ಮೂಲ: PRECIPICE
ಕವಿ: ಏವಾ ಲೀಪ್ಸ್‌ಕ, ಪೋಲಂಡ್; EWA LIPSKA, Poland
Translated from the Polish into English by RYSZARD REISNER
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಪ್ರಪಾತ
ಮೃತರು ಯಾವಾಗಲೂ
ತಪ್ಪು ಸಮಯದಲ್ಲಿ
ಭೇಟಿ ಕೊಡುತ್ತಾರೆ.
ನಾವು ಸಿನಿಮಾ ನೋಡಲು ಹೊರಡುತ್ತಿರಬೇಕಾದರೆ.
ಡಿಸ್ಕೋತೆಕ್‌ಗೆ ಹೊರಡುತ್ತಿರಬೇಕಾದರೆ.
ಸೂಪರ್‌ಮಾರ್ಕೆಟ್‌ಗೆ ಹೊರಡುತ್ತಿರಬೇಕಾದರೆ.
ಮತ್ತೆ ಅವರು ತಮ್ಮ ಜತೆ ತರುತ್ತಾರೆ
ಗೋಡೆಗಳ ತುಂಡುಗಳನ್ನು.
ತಗಡಿನ ತುಣುಕುಗಳನ್ನು.
ನೋಯಿಸುವ ಮುಳ್ಳು ತಂತಿಯಲ್ಲಿ ಸುತ್ತಿ.
ಮತ್ತೆ ಅವರು ಚಿಂತಿತ ದನಿಯಲ್ಲಿ ಹೇಳುತ್ತಾರೆ:
“ಮೃತ್ಯುವೆಂಬುದು ಜೀವನವೇ ಅಲ್ವಾ... “
ಆದರೆ ಏನು ಮಾಡಲಿಕ್ಕಾಗುತ್ತೆ?
ನಾವು ನಮ್ಮ ಕೋಟುಗಳನ್ನು ಕಳಚಿ ನೇತುಹಾಕುತ್ತೇವೆ.
ಕಾಫಿ ಮಾಡುತ್ತೇವೆ.
ಬೋರ್ಬನ್ ವಿಸ್ಕಿಯ ಬಾಟಲೊಂದನ್ನು
ತೆರೆದು ಇಬ್ಬರೂ ನೋಡುತ್ತೇವೆ
ನೇರ
ಪ್ರಪಾತದೊಳಕ್ಕೆ.
*****
No comments:
Post a Comment