ಮೂಲ: The Beginning of Poetry
ಕವಿ: Adonis - Ali Ahmad Said Esber, Syria ಅಡೊನಿಸ್ - ಅಲಿ ಅಹ್ಮದ್ ಸಯಿದ್ ಎಸ್ಬರ್
Translated from the Arabic by Khaled Mattawa
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಕಾವ್ಯಾರಂಭ
ಅತೀ ಉತ್ತಮವಾದ ಇರುವಿಕೆ ಎಂದರೆ
ಒಂದು ಕ್ಷಿತಿಜವಾಗಿರುವುದು.
ಮತ್ತೆ, ಮಿಕ್ಕವರೆಲ್ಲಾ? ಕೆಲವರಿಗೆ ನೀನೊಂದು ಉಲಿ ಎಂದೆನಿಸುತ್ತದೆ
ಉಳಿದವರಿಗೆ ನೀನದರ ಮಾರುಲಿ ಎಂದೆನಿಸುತ್ತದೆ.
ಅತೀ ಉತ್ತಮವಾದ ಇರುವಿಕೆ ಎಂದರೆ
ಬೆಳಕಿಗೆ, ಕತ್ತಲೆಗೆ ಒಂದು ನೆಪವಾಗಿರುವುದು
ಅಲ್ಲಿ ನಿನ್ನ ಕೊನೆಯ ಮಾತುಗಳು ನಿನ್ನ ಮೊದಲ ಮಾತುಗಳಾಗುತ್ತಾವೆ.
ಮತ್ತೆ, ಮಿಕ್ಕವರೆಲ್ಲಾ? ಕೆಲವರು ನಿನ್ನನ್ನು ಸೃಷ್ಟಿಯ ನೊರೆಯಾಗಿ ಕಾಣುತ್ತಾರೆ
ಉಳಿದವರು ನಿನ್ನನ್ನು ಸೃಷ್ಟಿಕರ್ತ ಎಂದುಕೊಳ್ಳುತ್ತಾರೆ.
ಅತೀ ಉತ್ತಮವಾದ ಇರುವಿಕೆ ಎಂದರೆ
ಒಂದು ಗುರಿಯಾಗಿರುವುದು --
ಮೌನ ಮತ್ತು ಪದಗಳ ಮಧ್ಯೆ
ಒಂದು ಸಂಧಿಮಾರ್ಗ.
*****
*****
No comments:
Post a Comment