Friday, September 24, 2021

ಮಕ್ಕಳು MAKKALU - JULIAN KORNHAUSER'S 'CHILDREN'

ಮೂಲCHILDREN

ಕವಿಯೂಲ್ಯನ್ ಕೋನ್ಹಾವ್ಸ(ರ್), ಪೋಲಂಡ್ JULIAN KORNHAUSER, POLAND

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಮಕ್ಕಳು

 

ನಮಗಿಂತ ಜಾಣರು

ಎಲ್ಲಾ ಗೊತ್ತಿದೆ

ನಿಲ್ಲದರಲ್ಲೂ ಹಣ್ಣಿನ ಬಣ್ಣವಿದ್ದಂತೆ ಕಾಣಿಸುತ್ತೆ ಅವರಿಗೆ

ನಮಗೆ ಕಾಣಿಸದ ಮಲೆಗಳು ನೋಡುತ್ತಾರೆ

ಏನೂ ಕೇಳಿಸದಿದ್ದಾಗ ಕಡಲು ಅಪ್ಪಳಿಸುತ್ತೆ

ಅವರ ಓರೆಕೋರೆ ಹಲ್ಲುಗಳೆಡೆಯಿಂದ 

ಯಾರಿಗೂ ಗೊತ್ತಿಲ್ಲದ ಪದಗಳು ಜಾರುತ್ತವೆ

ಕೊಳಕು ಉಗುರುಗಳಿಡಿಯಲ್ಲಿ ಭಯ ಮತ್ತು

ವರ್ಣಿಸಲಾಗದ ಸಾಹಸವೊಂದರ ಹೊಂಚು ಹುದುಗಿದೆ

ಅವರು ಓಡುವಾಗ

ಅವರ ಕಾಲಳತೆಮೀರಿದ ಚಪ್ಪಲಿಗಳು ಪಟಪಟಿಸುತ್ತವೆ

ಮತ್ತವರ ಕೂದಲು ಗಾಳಿಗೆ ನಿಮಿರಿರುತ್ತೆ

ಅವರು ಸುಮ್ಮನಿದ್ದಾಗ

ಅವರ ಕಂಗಳು ಅದೆಷ್ಟೋ ಪ್ರಾಯದ ಬಯಕೆಗಳನ್ನು ವ್ಯಕ್ತಪಡಿಸುತ್ತವೆ

ಅವರು ತುದಿಗಾಲಲ್ಲಿ ನಿಲ್ಲುವರು

ನಿಶಿದ್ಧವಾದದ್ದನ್ನು ಎಟುಕಲು

ಅವರು ಗುದ್ದಾಡುವರು ಕಟ್ಟಲೆಗಳೊಂದಿಗೆ

ತಮಾಷೆ ಮತ್ತು ಭಯದ ಮಧ್ಯೆ ಇರುವ

ಭೇದವನ್ನರಿಯಲು

ಕೆಲವೊಮ್ಮೆ ಅವರು ಶಾಂತವಾಗಿ ನೆಲದಲ್ಲಿ ಅಡ್ಡಾಗಿರುತ್ತಾರೆ

ವಿಚಿತ್ರ ಮಾಟಗಳನ್ನೊದರುತ್ತಿರುತ್ತಾರೆ

ಆಗ ಮೆಜಿನ ಮೇಲಿಂದ ಗಾಜಿನ ಲೋಟವೊಂದು ಕೆಳಬೀಳುತ್ತೆ

ಅವಕಾಶವೊಂದು ತಲೆಯೆತ್ತುತ್ತೆ

ಬಿಳಿ ಗೋಡೆಯ ಮೇಲೆ ಬಣ್ಣದ ಕಡ್ಡಿಯೊಂದು ಮೆಲ್ಲನೆ ಚಲಿಸಲಾರಂಭಿಸುತ್ತದೆ

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...