ಮೂಲ: WHILE BUILDING THE BARRICADE
ಕವಿ: ಆನ್ನಾ ಶ್ವೆರ್ಶಚಿನ್ಸ್‌ಕಾ, ಪೋಲಂಡ್ ANNA SWIRSZCZYNSKA, POLAND
Translated from the Polish into English by CZESLAW MILOSZ AND LEONARD NATHAN
ತಡೆಗಟ್ಟನ್ನು ಏರಿಸುತ್ತಿದ್ದಾಗ
ಹೆದರಿದ್ದೆವು ನಾವು ತಡೆಗಟ್ಟನ್ನು ಏರಿಸುತ್ತಿದ್ದಾಗ
ಗುಂಡಿನ ಸುರಿಮಳೆಯ ಮಧ್ಯೆ
ಶರಾಬಿನಂಗಡಿಯಂವ, ರತ್ನಗಾರನ ಪ್ರೇಯಸಿ, ಕ್ಷೌರಿಕ
ಹೇಡಿಗಳು ನಾವೆಲ್ಲರೂ
ಮನೆಗೆಲಸದಾಕೆ ನೆಲಕ್ಕೆ ಬಿದ್ದಳು
ಹಾಸುಗಲ್ಲೊಂದನ್ನು ಎತ್ತೆಳೆಯುವಾಗ,
ಬಹಳವೇ ಹೆದರಿದ್ದೆವು ನಾವೆಲ್ಲರೂ
ಹೇಡಿಗಳು ನಾವೆಲ್ಲರೂ
ಪಾರುಪತ್ಯಗಾರ, ಅಂಗಡಿಯವಳು, ಪಿಂಚಣಿದಾರ
ಔಷದಿಯಂಗಡಿಯಂವ ನೆಲಕ್ಕೆ ಬಿದ್ದ
ಶೌಚಾಲಯದ ಬಾಗಿಲನ್ನು ಜಗ್ಗುತ್ತ ಎಳೆಯುವಾಗ
ನಾವು ಇನ್ನೂ ಹೆದರಿದೆವು, ಕಳ್ಳಸಾಗಣೆಯವಳು
ಟೆಯ್ಲರು, ಟ್ರಾಮ್ ಡ್ರೈವರು,
ಹೇಡಿಗಳು ನಾವೆಲ್ಲರೂ
ಸುಧಾರಣಾ ಶಾಲೆಯ ಹುಡುಗನೊಬ್ಬ ಕೆಳಬಿದ್ದ
ಮಣ್ಣಿನಚೀಲವೊಂದನ್ನು ಎಳೆಯುವಾಗ,
ನಾವು ನಿಜಕ್ಕೂ ಹೆದರಿದ್ದೆವು ನೋಡಿ
ಯಾರೂ ನಮ್ಮನ್ನು ಬಲವಂತಮಾಡಲಿಲ್ಲವಾದರೂ
ನಾವು ತಡೆಗಟ್ಟನ್ನು ಏರಿಸಿದೆವು
ಗುಂಡಿನ ಸುರಿಮಳೆಯ ಮಧ್ಯೆ
No comments:
Post a Comment