Friday, April 23, 2021

ಕನಸಿನ ಭಾಷೆ - KANASINA BHASHE - ZBIGNIEW HERBERT'S "DREAM LANGUAGE"

ಕವಿಜ಼್ಬಿಗ್ನಿಎಫ಼್ ಹೆರ್ಬೆರ್ತ್ Zbigniew Herbert, Poland 

ಮೂಲ: DREAM LANGUAGE

Translated from the original Polish by Alissa Valles 

ಕನ್ನಡಕ್ಕೆಎಸ್ ಜಯಶ್ರೀನಿವಾಸ ರಾವ್

 

ಕನಸಿನ ಭಾಷೆ

 

ಮಲಗುವಾಗ ನಾನು

ಎಲ್ಲರಂತೆ

ಬೆಳಕೇರುವ ಮುಂಚೆ

ಕೊಡುತ್ತೇನೆ ಕೀಲಿ ಗಡಿಯಾರಕ್ಕೆ

 

ಮುಳುಗುತ್ತೇನೆ ನಾನು 

ಬಿಳಿ ಹಡಗೊಂದರಲ್ಲಿ

ಒಗೆಯುತ್ತವೆ ಅಲೆಗಳು ನನ್ನನ್ನು

ಬಿಳಿ ಹಡಗಿನಿಂದ

ಹುಡುಕುತ್ತೇನೆ ನಾನು 

ಬೀಗದಕೈಗಳನ್ನು

ಕೊಲ್ಲುತ್ತೇನೆ ನಾನು

ಡ್ರಾಗನ್ನೊಂದನ್ನು

ನಗುತ್ತದೆ ಅದು

ಹಚ್ಚುತ್ತೇನೆ ನಾನು

ದೀಪವೊಂದನ್ನು

ಆದರೆ ಎಲ್ಲಕ್ಕಿಂತ ಮೇಲಾಗಿ

ವಟಗುಟ್ಟುತ್ತೇನೆ ನಾನು

 

ಗುಮಾನಿಯೇನೆಂದರೆ ನನಗೆ

ಕನಸುತ್ತೇವೆ ನಾವು ದೃಶ್ಯಗಳಲ್ಲೆಂದು

ಆದರೆ ಹೆಣೆಯುತ್ತೇನೆ ನಾನು

ಈ ಎಲ್ಲಾ ಚಮತ್ಕಾರಿ ಎಳೆಗಳನ್ನು

ಕಥನಗಳ ದಿಬ್ಬದಲಿ

ಮಲಗಿರುವವನಂತೆ

ಹಾಗೇ ಇರಬೇಕಲ್ಲವಾ 

ಕನಸಿನ ಭಾಷೆ

 

ಒಂದು ಚೊಕ್ಕವಾದ ಭಾಷೆ

ಬಹುದೂರ ಎಟುಕುಳ್ಳಂತದ್ದು

ಹಗುರ

ವ್ಯಾಕರಣವನ್ನು, ಧ್ವನಿನಿಯಮಗಳನ್ನು 

ಉಲ್ಲಂಘಿಸುತ್ತದೆ

ಅಣಕದ ಭಾಷೆ

ನಾನರಿಯದ ಭಾಷೆ

 

ಮಲಗಿದಾಗ ನಾನು

ಬೆಕ್ಕಿನ ಜಾಗದಲ್ಲಿ

ಕಂಚಿನ ದೇಹವನ್ನು

ಇರಿಯುತ್ತದೆ ಕಂಪನವೊಂದು

ನರಳುತ್ತೇವೆ ನಾವು ರಾಗದ ಧಾಟಿಯಲ್ಲಿ

 

ಮಲಗಿದಾಗ ನಾನು

ಬೆಕ್ಕಿನ ಜಾಗದಲ್ಲಿ

ನನ್ನ ದೇಹವನ್ನು ಕೆಲವುಸಲ

ಇರಿಯುತ್ತದೆ ಕಂಪನವೊಂದು

ರಾಗವೊಂದು ನರಳಿನಂತೆ

ಕಿವಿಗೆ ಬೀಳುತ್ತದೆ

 

ಇಂತಹ ಸಮಯಗಳಲ್ಲಿ

ಕನಸಿನ ಭಾಷೆ

ತನನ್ನು ಮುಚ್ಚಿಕೊಳ್ಳುತ್ತದೆ

ಆಯಾಸದಿಂದ 

ಸ್ವತಂತ್ರವಾಗಿ

 

ಶುದ್ಧವಾದ

ಸವಿಭಯದ ಭಾಷೆ 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...