Friday, September 3, 2021

ಅದೇನೇ ಆದರೂ ಪುಸ್ತಕಗಳು ADE:NE: AADARU: PUSTAKAGALU - CZESŁAW MIŁOSZ's "AND YET THE BOOKS"

ಮೂಲ: AND YET THE BOOKS

ಕವಿಚೆಸ್‌ವಾಫ಼್ ಮಿವಾಶ್, ಪೋಲಂಡ್ CZESŁAW MIŁOSZ, Poland

Translated from the original Polish by Czesław Miłosz and Robert Hass

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಅದೇನೇ ಆದರೂ ಪುಸ್ತಕಗಳು

 

ಅದೇನೇ ಆದರೂ ಪುಸ್ತಕಗಳು ಶೆಲ್ಫುಗಳ್ಳಲೇ ಇರುತ್ತಾವೆ, ತನೀ ಜೀವಿಗಳು,

ಕಾಣಿಸಿಕೊಂಡವು ಒಮ್ಮೆ ಅವು, ಶರತ್ಕಾಲದಲ್ಲಿ ಮರದಡಿಯಲ್ಲಿ, 

ಹೊಳೆಯುವ ಚೆಸ್ಟ್‌ನಟ್‌ಗಳಂತೆ ಇನ್ನೂ ಒದ್ದೆಯಾಗಿಯೇ ಇದ್ದವು,

ತಡವಿದಾಗ, ಲಾಲಿಸಿದಾಗ, ಜೀವ ಬಂತು ಅವಕ್ಕೆ,

ಬಾನಂಚಿನ ಬೆಂಕಿಗಳು, ಸಿಡಿದೊಡೆದ ಕೋಟೆಮನೆಗಳು,

ಭರನಡಿಗೆಯಲ್ಲಿರುವ ಕುಲಗಳು, ತಿರುಗುತ್ತಿರುವ ಗೃಹಗಳು,

ವುಗಳೆಲ್ಲದರ ಹೊರತಾಗಿಯೂ ಜೀವ ಬಂತು ಅವಕ್ಕೆ.

“ನಾವು ಇದ್ದೇವೆ,” ಎಂದಂದವು ಅವು, 

ಅವುಗಳ ಹಾಳೆಗಳನ್ನು ಹರಿದೆಸೆಯುತ್ತಿದ್ದಾಗ, 

ಝೇಂಕರಿಸುವ ಜ್ವಾಲೆಯೊಂದು 

ಅವುಗಳ ಅಕ್ಷರಗಳನ್ನು ನೆಕ್ಕುತ್ತಿದ್ದಾಗ.  

ನಮಗಿಂತ ಅದೆಷ್ಟೋ ಬಾಳಿಕೆ ಉಳ್ಳವು ಅವು,

ನಮ್ಮ ದುರ್ಬಲ ಉಷ್ಣತೆ ನೆನಪನ್ನು ತಣ್ಣಗಾಗಿಸುತ್ತೆ, ಚದುರಿಸುತ್ತೆ, ನಾಶಿಸುತ್ತೆ.

ನಾನಿಲ್ಲದಿರುವಾಗಿನ ಭೂಮಿಯನ್ನು ಮನದಲ್ಲಿ ಚಿತ್ರಿಸಿಕೊಳ್ಳುವೆ:

ಏನೂ ಆಗುತ್ತಿಲ್ಲ, ನಷ್ಟವೂ ಇಲ್ಲ, ಒಂದು ವಿಚಿತ್ರ ಪ್ರದರ್ಶನವೇ ಎಂದೂ,

ಹೆಣ್ಣುಗಳ ಉಡುಪುಗಳು, ಇಬ್ಬನಿ ಹನಿದ ನೀಲಕಗಳು, ಕಣಿವೆಯಲ್ಲಿಯ ಹಾಡೊಂದು,

ಅದೇನೇ ಆದರೂ ಪುಸ್ತಕಗಳು ಶೆಲ್ಫುಗಳ್ಳಲೇ ಇರುತ್ತಾವೆ, 

ಸದ್‌ಜನ್ಮ ಪಡೆದ, ಮನುಜರಿಂದ, ಅಲ್ಲದೇ ಕಾಂತಿಯಿಂದಲೂ, 

ಶಿಖರಗಳಿಂದಲೂ ಸಹ ವ್ಯುತ್ಪನ್ನವಾದ ಪುಸ್ತಕಗಳು. 


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...