ಮೂಲ: The Key no one Lost
ಕವಿ: ಎಲಿಕುರಾ ಚಿವಾಯ್‌ಲಾಫ಼್ Elicura Chihuailaf, Chile
Translated into English from the original Spanish by John Bierhorst
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಯಾರೂ ಕಳೆಯದ ಬೀಗದಕೈ
ಕಾವ್ಯ ಯಾವ ಕೆಲಸಕ್ಕೂ ಬಾರದು ಅಂತ
ನಾನು ಕೇಳಿದ್ದೇನೆ
ಅಡವಿಯಲ್ಲಿ ಮರಗಳು ತಮ್ಮ ನೀಲಿ ಬೇರುಗಳಿಂದ
ಒಂದನ್ನೊಂದು ಲಾಲಿಸುತ್ತಾ
ತಮ್ಮ ಟೊಂಗೆಗಳನ್ನು ಗಾಳಿಯಲ್ಲಿ ತೂಗಿಸುತ್ತಾ
ಹಕ್ಕಿಗಳ ಜೊತೆಗೂಡಿ
ತ್ರಿಶಂಕುವಿಗೆ* ಹಾಯೆನ್ನುತ್ತಾವೆ.
ಕಾವ್ಯವು
ಕೊಲೆಯಾದವರ ಗಂಭೀರ ಪಿಸುಮಾತು
ಶರತ್ಕಾಲದ ಎಲೆಗಳ ಗಾಳಿಮಾತು
ಆ ಹುಡುಗನ ದುಃಖ
ಭಾಷೆಯ ಕಾಪಾಡುವವ
ಆದರೆ
ಆತ್ಮವ ಕಳಕೊಂಡವ
ಕಾವ್ಯ, ಕಾವ್ಯವೊಂದು ಕೈಮಾತು
ಒಂದು ಕನಸು, ಭೂದೃಶ್ಯವದು ಹುಡುಗೀ
ನಿನ್ನ ಕಣ್ಣುಗಳು ನನ್ನ ಕಣ್ಣುಗಳು
ಕರ್ಣಗಳು, ಹೃದಯಗಳು, ಅದೇ ಸಂಗೀತ
ಇನ್ನು ಹೆಚ್ಚೇನೂ ಹೇಳುವುದಿಲ್ಲ ನಾನು, ಏಕೆಂದರೆ
ಯಾರೂ ಎಂದೂ ಕಂಡು ಹಿಡಿಯಲ್ಲ
ಯಾರೂ ಕಳೆಯದ ಬೀಗದಕೈಯನ್ನು
ಮತ್ತೆ, ಕಾವ್ಯವು ನನ್ನ ಪೂರ್ವಿಕರ ಹಾಡು
ಅದೊಂದು ಶೀತಕಾಲದ ದಿನ
ಅದು ಧಗಧಗಿಸುತ್ತಾ ಈ
ಆತ್ಮೀಯ ಅವಸನ್ನವನ್ನು
ಆರಿಸುತ್ತದೆ
* Trishanku is the corresponding 'Hindu' mythological name of the constellation Southern Cross
*****
No comments:
Post a Comment