ಮೂಲ: I took off the mask and looked in the mirror
ಕವಿ: Fernando Pessoa, Portuguese ಫ಼ನಾಂಡೊ ಪೆಸೊವ
Writing under the ‘heteronym’ Alvaro De Campos
Translated from the Portuguese into English by Richard Zenith
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ನಾನು ಮುಖವಾಡವ ಕಳಚಿ ಕನ್ನಡಿಯಲ್ಲಿ ನೋಡಿದೆ
ನಾನು ಮುಖವಾಡವ ಕಳಚಿ ಕನ್ನಡಿಯಲ್ಲಿ ನೋಡಿದೆ.
ವರುಷಗಳ ಹಿಂದಿನ ಅದೇ ಚಿಕ್ಕ ಹುಡುಗನಾಗಿದ್ದೆ.
ನಾನು ಏನೇನೂ ಬದಲಾಗಿಲ್ಲ ...
ಮುಖವಾಡವ ತೆಗೆಯುವುದು ಹೇಗೆಂದು ತಿಳಿಯುವುದರ ಪ್ರಯೋಜನವಿದು.
ನೀನಿನ್ನೂ ಅದೇ ಚಿಕ್ಕ ಹುಡುಗ,
ಗತವು ನಿನ್ನಲ್ಲಿ ಜೀವಂತವಾಗಿರುವ,
ಆ ಚಿಕ್ಕ ಹುಡುಗ.
ನಾನು ಮುಖವಾಡವ ಕಳಚಿದೆ, ಮತ್ತೆ ಧರಿಸಿದೆ.
ಹೀಗಿರುವುದೇ ಮೇಲು.
ಈ ತರಹ, ನಾನೇ ಮುಖವಾಡ.
ಮತ್ತೆ ನಾನು ಯಥಾಸ್ಥಿತಿಗೆ ಮರಳುವೆ, ಬಸ್ಸು ಕೊನೇನಿಲ್ದಾಣಕ್ಕೆ ಮರಳಿದಂತೆ.
I took off the mask and looked in the mirror
I took off the mask and looked in the mirror.
I was the same child I was years ago.
I hadn’t changed at all . . .
That’s the advantage of knowing how to remove your mask.
You’re still the child,
The past that lives on,
The child.
I took off the mask, and I put it back on.
It’s better this way.
This way I’m the mask.
And I return to normality as to a streetcar terminus.
No comments:
Post a Comment