Thursday, April 15, 2021

ನಾನು ಮಾತು ಕೊಟ್ಟೆ - NAANU MAATU KOTTE - ZBIGNIEW HERBERT'S 'I GAVE MY WORD'

ಕವಿಜ಼್ಬಿಗ್ನಿಎಫ಼್ ಹೆರ್ಬೆರ್ತ್ Zbigniew Herbert, Poland 

ಮೂಲ: I GAVE MY WORD

Translated from the original Polish by Alissa Valles 

ಕನ್ನಡಕ್ಕೆಎಸ್ ಜಯಶ್ರೀನಿವಾಸ ರಾವ್

 

ನಾನು ಮಾತು ಕೊಟ್ಟೆ

 

ನಾನು ಚಿಕ್ಕವನಾಗಿದ್ದೆ 

ಲೊಕಜ್ಞಾನ ನನಗೆ ಹೇಳಿದ್ದೇನೆಂದರೆ

ಮಾತು ಕೊಡಬಾರದೆಂದು

 

ನಾನು ಸುಲಭವಾಗಿ ಹೇಳಬಹುದಾಗಿತ್ತು

ಸ್ವಲ್ಪ ಯೋಚಿಸಿ ಹೇಳುತ್ತೇನೆ

ಅವಸರವೇನಿದೆ

ರೈಲು ವೇಳಾಪಟ್ಟಿಯೇನೂ ಅಲ್ಲವಲ್ಲ

 

ನಾನು ಮಾತು ಕೊಡುವೆ

ಡಿಗ್ರಿ ಮುಗಿಸಿದ ನಂತರ

ಮಿಲಿಟ್ರಿ ಸೇವೆ ಮುಗಿಸಿದ ನಂತರ

ಸಂಸಾರ ಹೂಡಿದ ನಂತರ

 

ಆದರೆ ಸಮಯ ಸಿಡಿಯಿತು

ಹಿಂದೂ ಇಲ್ಲದಾಯಿತು

ಮುಂದೂ ಇಲ್ಲದಾಯಿತು

ಕಣ್ಣು ಕುಕ್ಕುವ ಇಂದಿನಲ್ಲಿ

ಆಯ್ಕೆಯೊಂದ ಮಾಡಬೇಕಿತ್ತು

ಎಂದೇ ನಾನು ಮಾತ ಕೊಟ್ಟೆ

 

ಒಂದು ಮಾತು – 

ಅದೊಂದು ಉರುಳು ನನ್ನ ಕತ್ತಿಗೆ

ಒಂದು ಕಡೇ ಮಾತು 

 

ಲ್ಲವೂ ಬೆಳಗಾಗಿ

ತಿಳಿಯಾಗಿರುವ 

ಅಪರೂಪದ ಕ್ಷಣಗಳಲ್ಲಿ

ನಾನು ನನ್ನಲ್ಲೇ ನೆನೆಸುವೆ

ನಾ ಕೊಟ್ಟ ಮಾತು,

ನನ್ನ ಮಾತನ್ನು ತಿರುಗಿ ಪಡೆಯಲು

ಅದೆಷ್ಡು ಹಂಬಲಿಸುವೆ”

 

ದು ಹೆಚ್ಚು ಹೊತ್ತು ಉಳಿಯುವುದಿಲ್ಲ

ಭೂಮಿಯ ಅಕ್ಷ ಚೀರುತ್ತದೆ

ಜನರು ಮಡಿಯುತ್ತಾರೆ

ಹಾಗೆಯೇ ಭೂಚಿತ್ರಗಳು ಕೂಡ

ಸಮಯದ ವರ್ಣಚಕ್ರಗಳು 

ಆದರೆ ನಾ ಕೊಟ್ಟ ಮಾತು

ನನ್ನ ಗಂಟಲಲ್ಲಿ ಸಿಕ್ಕಿಕೊಂಡಿದೆ

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...