೆ

ಸೇಬಿನ ಮರ, ಒಂದು ನದಿ, ಒಂದು ದಾರಿಯ ತಿರುವು.


ಮತ್ತದರಲ್ಲಿರಬೇಕು ರೂಪಕಗಳಲ್ಲದೇ ಮತ್ತಿನ್ನೂ.

ತಾನಲಯ ಆಸೆತೋರಿಸಿ ಇದನ್ನು ಜನ್ಮಿಸಿದೆ,

ಇಂಪು, ಒಂದು ಹಗಲುಗನಸು.  ಅರಕ್ಷಿತವಾಗಿತ್ತು,

ಅದನ್ನುಪೇಕ್ಷಿಸಿ ಮುನ್ನಡೆಯಿತು ಈ ಒಣ ಜಾಣ ಜಗತ್ತು.


ನೀನು ಅವಾಗಾವಾಗ ನಿನ್ನನ್ನೇ ಕೇಳುವೆ ನಿನಗೇಕೆ ನಾಚಿಕೆಯಾಗುತ್ತೆ ನೀನು ಪದ್ಯ ಪುಸ್ತಕವನ್ನು ಮಗುಚಿದಾಗೆಲ್ಲ.

ಯಾಕೋ, ನೀನರಿಯಲಾರದ ಕಾರಣಗಳಿಂದಾಗಿ, ಕವಿ ನಿನ್ನ ಪ್ರಕೃತಿಯ ನಿಕೃಷ್ಟ ಮುಖವನ್ನು ಉದ್ದೇಶಿಸಿದ ಹಾಗೆ,

ವಿಚಾರವನ್ನು ಬದಿಗೆ ತಳ್ಳಿ, ಚಿಂತನೆಗೆ ಮೋಸಮಾಡಿ.


ವಿಡಂಬನೆ, ಮಂಗಚೇಷ್ಟೆ, ಹಾಸ್ಯಚಟಾಕಿಗಳ ಒಗ್ಗರಣೆ ಕಲಿಸಿದ 

ಮೇಲೂ ಕಾವ್ಯಕ್ಕೆ ಹೇಗೆ ಮುದನೀಡಬೇಕೆಂದು ಗೊತ್ತಿದೆ.

ಆಗ ಅದರ ಮೇಲ್ಮೆಯನ್ನು ಹೆಚ್ಚು ಮೆಚ್ಚುತ್ತಾರೆ.

ಆದರೆ ಗಂಭೀರ ಕಾಳಗಗಳು, ಜೀವದ ಪ್ರಶ್ನೆ ಬಂದಾಗ,

ಗದ್ಯದ ಮೈದಾನದಲ್ಲೇ ನಡೆಯುತ್ತದೆ.  ಹೀಗಿರಲಿಲ್ಲ ಹಿಂದೆ.


ನನ್ನ ಬೇಸರ ಮಾತ್ರ ಇಂದಿಗೂ ಹೇಳಲಸಾಧ್ಯವಾದದ್ದು.

ಕಾದಂಬರಿಗಳ ಪ್ರಬಂಧಗಳ ಉಪಯೋಗವಿದೆ, ಆದರೆ ಉಳಿಯಲಾರವು.

ಒಂದು ಇಡೀ ಗಾಡಿತುಂಬ ವಿಸ್ತೃತ ಗದ್ಯಕ್ಕಿಂತ

ಒಂದು ತಿಳಿಯಾಗಿರುವ ಚರಣ ಹೆಚ್ಚು ಭಾರ ಹೊರಬಲ್ಲದು.

*****



 

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...