Sunday, May 30, 2021

ನಾನು ಖುಷಿಯಾಗಿದ್ದೇನಾ ಖಿನ್ನನಾಗಿದ್ದೇನಾ? - NAANU KHUSHIYAGIDDENA KHINNANAGIDDENA? - FERNANDO PESSOA'S 'WHETHER I'M HAPPY OR SAD?'

ಮೂಲ: Whether I’m happy or sad?... 

ಕವಿ: Fernando Pessoa, Portuguese ಫ಼ನಾಂಡೊ ಪೆಸೊವ 

Translated from the Portuguese into English by Richard Zenith

ಕನ್ನಡಕ್ಕೆಎಸ್ ಜಯಶ್ರೀನಿವಾಸ ರಾವ್

 

ನಾನು ಖುಷಿಯಾಗಿದ್ದೇನಾ ಖಿನ್ನನಾಗಿದ್ದೇನಾ? ...

 

ನಾನು ಖುಷಿಯಾಗಿದ್ದೇನಾ ಖಿನ್ನನಾಗಿದ್ದೇನಾ? ... 

ಸತ್ಯವಾಗಲೂ ನನಗೆ ಗೊತ್ತಿಲ್ಲ.

ಖಿನ್ನನಾಗಿರುವುದೆಂದರೆ ಏನದು?

ಖುಷಿಯಿಂದ ಏನುಪಯೋಗ?

 

ನಾನು ಖುಷಿಯಾಗಿಯೂ ಇಲ್ಲ ಖಿನ್ನನಾಗಿಯೂ ಇಲ್ಲ.

ನಾನೇನೆಂದು ನನಗೇ ನಿಜವಾಗಿಯೂ ಗೊತ್ತಿಲ್ಲ.

ಜೀವಿಸುತ್ತಿರುವ ಮತ್ತೊಂದು ಆತ್ಮವಷ್ಟೇ ನಾನು, 

ದೇವರು ವಿಧಿಸಿದ್ದನ್ನು ಅನುಭವಿಸುವವ ನಾನು.

 

ಹಾಗಾದರೆ, ನಾನು ಖುಷಿಯಾಗಿದ್ದೇನೋ ಖಿನ್ನನಾಗಿದ್ದೇನೊ?

ಯೋಚನೆಗೆ ಎಂದೂ ಚಂದದ ಮುಕ್ತಾಯವಿಲ್ಲ... 

ನನ್ನ ಮಟ್ಟಿಗೆ ಖಿನ್ನತೆಯೆಂದರೆ

ನನ್ನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದೇ ಇರುವುದು...

 

ಆದರೆ, ಖುಷಿಯೆಂದರೆ ಅದೇ ತಾನೆ...

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...