ಸಣ್ಣ ಕವನಗಳು
LITTLE POEMS
ಕವಿ: ರಿಶಾರ್ಡ ಕ್ರಿನಿತ್‌ಸ್ಕಿ, ಪೋಲಂಡ್ RYSZARD KRYNICKI, Poland
Translated from the Polish into English by ALYSSA VALLES
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಬುದ್ಧ, ಏಸು
ಬುದ್ಧನೇ, ಏಸುವೇ,
ವ್ಯರ್ಥವೇ ನೀವು ಅಡಗಿರುವಿರಿ
ಇಷ್ಟೊಂದು ಅವತಾರಗಳಲ್ಲಿ
ಹೃದಯದಂತೆ
ಅವಸರವಸರದ ಓಟ ಎತ್ತ ಕಡೆ, ನನ್ನ ಬಡಪಾಯಿ ಹೃದಯವೇ,
ನೀನಿನ್ನೂ ನಿನ್ನದೇ ಅವತಾರದ ಹುಡುಕಾಟದಲ್ಲಿದ್ದಂತೆ
ಮೋಡಗಳು
ಮೋಡಗಳು ನಮ್ಮ ಮೇಲೆ ತೇಲಿಕೊಂಡು ಹೋಗುತ್ತಿರುತ್ತವೆ –
ಗೋಚರವಾಗಿ ಅಗೋಚರವಾಗಿ,
ಏನ ಕಂಡರೂ ಯಾರ ಕಂಡರೂ
ಅವು ಅಚ್ಚರಿಗೊಳ್ಳುವುದಿಲ್ಲ
ಪದಗಳು ಇವೆ ಕೆಲವು
ಪದಗಳು ಇವೆ ಕೆಲವು, ಅವು ನಮ್ಮ ಬಾಯಿಗಳಲ್ಲಿ ಹುಚ್ಚಾಬಟ್ಟೆ ಹಬ್ಬಿ,
ನನ್ನಿಂದಾಗದು ನಿನ್ನ ಸಹಾಯ
ಪಾಪದ ಪತಂಗವೇ, ನನ್ನಿಂದಾಗದು ನಿನ್ನ ಸಹಾಯ,
ದಿಪವ ಆರಿಸಬಲ್ಲೆನಷ್ಟೇ.
I Can’t Help You
Poor moth, I can’t help you,
I can only turn out the light.
No comments:
Post a Comment