Tuesday, July 27, 2021

ಗಾಳಿ - JULIA HARTWIG'S 'WINDS'

ಮೂಲ: WINDS

ಕವಿ: ಯುಲಿಯಾ ಹಾರ್ತ್‌ವಿಗ್  JULIA HARTWIG, Poland


Translated from the Polish into English by JOHN & BOGDANA CARPENTER


ಕನ್ನಡ ಅನುವಾದ: ಸ್. ಜಯಶ್ರೀನಿವಾಸ ರಾವ್


ಗಾಳಿ

 

ಗಾಳಿ!  ನಿನ್ನನ್ನು ಹೇಗೆ ನಾನರಿಯುವೆ?

ನಿನ್ನ ದೂತರು ಮಾತ್ರ ನಿನ್ನ ಬಗ್ಗೆ ಹೇಳುವರು

ಮರಗಳ ರೆಂಬೆಗಳು, ನಿನ್ನ ಅಂಗೈಯಡಿಯಲ್ಲಿ ಬಾಗುವ ಹುಲ್ಲುಗಳು

ತೋರಿಸುತ್ತವೆ ಇಲ್ಲಿ! ಇಲ್ಲಿ! ಅವು ತೋರಿಸಿ ಮುಗಿಸಲಿಕ್ಕಿಲ್ಲ 

ನೀನು ಮಾಯ

 

ಅದೃಶ್ಯವಾಗಿದ್ದು ನೀನಾಳುವೆ ದೃಶ್ಯಲೋಕವನ್ನು

ಹಠಾತ್ತಾಗಿ ಬಡಿದ ಜನ್ನಲ ಬಾಗಿಲು

ಅಟ್ಟಿಹೋದ ಮೋಡಗಳ ಮಂದೆಗಳು

ಗಾಳಿಯೊಂದು ಮಾತ್ರವೇ ಮತ್ತೊಂದು ಗಾಳಿಯನು ನೋಯಿಸದೇ ಬೆನ್ನಟ್ಟುತ್ತದೆ

ಮೃದುವಾಗಿ ತಬ್ಬುತ್ತಾ ಅವು ಪ್ರೇಮ, ಸಾವು, ವಿನಾಶವನ್ನು ಬಿತ್ತುತ್ತವೆ

 

ಓ ಗಾಳಿಯ ಕಂದಗಳಿರಾ – ದಕ್ಷಿಣದ ಹೊಳೆಯುವ ಮೊಗದ ಮೇಲೆ 

ನಲಿದಾಡುವ ಕೊಂಕುಕುರುಳಿನ ಮಲೆಗಾಳಿಗಳಿರಾ,

ಬಡಗಣ ಚಳಿಗಾಳಿ, ವಾಣಿಜ್ಯಗಾಳಿ, ವಾಯವ್ಯ ಚಳಿಗಾಳಿ

ಈಗೆಲ್ಲ ಬರೀ ಶರತ್ಕಾಲದ ಹಿಮಬಿರುಗಾಳಿಗಳಷ್ಟೇ

ಮಳೆಯೊಂದಿಗೆ ಬೆರೆತು ಜೋರಾಗಿ ಬೀಸುವ ಚಂಡಮಾರುತಗಳು

ಮತ್ತೆ ತದೇಕವಾಗಿ ನೋಡುವೆವು ಫೋ‌ಟೋ ಆಲ್ಬಮ್ಗಳಲ್ಲಿ 

ಇಟಾಲಿಯನ್ ನಿಸರ್ಗಚಿತ್ರಗಳನ್ನು


***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...