ಮೂಲ: My hand that destroys
ಕವಿ: Fernando Pessoa, Portuguese ಫೆರ್ನಾಂಡು ಪೆಸೊವ (writing as Ricardo Reis)
Translated from the Portuguese into English by Richard Zenith
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಇರುವೆಗಳ ಗುಂಪೆಯನ್ನು ನಾಶಿಸುವ ನನ್ನ ಕೈ
ಇರುವೆಗಳ ಗುಂಪೆಯನ್ನು
ನಾಶಿಸುವ ನನ್ನ ಕೈ
ಅವುಗಳಿಗೆ ದಿವ್ಯ ಮೂಲದ್ದು ಅಂತನಿಸಿರಬಹುದು
ಆದರೆ ನಾನು ದಿವ್ಯ ಅಂತ ನಾನಂದುಕೊಳ್ಳುವುದಿಲ್ಲ
ಹಾಗೆಯೇ ದೇವರುಗಳು
ಬಹುಶಃ ತಮ್ಮನ್ನು
ದೇವರುಗಳೆಂದು ನೋಡುವುದಿಲ್ಲ, ನಮ್ಮ ದೃಷ್ಟಿಯಲ್ಲಿ
ದೇವರುಗಳಾಗಿದ್ದಾರೆ ಏಕೆಂದರೆ ನಮಗಿಂತ ದೊಡ್ಡವರೆಂದು ಅಷ್ಟೇ.
ಆ ಮಾತು ಹಾಗಿರಲಿ,
ನಾವು ಯಾವುದೇ ಒಂದು
ಮತಕ್ಕೆ, ಪ್ರಾಯಶಃ ಬುಡವಿಲ್ಲದ, ನಾವು ದೇವರುಗಳೆಂದು
ನಂಬುವವರಲ್ಲಿ ಸಂಪೂರ್ಣವಾಗಿ ನಂಬಿಕೆಯಿಡುವುದು ಬೇಡ.
No comments:
Post a Comment