ಮೂಲ: ENCOUNTER
ಕವಿ: ಚೆಸ್ವಾಫ಼್ ಮಿವಾಶ್, ಪೋಲಂಡ್; Czesław Miłosz, Poland
Translated from the original Polish by Czesław Miłosz and Lillian Vallee
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಮುಖಾಮುಖಿ
ಪಯಣಿಸುತ್ತಿದ್ದೆವು ನಾವು ನಸುಕಿನಲಿ ಹಿಮಗಟ್ಟಿದ ಬಯಲುಗಳ ಮೇಲೆ ಬಂಡಿಯಲಿ.
ರೆಡ್‌ವಿಂಗ್ ಹಕ್ಕಿಯೊಂದು ಹಾರಿತು ಮೇಲಕೆ ಕತ್ತಲೆಯಲಿ.
ಅಚಾನಕ್ಕಾಗಿ ಮೊಲವೊಂದು ಧಾವಿಸಿತು ರಸ್ತೆಗೆ ಅಡ್ಡನೆ.
ಕೈತೋರಿಸಿದ ನಮ್ಮಲ್ಲೊಬ್ಬ ಅದರ ಕಡೆ.
ಬಹು ಕಾಲದ ಹಿಂದಿನ ಮಾತದು. ಇಂದು ಅವರೀರ್ವರೂ ಬದುಕಿಲ್ಲ,
ಮೊಲವೂ ಇಲ್ಲ, ಕೈತೋರಿಸಿದವನೂ ಇಲ್ಲ.
ಓ ಪ್ರಿಯೇ, ಎಲ್ಲಿದ್ದಾರವರು, ಎಲ್ಲಿ ಹೋಗುತ್ತಿದ್ದಾರವರು,
ಆ ಕೈಬೀಸಿನ ಝಳಪು, ಆ ಮಿಂಚಿನ ಓಟ, ಬೆಣಚುಕಲ್ಲುಗಳ ಮರ್ಮರ.
ಕೊರಗಿನಿಂದ ಕೇಳುತ್ತಿಲ್ಲ ನಾನು, ಬೆರಗಿನಿಂದ.
*****
No comments:
Post a Comment