Tuesday, August 31, 2021

ಮೂಲಭೂತ ಬಿಕ್ಕಟ್ಟುಗಳು MOOLABHOOTA BIKKATTUGALU - JULIAN KORNHAUSER'S 'FUNDAMENTAL DIFFICULTIES'

ಮೂಲ: FUNDAMENTAL DIFFICULTIES

ಕವಿ: ಯೂಲ್ಯನ್ ಕೋನ್‌ಹಾವ್ಸ(ರ್), ಪೋಲಂಡ್ JULIAN KORNHAUSER, POLAND

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಮೂಲಭೂತ ಬಿಕ್ಕಟ್ಟುಗಳು

 

ಕವನವೆಂದರೇನು ಸರಳ ಯೋಚನೆಯೊಂದಕ್ಕೆ ತೊಟ್ಟಿಲು

ಕಾಣದ ಗುಡ್ಡದ ಮೇಲೆ ಹಳದಿ ಬಣ್ಣದ ಕೋಟೆಮನೆ 

ಗಾಳಿ ಎಗರಿಸಿಕೊಂಡ ಮಾಸಿದ ಕಾಗದದ ಹಾಳೆ

ಕವನವೆಂದರೇನು ನೆನಪಿನ ರಬ್ಬರ್ ಸ್ಟಾಂಪ್

ಶಸ್ತ್ರಾಗಾರದ ನಕಾಶೆ ಅವಸರದ ಉಸಿರು

ಅವಿವೇಕಿ ಕ್ಷಣವೊಂದರ ಮಿನುಗು

ನಿಜವಾಗಿಯೂ ಗೊತ್ತಿಲ್ಲ ನನಗೆ 

ಗೊತ್ತಿಲ್ಲ ನನಗೆ ಕವನಗಳು ಇನ್ನೂ ಅಜೀವವೇ ಎಂದು

ಜೀವಿಸಲು ಸಹಾಯ ಮಾಡುತ್ತಾವೆಯೇ ಎಂದು


***** 



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...