ಮೂಲ: Weaving the Morning
ಕವಿ: JOAO CABRAL DE MELO NETO ಜುವಾವ್ ಕಾಬ್ರಾ ಜಿ ಮೆಲು ನೆತು, Brazil
Translated into English from the original Portuguese by Galway Kinnell
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಮುಂಜಾನೆಯ ನೇಯುವುದು
ಒಬ್ಬನೇ ಹುಂಜ ಮುಂಜಾನೆಯೊಂದನ್ನು ನೇಯುವುದಿಲ್ಲ,
ಅವನಿಗೆ ಇತರ ಹುಂಜಗಳ ಅಗತ್ಯ ಇದ್ದೇ ಇರುತ್ತೆ.
ಇಂವ ಬೇರೊಬ್ಬನಿಗೆ ಚಿಮ್ಮಿಸಿದ ಕೂಗನ್ನು ಅವನಿಂದ
ಎತ್ತಿಕೊಳ್ಳಲು; ಇನ್ನೊಂದು ಹುಂಜ ಅವನ ಮೊದಲು ಆ
ಹುಂಜ ಚಿಮ್ಮಿಸಿದ ಕೂಗನ್ನು ಎತ್ತಿಕೊಳ್ಳಲು; ಮತ್ತು ಇತರ
ಹುಂಜಗಳು ಇನ್ನೂ ಹಲವು ಹುಂಜಗಳ ಜತೆ ಸೇರಿ
ತಮ್ಮ ಹುಂಜ-ಕೂಗುಗಳ ಸೂರ್ಯನೂಲುಗಳನು
ಆಚಿಂದೀಚಿಂದಾಚೆ ನೇಯಲಿಕ್ಕೆ,
ಹೇಗೆಂದರೆ, ನಾಜೂಕಾದ ಬಲೆಯಾಗಿ ಹುಟ್ಟಿದ ಈ ಮುಂಜಾನೆ,
ಹೀಗೇ ನೇಯ್ದುಕೊಳ್ಳುತ್ತಾ ಹೋಗಬಹುದು, ಎಲ್ಲ ಹುಂಜಗಳ ಕೂಡಿ.
ಹೀಗೆ, ದೊಡ್ಡದಾಗಿ ಬೆಳೆಯುತ್ತಾ, ಬಟ್ಟೆಯಾಗುತ್ತಾ,
ಡೇರೆಯಂತೆ ನೆಲಕ್ಕೆ ಹೂಡಿಕೊಂಡು, ಅವರೆಲ್ಲರನ್ನೂ ಒಳಕ್ಕೆ
ಕರೆಸಿಕೊಂಡು, ಅವರಿಗೆಲ್ಲರಿಗಾಗಿ ತನ್ನನ್ನೇ ತಾನು
ತೆರೆದುಕೊಂಡು, ಆ ಡೇರೆಯೊಳಗೆ (ಆ ಮುಂಜಾನೆ),
ನಂಟು ಗಂಟುಗಳಿಂದ ಮುಕ್ತವಾಗಿ ಮೇಲಕ್ಕೆ
ಸ್ವಛ್ಚಂದವಾಗಿ ಏರುತ್ತೆ.
ಆ ಮುಂಜಾನೆ, ಎಷ್ಟು ನಾಜೂಕಾದ ನೇಯ್ಗೆಯ
ಡೇರೆಯೆಂದರೆ, ಹೆಣೆದಾಗ, ತನ್ನಿಂದ ತನ್ನನ್ನು ತಾನೆ
ಏರಿಸಿಕೊಳ್ಳುತ್ತೆ: ಬಲೂನಿನಷ್ಟು ಹಗುರ.
*****
No comments:
Post a Comment