Wednesday, July 7, 2021

ಒಂದಾನೊಂದು ದಿನ - ONDANONDU DINA - PIOTR SOMMER'S 'ONE DAY'

ಮೂಲONE DAY

ಕವಿಪ್ಯೋತ್ರ್ ಸಾಮರ್ಪೋಲಂಡ್ – PIOTR SOMMER, Poland

Translated from the Polish into English by Halina Janod and Michael Kasper

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ಒಂದಾನೊಂದು ದಿನ

 

ಒಂದಾನೊಂದು ದಿನ ನಾನು ಈ ಲೋಕದ ಕದವ ತೆರೆಯುವೆ

ಕಾಲಿಡುವೆ ಒಳಗೆ ಮರಳಿ ಬಂದಂತೆ ಮನೆಗೆ.

ನನ್ನ ಬಾಯಿಂದ, ಹೃದಯದಿಂದ ಹೊರಬರುವ ಸ್ವರಕ್ಕಾಗಿ,

ಅಥವಾ ಯಾವುದೇ ಪದಕ್ಕಾಗಿ ನಾ ಸಂಕೋಚಪಡಲಾರೆ.

 

ಕೇಳುವೆ ನಾ ಲೋಕಕ್ಕೆ ಲೆಕ್ಕವ – 

ಕೇಳುವೆ ನಾನಿಲ್ಲಿ ಇಲ್ಲದಾಗಿನ 

ವೇಳೆಯ ವರದಿಯ.

ನಾನನ್ನುವೆ: “ಲೋಕವೇ, ಹೇಳು ನನಗೆ

ಏನಿತ್ತು, ನಾನಿಲ್ಲದಾಗ?”

 

ಆಮೇಲೆ, ಮತ್ತೆ ನಾನನ್ನುವೆ:

“ಕ್ಷಮಿಸು ನನ್ನನ್ನು, ಲೋಕವೇ,

ಇಲ್ಲಿ ತನಕ ನಾ ಕಾಯುತ್ತಿದ್ದೆ ಸೂಕ್ತ ರೈಲುಗಾಡಿಗಾಗಿ,

ನನ್ನೆದೆಯ ರೈಲೆಂಜಿನಿನ ಪಿಸುದನಿಗಾಗಿ,

 

ನೋಡು, ಹೀಗಿರುವೆ ನಾನು, ಲೋಕವೇ,  

ತುಸು ಬದಲಾಗಿರಬಹುದು,

ವ್ಯಂಗ್ಯವೆಲ್ಲವ ತೊರೆದು

ಹಾಗೂ ಗಂಭೀರತೆ ಹೆಚ್ಚಾಗಿರಬಹುದು.”

 

ನಾನಿಲ್ಲಿಗೇ ನಿಲ್ಲಿಸುವುದು ಒಳ್ಳೆಯದು ಅಂತನಿಸುತ್ತದೆ – 

ನನ್ನ ಮೂಳೆಗಳಲ್ಲಿ ನಾ ಆಯಾಸವ ಅನುಭವಿಸುವೆ,

ಲೋಕದ ಮುಖದಲ್ಲಿ ಪ್ರೀತಿಯ ನೋಡುವೆ,

ಸ್ವಲ್ಪಮಟ್ಟಿಗೆ ಪದಗಳಿಗಾಗಿ ಪರದಾಡುವೆ;


*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...