Thursday, July 22, 2021

ಕೊಳದಲ್ಲೊಂದು ನಿಬ್ಬು - KOLADALLONDU NIBBU - NIYI OSUNDARE'S 'A NIB IN THE POND'

ಮೂಲ: A NIB IN THE POND

ಕವಿ: ನೀಯೀ ಓಶುಂಡಾರೆ, ನೈಜೀರಿಯಾ – NIYI OSUNDARE, NIGERIA

ಕನ್ನಡ ಅನುವಾದ: ಎಸ. ಜಯಶ್ರೀನಿವಾಸ ರಾವ್

 

ಕೊಳದಲ್ಲೊಂದು ನಿಬ್ಬು

 

ಭೂಮಿಯನ್ನು ಬಗೆದು ತೆರೆದ

ನೀ ಬರೆದ ಸಾಲುಗಳನ್ನು ಓದುವೆವು

ಪಥಗಳ ಪುಸ್ತಕದಂತೆ

ಸಾವಿರ ಋತುಗಳ ಮೇಣವನ್ನು ಕರಗಿಸಿದ

ನಿನ್ನ ದನಿಯ ಕೇಳುವೆವು

 

ಮೌನದ ಕೊಳದಲ್ಲಿ 

ನಿಬ್ಬನ್ನು ಎಸೆದವನೇ

ನಿನ್ನ ಮಸಿಕುಡಿಕೆಯಲ್ಲೆದ್ದ ಅಲೆಗಳು

ಸಿಪಾಯಿಚಾಳುಗಳನ್ನು ಪ್ರಬಲವೇಶ್ಯಾಖಾನೆಗಳನ್ನು ದಂಗುಬಡಿಸುತ್ತೆ

ಲೂಟಿಯ ಸಂಚುಗಳನ್ನು ಬುಡಮೇಲಾಗಿಸುತ್ತೆ

ಬಿದ್ದಿದೆ ನೋಡು ಲೆಕ್ಕಾಚಾರದ ಮಗ್ಗಿಪಟ್ಟಿಕೆಯ ಮೇಲೆ

ವಿಷದ ಬಟ್ಟಲಿನಂತೆ

 

ನಾವು ನಿನ್ನ ಕವಿತೆಯ ಹಾಡುವೆವು

ಹಾಗೂ ನಮ್ಮ ದನಿಯ ಕೇಳುವೆವು

ಪದಗಳನ್ನು ಓದುವೆವು

ಹಾಗೂ ಪ್ರತಿ ಅಕ್ಷರದ ಕನ್ನಡಿಯಲ್ಲಿ 

ನಮ್ಮನ್ನು ನಾವೇ ನೋಡುವೆವು

 

ಗ, ಕೈಗಳು ಎರಡಿದ್ದಾಗ್ಯೂ

ಯಾವುದು ಕುಂಡೆ ತೊಳೆಯುವುದೆಂದು ಗೊತ್ತಿದೆ ನಮಗೆ

ರಸ್ತೆ ಕವಲೊಡೆದಿದೆಯಾದರೂ 

ಮನೆಗೆ ಹತ್ತಿರದ ದಾರಿಯಾವುದೆಂದು ಗೊತ್ತಿದೆ ನಮಗೆ

 

***** 



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...