Tuesday, July 27, 2021

ಪದಗಳನ್ನ ಕಟ್ಕೊಂಡು ಏನ ಮಾಡೋದು - JULIA HARTWIG'S 'WHAT DO WITH WORDS'

ಮೂಲ: WHAT TO DO WITH WORDS

ಕವಿ: ಯುಲಿಯಾ ಹಾರ್ತ್‌ವಿಗ್  JULIA HARTWIG, Poland


Translated from the Polish into English by JOHN & BOGDANA CARPENTER


ಕನ್ನಡ ಅನುವಾದ: ಸ್. ಜಯಶ್ರೀನಿವಾಸ ರಾವ್

 

ಪದಗಳನ್ನ ಕಟ್ಕೊಂಡು ಏನ ಮಾಡೋದು

 

ಪರೋಕ್ಷದಲ್ಲಿ ವಸ್ತುವಿಲ್ಲದ

ಪದಗಳನ್ನ ಕಟ್ಕೊಂಡು ಏನ ಮಾಡೋದು

ಸ್ಪರ್ಶಕ್ಕಿಲ್ಲ ಸ್ವಾದಕ್ಕಿಲ್ಲ 

ದೃಷ್ಟಿ ನೆಲೆಸಲು ಏನೂ ಇಲ್ಲ

ಮಾನವ ಪ್ರಕೃತಿಗೆ ಸಂಬಂಧವಿಲ್ಲ

 

ಉದಾಹರಣೆಗೆ, ‘ಅನಂತತೆ’ ಎಂಬ ಪದ

ಬರಡಾದ, ಶುದ್ದವಾದ, ತಾರೆಗಳ ಹೊಳಪಿನಂತೆ ತಣ್ಣನೆಯ ಪದ

ಅಂತರ್‌ಗೃಹಗಳ ಆಕಾಶದ ಮರುಭೂಮಿಗೆ ನಮ್ಮನ್ನು ಕೊಂಡೊಯ್ಯುತ್ತೆ

ಗಾಳಿ ಅಳ್ಳಕನಾದ ಕತ್ತಲ ಮರಣಕೂಪಕ್ಕೆ ಕೊಂಡೊಯ್ಯುತ್ತೆ

ನಿರಾಮಿಷ ನಿರ್ಗಂಧ ನಿರ್ವರ್ಣ ಪದ

ಸಾಕುಪ್ರಾಣಿಯೂ ಪಾಲಿಸದಂತಹ ಧ್ವನಿಯ ಪದ

ಅನಂತತೆಗಿಂತ ಗಾಳಿಯೇ ಹೆಚ್ಚು ಗ್ರಾಹ್ಯ

ದೊಡ್ಡ ಸಂಖ್ಯೆಯೊಂದು ಕಡೇಪಕ್ಷ ಎಣಿಸಲು ಬರುವಂತಿರುತ್ತೆ

 

ದರೆ ‘ಅನಂತತೆ’?  

ಅದು ತಲೆಬುರುಡೆಯೊಳು ಲಟಲಟ ಸುತ್ತುತ್ತೆ ಒಮ್ಮೆ ಕರೆಸಿದ ಮೇಲೆ

ಅದನ್ನು ನಿಘಂಟಿನಿಂದ ಅಳಿಸಲಾಗದು ಮ್ಮೆ ಸೃಷ್ಟಿಸಿದ ಮೇಲೆ

ಅನಾಥ ಸ್ವಚ್ಛಂದ ಅಗಾಧ

ನಮ್ಮ ಮರುಳಿಗೆ ಮತ್ತೊಂದು ಪುರಾವೆಯಂತೆ

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...