ಮೂಲ: The Passage
ಕವಿ: Adonis - Ali Ahmad Said Esber, Syria ಅಡೊನಿಸ್ - ಅಲಿ ಅಹ್ಮದ್ ಸಯಿದ್ ಎಸ್ಬರ್
Translated from the Arabic by Samuel Hazo
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಪಯಣ
ನಾನು ಹಿಮದ ಹಾಗೂ ಬೆಂಕಿಯ
ಬಾಳಿನಲ್ಲಿ ಪಾಲ್ಗೊಳ್ಳಲು
ಕೋರಿದೆ.
ಆದರೆ ಹಿಮವಾಗಲಿ ಬೆಂಕಿಯಾಗಲಿ
ನನ್ನನ್ನು ತಮ್ಮೊಳಗೆ ಕರೆದುಕೊಳ್ಳಲಿಲ್ಲ.
ಸುಮ್ಮನಾದೆ ನಾನು.
ಕಾದೆ ಹೂವುಗಳ ಹಾಗೆ,
ನಿಂತೆ ಬಂಡೆಗಳ ಹಾಗೆ.
ಪ್ರೇಮದಲ್ಲಿ ನನ್ನನ್ನು ನಾನೇ
ಕಳೆದುಕೊಂಡೆ.
ಬೇರಾಗಿ ಹೋದೆ ನಾನು
ನೋಡುತ್ತಾ ನಿಂತೆ
ನಾನು ಕಂಡ ಬಾಳಿನ ಕನಸು
ಮತ್ತು
ಬಾಳಿನ ಬದಲಾಗುತ್ತಿರುವ ಕನಸಿನ
ನಡುವೆ
ಅಲೆಯ ಹಾಗೆ ಓಲಾಡಲಾರಂಭಿಸುವ
ತನಕ.
*****
No comments:
Post a Comment