Friday, August 20, 2021

ಊರಿಂದಾಚೆ - OORINDAACHE - PIOTR SOMMER'S 'OUT OF TOWN'

ಮೂಲOUT OF TOWN

ಕವಿಪ್ಯೋತ್ರ್ ಸಾಮರ್ಪೋಲಂಡ್ – PIOTR SOMMER, Poland

Translated from the Polish into English by JAROSLAW ANDERS and W. MARTIN

ಕನ್ನಡ ಅನುವಾದಸ್ ಜಯಶ್ರೀನಿವಾಸ ರಾವ್

 

ಊರಿಂದಾಚೆ

 

ಇಷ್ಟು ವರುಷಗಳ ನಂತರ, ನೀರು ಈಗಲೂ ಸೋರುತ್ತದೆ – 

ವಾಲ್ವ್‌ನ್ನು ಬಿಗಿಯಲು ಯಾರೂ ಇಲ್ಲ.

ಹಳೆಯ ಪೈಪುಗಳ ಮೂಲಕ ಹರಿಯುತ್ತದೆ

ಕೆಳಗೆ ಸೆಪ್ಟಿಕ್ ಟ್ಯಾಂಕ್ ವರೆಗೂ.

 

ಮರುದಿನ ಬೆಳಗ್ಗೆ ಸೆಲ್ಲಾರಿನಲ್ಲಿ

ಮೋಟರ್‌ನ್ನು ಒಂದು ಕೋಲಿನಿಂದ ಚಲಾಯಿಸುವೆ.

ಅದು ಅಲ್ಲಾಡುತ್ತೆ, ಗುಡುಗುಡುತ್ತೆ, ಚಿಲಿಪಿಲಿಸುತ್ತೆ – 

ಸ್ವಿಚ್ಚು ಒಡೆದು ಹೋಗಿದೆ ಅಷ್ಟೇ.

 

ರಾತ್ರಿಯಲಿ ನೀರು ಗಮಿಸುತ್ತೆ

ಅಕ್ರಮವಾಗಿ, ಭೂಗತವಾಗಿ,

ಅದೇ ಕುಳಿಯಲ್ಲಿಗೆ 

ಕಳೆದ ವಸಂತದಲ್ಲಿ 

ಕೊತ್ತಂಬರಿ ಮೋಳಕೆಬಿಟ್ಟಲ್ಲಿಗೆ.

 

ಮತ್ತೆ ಬುಡದಲ್ಲಿ, ಅದರ ಪಕ್ಕದಲ್ಲಿ,

ಹುಲುಸಾಗಿ ಬೆಳೆದ,  ಕರ್ರಗಾಗುತ್ತಿರುವ ಪುಲ್ಲಂಪುರುಚಿ 

ರುಚಿರುಚಿಯಾಗಿ, ಹುಳ್ಳಹುಳ್ಳಗೆ,

 ಗುಪ್ತ ಸಂಭೋಗದಂತೆ.

 

ಮೋಟರ್ ಹುರಿದುಂಬಿಸುತ್ತದೆ

ರಾತ್ರಿ ಕಳೆದದ್ದನ್ನು ಹಿಂದಿರುಗಿಸುತ್ತದೆ.

ಬೆಳಗಾಗಿದೆ, ನಾನು ಮೆತ್ತಗೆ ಹಾಡುವೆ – 

ಅಪರಿಚಿತನೊಬ್ಬ ನನ್ನ ಸ್ಥಾನಕ್ಕೆ ಬರುವನು.

 

ಸೆಲ್ಲಾರಿನಲ್ಲಿ ಬೆಳಕಿನ ಹೊನಲೊಂದು

ಜನ್ನಲಿನ ಸರಳುಗಳನ್ನು ತೊಳೆಯುತ್ತದೆ,

ಅದು ಕಂಪಿಸುತ್ತದೆ, ಮೀಟರ್‌ನ್ನು ಬಡಿಯುತ್ತದೆ – 

ಮೆಟ್ಟಲೇರುತ್ತಾ ನಾನು ನನ್ನ ಲಯವನ್ನು ಹಿಡಿಯುವೆ.

 

ಮತ್ತೆ, ನೆನಪಿಗಿರಲಿಯಂತ ಹಾಡುವೆ – 

ಸಪ್ಟಿಕ್ ಟ್ಯಾಂಕಿನ ಪಕ್ಕದಿಂದ ಹಾದಾಗ – 

ಒಂದು ಸರಾಗ ಹರಿಯುವ, ನೆಲದಡಿಯ ಹಾಡು

ಪುಲ್ಲಂಪುರುಚಿ ಹಾಗೂ ಅಪರಿಚಿತನೊಬ್ಬನ ಕುರಿತ ಹಾಡು.

 

*****


  

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...